ಸುರಪುರ: ಜಾಗೃತಿ ಸಮಾಜ ಸೇವಾ ಸಂಘದ ವತಿಯಿಂದ ನಗರದ ತಾಲೂಕು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಇದೇ ತಿಂಗಳು ೨೮ ರಂದು ಕಳೆದ ವರ್ಷಗಳಲ್ಲಿ ನಮ್ಮನ್ನ ಅಗಲಿದ ಚೇತನರಾದ, ಬಸವರಾಜ ರುಮಾಲ, ರಾಜಾ ಮದನಗೋಪಾಲ ನಾಯಕ,ಎ.ಕೃಷ್ಣಾ ಅರಳಿಗಿಡ,ಅಪ್ಪಣ್ಣ ಚಿನ್ನಾಕಾರ,ಕೆ.ವೀರಪ್ಪ,ಕಾಶಿನಾಥ ಬಣಗಾರ,ಲಕ್ಷ್ಮೀಕಾಂತ ಏವೂರ, ಈ ಎಲ್ಲಾ ಮಹನಿಯರುಗಳ ದಿವ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಲ್ಲದೆ ಇದೇ ಸಂದರ್ಭದಲ್ಲಿ ಸಾಹಿತಿ ಈಶ್ವರ ಶಹಾಪೂರಕರ್ ಅವರ ನೂರೊಂದು ನೆನಪು ಹೃದಯಾಳದಿಂದ ಕೃತಿ ಲೋಕಾರ್ಪಣೆಯೂ ಜನರುಗಲಿದೆ ಹಾಗೂ ಸಾಹಿತಿ ನಬಿಲಾಲ ಮಕಾಂದಾರ,ಪ್ರಕಾಶ ಚಂದ ಜೈನ್,ಪ್ರಕಾಶ ಅಂಗಡಿ ಕನ್ನೆಳ್ಳಿ,ಪತ್ರಕರ್ತ ಸಿದ್ದಯ್ಯ ಪಾಟೀಲ್,ಶ್ರೀಹರಿರಾವ್ ಆದವಾನಿ,ನಿಂಗನಗೌ ದೇಸಾಯಿ,ವೆಂಕಟೇಶ ಕುಲಕರ್ಣಿ,ಪೊಲೀಸ್ ಪೇದೆ ದಯಾನಂದ ಜಮಾದಾರ್,ನಾಟಕಕಾರ ಮಲ್ಲೇಶಿ ಕೋನಾಳ,ಕಾಳಪ್ಪ ಪತ್ತಾರ,ಅಶೋಕ ಕೆ.ಹಾಗೂ ರಾಜೇಶ ಶಾಬಾದಿ ಇರುಗಳಿಗೆ ಸಗರನಾಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ವಹಿಸಲಿದ್ದು,ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕಲಬುರ್ಗಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ,ಹೈಕೋರ್ಟ್ ನ್ಯಾಂiiವಾದಿ ಜೆ.ಅಗಸ್ಟಿನ್,ರಾಜಾ ಹರ್ಷವರ್ಧನ ನಾಯಕ,ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ಕಸಾಪ ಅಧ್ಯಕ್ಷ ಶರಣಬಸಪ್ಪ ಯಳವಾರ,ಹಿರಿಯ ಪತ್ರಕರ್ತ ಸುಭಾಸ ಬಣಗಾರ,ಕೆಂಭಾವಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಇನ್ನೂ ಅನೇಕ ಮುಖಂಡರು ಗೌರವ ಉಪಸ್ಥಿತರಾಗಿರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ ಜಮದ್ರಖಾನಿ,ಶ್ರೀನಿವಾಸ ಜಾಲವಾದಿ,ದೊಡ್ಡಮಲ್ಲಿಕಾರ್ಜುನ ಉದ್ದಾರ,ಎ.ಕಮಲಾಕರ,ಗಂಗಾಧರ ರುಮಾಲ,ಚಂದ್ರಕಾಂತ ಮಾರ್ಗಲ್,ಪ್ರಕಾಶ ಬಣಗಾರ,ಸಜನಕುಮಾರ ಕಲ್ಯಾಣಶೆಟ್ಟಿ,ಸೈಯದ್ ಕಮರುದ್ದಿನ್,ಈಶ್ವರ ಶಹಾಪೂರಕರ್ ಸೇರಿದಂತೆ ಇತರರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…