ಸರಕಾರ ನೀಡಿರುವ ಪ್ರಶಸ್ತಿ ನಮ್ಮೆಲ್ಲ ತಂಡಕ್ಕೆ ಸಲ್ಲುತ್ತದೆ-ಡಾ:ಆರ್.ವಿ ನಾಯಕ

0
23
  • ಪ್ರಶಸ್ತಿ ಪುರಸ್ಕೃತ ಡಾ:ಆರ್.ವಿ ನಾಯಕಗೆ ಪತ್ರಕರ್ತರ ಸಂಘ ಸನ್ಮಾನ

ಸುರಪುರ: ಕರ್ನಾಟಕ ಸರಕಾರ ದಿಂದ ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ಪಡೆದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರಿಗೆ ಇಲ್ಲಿಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಪ್ರಶಸ್ತಿ ಪುರಸ್ಕೃತ ಟಿಹೆಚ್‌ಓ ಡಾ:ಆರ್.ವಿ ನಾಯಕ ಮಾತನಾಡಿ,ಸರಕಾರ ಇಂದು ಪ್ರಶಸ್ತಿಯನ್ನು ನೀಡಿದೆ ಎಂದರೆ ಅದು ಕೇವಲ ನನ್ನೊಬ್ಬನಿಂದ ಬಂದಿದ್ದಲ್ಲ ಕೊರೊನಾ ಸಂದರ್ಭದಲ್ಲಿ ಅವಿರತ ಕಾರ್ಯನಿರ್ವಹಿಸಲು ನೆರವು ನೀಡಿದ ಕ್ಷೇತ್ರದ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರ ಸಹಕಾರವೂ ತುಂಬಾ ಇದೆ ಜೊತೆಗೆ ನಮ್ಮ ಇಲಾಖೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಅಂಗನವಾಡಿ,ಆಶಾ ಕಾರ್ಯಕರ್ತೆಯರ ಶ್ರಮವೂ ಇದೆ ಜೊತೆಗೆ ಮಾದ್ಯಗಳು ಸಹಕಾರ ನೀಡಿರುವುದರ ಫಲವಾಗಿ ಲಭಿಸಿದೆ ಎಂದರು.ಅಂದು ನಮ್ಮ ಕುಟುಂಬದ ಒಟ್ಟು ೭ ಜನರು ಕೊರೊನಾ ಸೊಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾಗ ಶಾಸಕರಾದ ರಾಜುಗೌಡ,ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಅನೇಕರು ಆರೋಗ್ಯವನ್ನು ನಿರಂತರವಾಗಿ ವಿಚಾರಿಸುತ್ತಿದ್ದರು ಎಂದು ಸ್ಮರಿಸಿದರು.

Contact Your\'s Advertisement; 9902492681

ಅಲ್ಲದೆ ಸರಕಾರ ಒಟ್ಟು ಐದು ಸಾವಿರ ಜನ ವೈದ್ಯರಲ್ಲಿ ೧೫೦ ಜನರನ್ನು ಗುರುತಿಸಿ ಪ್ರಶಸ್ತಿ ನೀಡಿದೆ,ಇದರಿಂದ ನಮ್ಮ ಜವಬ್ದಾರಿ ಇನ್ನಷ್ಟು ಹೆಚ್ಚಿದೆ.ಆದ್ದರಿಂದ ತಾವೆಲ್ಲರೂ ಮುಂದೆಯೂ ಎಂದಿನಂತೆ ಸಹಕಾರ ನೀಡುವ ಮೂಲಕ ತಾಲೂಕಿನಲ್ಲಿ ಉತ್ತಮ ಸೇವೆ ಮಾಡಲು ಸಹಕಾರ ನೀಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಗಿರೀಶ ಶಾಬಾದಿ ಸೇರಿದಂತೆ ಅನೇಕ ಜನ ಪತ್ರಕರ್ತರು ಮಾತನಾಡಿ,ಡಾ:ಆರ್.ವಿ ನಾಯಕ ಅವರು ತಾಲೂಕು ಆರೋಗ್ಯಾಧಿಕಾರಿಗಳಾದ ಮೇಲೆ ಅನೇಕ ಸುಧಾರಣೆಗಳಾಗಿವೆ,ಅಲ್ಲದೆ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅವರು ಕಾರ್ಯನಿರ್ವಹಿಸಿದ ರೀತಿ ಅನನ್ಯವಾಗಿದೆ.ಸ್ವತಃ ತಮಗೇ ಕೊರೊನಾ ಸೊಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಇಲ್ಲಿಯ ಜನರ ಆರೋಗ್ಯದ ಕುರಿತು ಸದಾಕಾಲ ಗಮನಹರಿಸುತ್ತಿದ್ದರು.ಕೋವಿಡ್ ಸಂದರ್ಭದಲ್ಲಿ ಮಾತ್ರವಲ್ಲದೆ ಇನ್ನುಳಿದ ಸಂದರ್ಭದಲ್ಲೂ ಯಾರೇ ಆರೋಗ್ಯ ಇಲಾಖೆಯ ಸಹಕಾರ ಕೇಳಿದಲ್ಲಿ ತಕ್ಷಣಕ್ಕೆ ಸ್ಪಂದಿಸುತ್ತಿದ್ದರು.ಆದ್ದರಿಂದ ಅವರ ಶ್ರಮವನ್ನು ಗುರುತಿಸಿ ಸರಕಾರ ಇಂದು ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ನೀಡಿದೆ,ಡಾ;ಆರ್.ವಿ ನಾಯಕ ಅವರಿಗೆ ಪ್ರಶಸ್ತಿ ದೊರಕಿದ್ದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಡಾ:ಆರ್.ವಿ ನಾಯಕ ಅವರ ಹಿತೈಷಿಗಳಾದ ಹೊನ್ನಪ್ಪ ತಳವಾರ,ವೆಂಕಟೇಶ ಚಟ್ನಳ್ಳಿ,ಮಲ್ಲು ವಿಷ್ಣು ಸೇನಾ ಅವರು ಕೂಡ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಆರೊಗ್ಯ ಇಲಾಖೆಯ ಸಿಬ್ಬಂದಿ ಸಂಗಣ್ಣ ಚೆಟ್ಟಿ ಹಾಗೂ ಪತ್ರಕರ್ತರಾದ ಮಲ್ಲು ಗುಳಗಿ,ಹೊನ್ನಪ್ಪ ತೇಲ್ಕರ್,ಕಲೀಂ ಫರೀದಿ,ರಾಜು ಕುಂಬಾರ,ಶ್ರಿಕರಭಟ್ ಜೋಷಿ,ವಿರೇಶರಡ್ಡಿ ಯಾಳಗಿ,ಮಹಾದೇವಪ್ಪ ಬೊಮ್ಮನಹಳ್ಳಿ,ಪರಶುರಾಮ ಮಲ್ಲಿಬಾವಿ,ರಾಘವೇಂದ್ರ ಮಾಸ್ತರ,ಶ್ರೀಮಂತ ಚಲುವಾದಿ,ಮದನಲಾಲ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here