ಬಿಸಿ ಬಿಸಿ ಸುದ್ದಿ

ಎಲೆವಿಟ್ ಕಲ್ಯಾಣ ಕರ್ನಾಟಕದ ಉದ್ಯಮಶೀಲತೆ ನಾವಿನ್ಯತೆ ಬೂಟ್‌ಕ್ಯಾಂಪ್ ಕಾರ್ಯಾಗಾರ

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ (ಕೆಡಿಇಎಂ) ನ ಸಹಯೋಗದಲ್ಲಿ ಒಂದು ದಿನದ ವಿಶೇಷ ಕಾರ್ಯಾಗಾರ ಜರುಗಿತು.

ಕಾರ್ಯಕ್ರಮದ ಘನ ಅಧ್ಯಕ್ಷತೆ ಕಾಲೇಜಿನ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್. ನಿಷ್ಠಿ ವಹಿಸಿ ಮಾತನಾಡಿದ, ಎಲಿವೆಟ್ ಕಲ್ಯಾಣ ಕರ್ನಾಟಕ ಕಾರ್ಯಕ್ರಮವು ಸಮಾಜದಲ್ಲಿ ತಳಮಟ್ಟದ ಉದ್ಯಮಗಳನ್ನು ಶೋಧಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದಾದ್ಯಂತ ಕೌಶಲ್ಯ ಅಭಿವೃದ್ಧಿ ಉದ್ಯೋಗ ಸೃಷ್ಟಿ ಉದ್ಯಮಶೀಲತೆ ಪ್ರಾರಂಭ ಮತ್ತು ಯುವ ಬಡ ಪ್ರತಿಭಾವಂತರಿಗೆ ವರದಾನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಗೌರವ್ ಕೆ. ಪಂಜಾಬಿ ಮಾತನಾಡಿ, ಕೆ.ಡಿ.ಇ.ಎಂ ನ ಉಪಕ್ರಮ ಮತ್ತು ಆಧುನಿಕ ಜಗತ್ತಿನಲ್ಲಿ ಕೌಶಲ್ಯ ಅಭಿವೃದ್ದಿ ಆಯಾಮಗಳು ಯಾವುವು ಎಂಬುವುದನ್ನು ವಿವರಿಸಿದರು. ಹಾಗೂ ಕೆ.ಡಿ.ಇ.ಎಂ ಕರ್ನಾಟಕ ಪ್ರದೇಶದ ಹಲವಾರು ಇಂಜಿನೀಯರಿಂಗ ಕಾಲೇಜಿನ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಸ್ಟಾರ್ಟ ಅಪ್ ಪರಿಸರ ವ್ಯವಸ್ಥೆ ನಿರ್ಮಿಸಲು ಸಾಕಷ್ಠು ಅವಕಾಶಗಳನ್ನು ನೀಡಿದೆ ಎಂದರು.

ಉಪಸ್ಥಿತಿ ವಹಿಸಿದ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿ ಮಾತನಾಡಿ,ಈ ಕಾರ್ಯಕ್ರಮವನ್ನು ಯಾದಗಿರ ಜಿಲ್ಲೆಯಲ್ಲಿ ನೇರವೆರಲು ಸಹಕರಿಸಿದ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಐಟಿ. ಬಿಟಿ ಮತ್ತ್ತು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ. ಆಶ್ವತ್ ನಾರಾಯಣ ರವರನ್ನು ಮತ್ತು ಸುರಪುರ ಶಾಸಕರಾದ ನರಸಿಂಹನಾಯಕ ರಾಜುಗೌಡ ಶಾಸಕರು ಸುರಪುರ ಹಾಗೂ ಸಹಕರಿಸಿದ ಎಲ್ಲಾ ಅಧಿಕಾರಿ ವೃಂದದವರನ್ನು ಕಾರ್ಯಕ್ರಮಾಧಿಕಾರಿ ಡಾ. ಸಂಧ್ಯಾ ಅನ್ವೇಕರ್ ಅವರಿಗೆ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಹಾಗೂ ಕಾರ್ಯಕ್ರಮಾಧಿಕಾರಿಯಾದ ಡಾ. ಸಂಧ್ಯಾ ಅನ್ವೇಕರ್,ಅವಿನಾಷ್ ಬಿ. ಎನ್ ಕಾರ್ಯನಿರ್ವಾಹಕ ನಿರ್ದೇಶಕರು, ಸ್ಟಾರ್ಟ ಅಪ್ ಕರ್ನಾಟಕ ರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ೨೫೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಶರಣಬಸಪ್ಪ ಸಾಲಿರವರು ಸ್ವಾಗತಿಸಿದರು. ಮತ್ತು ಪ್ರೋ. ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು.

emedialine

Recent Posts

ಇ.ಪಿ.ಎಫ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ: ಕನ್ನಡ ನಮ್ಮ ಹೃದಯದ ಭಾಷೆ – ಗುಂಡಣ್ಣ ಡಿಗ್ಗಿ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ…

1 min ago

ಕೆ. ನೀಲಾ ಸಿಪಿಐ(ಎಂ) ಪಕ್ಷದ ಕಲಬುರಗಿ ಕಾರ್ಯದರ್ಶಿಯಾಗಿ ಪುನರಾಯ್ಕೆ

ಕಲಬುರಗಿ: ಸಿಪಿಐ(ಎಂ) ಪಕ್ಷವು ನವೆಂಬರ್ 24,25 ನವೆಂಬರ್ ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ನಡೆದು ಜಿಲ್ಲಾ ಕಾರ್ಯದರ್ಶಿಯಾಗಿ…

5 mins ago

3 ಲಕ್ಷ ವೆಚ್ಚದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ ಚಾಲನೆ

ಕಲಬುರಗಿ: ಜಯನಗರ ಬಡಾವಣೆಯ ಹಳೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗಾಗಿ ಕಲಬುರಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಇವರ…

9 mins ago

ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…

13 mins ago

ಸೇಡಂ ಮತಕ್ಷೇತ್ರದಲ್ಲಿ ನಡೆದ 4 ಗ್ರಾ.ಪಂ ಉಪಚುನಾವಣೆ ಬಿಜೆಪಿ ಗೆಲುವು

ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂ‌‌ನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು‌ ಜಯ…

19 mins ago

ವಾಡಿ: ಬಿಜೆಪಿ ಕಛೇರಿಯಲ್ಲಿ 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…

23 mins ago