ಸುರಪುರ: ಕರ್ನಾಟಕ ಸರಕಾರ ದಿಂದ ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ಪಡೆದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರಿಗೆ ಇಲ್ಲಿಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಪ್ರಶಸ್ತಿ ಪುರಸ್ಕೃತ ಟಿಹೆಚ್‌ಓ ಡಾ:ಆರ್.ವಿ ನಾಯಕ ಮಾತನಾಡಿ,ಸರಕಾರ ಇಂದು ಪ್ರಶಸ್ತಿಯನ್ನು ನೀಡಿದೆ ಎಂದರೆ ಅದು ಕೇವಲ ನನ್ನೊಬ್ಬನಿಂದ ಬಂದಿದ್ದಲ್ಲ ಕೊರೊನಾ ಸಂದರ್ಭದಲ್ಲಿ ಅವಿರತ ಕಾರ್ಯನಿರ್ವಹಿಸಲು ನೆರವು ನೀಡಿದ ಕ್ಷೇತ್ರದ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರ ಸಹಕಾರವೂ ತುಂಬಾ ಇದೆ ಜೊತೆಗೆ ನಮ್ಮ ಇಲಾಖೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಅಂಗನವಾಡಿ,ಆಶಾ ಕಾರ್ಯಕರ್ತೆಯರ ಶ್ರಮವೂ ಇದೆ ಜೊತೆಗೆ ಮಾದ್ಯಗಳು ಸಹಕಾರ ನೀಡಿರುವುದರ ಫಲವಾಗಿ ಲಭಿಸಿದೆ ಎಂದರು.ಅಂದು ನಮ್ಮ ಕುಟುಂಬದ ಒಟ್ಟು ೭ ಜನರು ಕೊರೊನಾ ಸೊಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾಗ ಶಾಸಕರಾದ ರಾಜುಗೌಡ,ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಅನೇಕರು ಆರೋಗ್ಯವನ್ನು ನಿರಂತರವಾಗಿ ವಿಚಾರಿಸುತ್ತಿದ್ದರು ಎಂದು ಸ್ಮರಿಸಿದರು.
ಅಲ್ಲದೆ ಸರಕಾರ ಒಟ್ಟು ಐದು ಸಾವಿರ ಜನ ವೈದ್ಯರಲ್ಲಿ ೧೫೦ ಜನರನ್ನು ಗುರುತಿಸಿ ಪ್ರಶಸ್ತಿ ನೀಡಿದೆ,ಇದರಿಂದ ನಮ್ಮ ಜವಬ್ದಾರಿ ಇನ್ನಷ್ಟು ಹೆಚ್ಚಿದೆ.ಆದ್ದರಿಂದ ತಾವೆಲ್ಲರೂ ಮುಂದೆಯೂ ಎಂದಿನಂತೆ ಸಹಕಾರ ನೀಡುವ ಮೂಲಕ ತಾಲೂಕಿನಲ್ಲಿ ಉತ್ತಮ ಸೇವೆ ಮಾಡಲು ಸಹಕಾರ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಗಿರೀಶ ಶಾಬಾದಿ ಸೇರಿದಂತೆ ಅನೇಕ ಜನ ಪತ್ರಕರ್ತರು ಮಾತನಾಡಿ,ಡಾ:ಆರ್.ವಿ ನಾಯಕ ಅವರು ತಾಲೂಕು ಆರೋಗ್ಯಾಧಿಕಾರಿಗಳಾದ ಮೇಲೆ ಅನೇಕ ಸುಧಾರಣೆಗಳಾಗಿವೆ,ಅಲ್ಲದೆ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅವರು ಕಾರ್ಯನಿರ್ವಹಿಸಿದ ರೀತಿ ಅನನ್ಯವಾಗಿದೆ.ಸ್ವತಃ ತಮಗೇ ಕೊರೊನಾ ಸೊಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಇಲ್ಲಿಯ ಜನರ ಆರೋಗ್ಯದ ಕುರಿತು ಸದಾಕಾಲ ಗಮನಹರಿಸುತ್ತಿದ್ದರು.ಕೋವಿಡ್ ಸಂದರ್ಭದಲ್ಲಿ ಮಾತ್ರವಲ್ಲದೆ ಇನ್ನುಳಿದ ಸಂದರ್ಭದಲ್ಲೂ ಯಾರೇ ಆರೋಗ್ಯ ಇಲಾಖೆಯ ಸಹಕಾರ ಕೇಳಿದಲ್ಲಿ ತಕ್ಷಣಕ್ಕೆ ಸ್ಪಂದಿಸುತ್ತಿದ್ದರು.ಆದ್ದರಿಂದ ಅವರ ಶ್ರಮವನ್ನು ಗುರುತಿಸಿ ಸರಕಾರ ಇಂದು ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ನೀಡಿದೆ,ಡಾ;ಆರ್.ವಿ ನಾಯಕ ಅವರಿಗೆ ಪ್ರಶಸ್ತಿ ದೊರಕಿದ್ದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಡಾ:ಆರ್.ವಿ ನಾಯಕ ಅವರ ಹಿತೈಷಿಗಳಾದ ಹೊನ್ನಪ್ಪ ತಳವಾರ,ವೆಂಕಟೇಶ ಚಟ್ನಳ್ಳಿ,ಮಲ್ಲು ವಿಷ್ಣು ಸೇನಾ ಅವರು ಕೂಡ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆರೊಗ್ಯ ಇಲಾಖೆಯ ಸಿಬ್ಬಂದಿ ಸಂಗಣ್ಣ ಚೆಟ್ಟಿ ಹಾಗೂ ಪತ್ರಕರ್ತರಾದ ಮಲ್ಲು ಗುಳಗಿ,ಹೊನ್ನಪ್ಪ ತೇಲ್ಕರ್,ಕಲೀಂ ಫರೀದಿ,ರಾಜು ಕುಂಬಾರ,ಶ್ರಿಕರಭಟ್ ಜೋಷಿ,ವಿರೇಶರಡ್ಡಿ ಯಾಳಗಿ,ಮಹಾದೇವಪ್ಪ ಬೊಮ್ಮನಹಳ್ಳಿ,ಪರಶುರಾಮ ಮಲ್ಲಿಬಾವಿ,ರಾಘವೇಂದ್ರ ಮಾಸ್ತರ,ಶ್ರೀಮಂತ ಚಲುವಾದಿ,ಮದನಲಾಲ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…