ಬಿಸಿ ಬಿಸಿ ಸುದ್ದಿ

ಆಧುನಿಕತೆಯಲ್ಲಿ ಬದುಕು ವ್ಯಾಪಾರಿಕಣ: ಶಿವಾನಂದ ಅಣಜಗಿ

ಕಲಬುರಗಿ: ತಂತ್ರಜ್ಞಾನದ ಆಧುನಿಕತೆಯಲ್ಲಿ ಬದುಕು ವ್ಯಾಪಾರಿಕಣವಾಗಿದೆ. ಮಾನಸಿಕವಾಗಿ ಸಾಂಸ್ಕೃತಿಕವಾಗಿ ಗುಲಾಮರಾಗಿದ್ದೇವೆ ಎಂದು ಹಾಲಹಳ್ಳಿ ಸ್ನಾತಕೋತ್ತರ ಪದವಿ ಕೇಂದ್ರದ ಪ್ರಾಧ್ಯಾಪಕರಾದ ಶಿವಾನಂದ ಅಣಜಗಿ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕಲಬುರಗಿ ಸಮಾಜಕಾರ್ಯ ಅಧ್ಯಾಯನ ಮತ್ತು ಸಂಶೋಧನೆ ವಿಭಾಗ ಮುಖ್ಯ ಆವರಣ ಕಲಬುರಗಿ ಹಾಗೂ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿ ಕೆ ಬೀದರ ಇವರ ಜಂಟಿ ಆಶ್ರಯದಲ್ಲಿ ಕಲಬುರಗಿ ತಾಲ್ಲೂಕಿನ ವೆಂಕಟ ಬೇನೂರ ಗ್ರಾಮದಲ್ಲಿ ಏಳು ದಿನಗಳ ಕಾಲ ನಡೆಯುವ ಸಮಾಜ ಕಾರ್ಯ ಶಿಬಿರದಲ್ಲಿ ನಡೆದ ಆರನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಂತ್ರಜ್ಞಾನದ ಭರಾಟೆಗೆ ಗ್ರಾಮೀಣ ಪ್ರದೇಶದ ಜನರ ನೆಮ್ಮದಿ ಹಾಳಾಗಿದೆ.

ಅಂದು ಹಳ್ಳಿಗಳಲ್ಲಿ ಬಿಸೋ ಪದ, ಜಾನಪದ ಗೀತೆ ಹಾಡುತ್ತಿದ್ದರು ಆದರೆ ಅವುಗಳು ಇಂದು ಗೌಣವಾಗುತ್ತಿದೆ ಸಮಾಜದಲ್ಲಿ ಪರಿವರ್ತನೆ ತರಲು ಒಬ್ಬ ಸಮಾಜ ಕಾರ್ಯಕರ್ತನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಯಲ್ಲಾಲಿಂಗ ಕಾಳನೂರ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಸಂಕಷ್ಟಗಳು ಬರುತ್ತವೆ ಅವನ್ನು ಧೈರ್ಯದಿಂದಿ ಮೇಟ್ಟಿ ನಿಂತಾಗ ಮಾತ್ರ ಉತ್ತಮವಾಗಿ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಶಾಂತಕುಮಾರ ಚಿದ್ರಿ, ಡಾ. ಜಾಧವ, ಗುರುಲಿಂಗಯ್ಯ ಸ್ವಾಮಿ, ಯುವರಾಜ ಕಟ್ಟಿಮನಿ, ಡಾ. ಪ್ರದೀಪ ಕಡೂನ, ಶ್ರೀಮತಿ ವಿಣಾ ಎಸ್. ಬೆಳಂಗಿ ಸೇರಿದಂತೆ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

emedialine

Recent Posts

ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಿದ ಮಣ್ಣೆತ್ತಿನ ಸ್ಪರ್ಧೆ

ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು…

3 hours ago

ವಾಡಿ: ಕುಸ್ತಿ ಪಂದ್ಯಾವಳಿ: 50ಗ್ರಾಂ.ಬೆಳ್ಳಿ ಕಡಗ ವಿಜೇತ ಮಂಜುನಾಥ

ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್…

3 hours ago

ಹಿರಿಯ ನಾಗರಿಕರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಅಗತ್ಯ: ಅರ್ಥಶಾಸ್ತ್ರಜ್ಞ ವಿಜಯ್ ದೇಶಮುಖ್

ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು…

5 hours ago

ಪ್ರಣವ್ ಮೆಂಡನ್ ಫಿಸಿಯೋಥೆರಪಿ ಪದವಿ ಪ್ರದಾನ

ಕಲಬುರಗಿ : ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಅವರ…

5 hours ago

ಕನ್ನಡ ಸಾಹಿತ್ಯಕ್ಕೆ ಕಮಲ ಹಂಪನಾ ಕೊಡುಗೆ ಅಪಾರ: ಹಣಮಂತ್ರಾಯ ಕಾಳನೂರ

ಯಾದಗಿರಿ : ಆಧುನಿಕ ಸಾಹಿತ್ಯದ ಪ್ರಕಾರಗಳಾದ ನವ್ಯ,ನವೋದಯ,ಪ್ರಗತಿಶೀಲ,ದಲಿತ ಬಂಡಾಯದ ಕಾವ್ಯ,ಕಥೆ,ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ…

6 hours ago

ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ: ಜುಲೈ 7ರಂದು

ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…

11 hours ago