ಸೆಪ್ಟೆಂಬರ್ 11ಕ್ಕೆ ಅವ್ವ ಪ್ರಶಸ್ತಿ ಪ್ರದಾನ

0
32

ಕಲಬುರಗಿ : ಡೊಂಗರಗಾoವ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ವತಿಯಿಂದ ನೀಡಲ್ಪಡುವ “ಅವ್ವ ಪ್ರಶಸ್ತಿ “ಪ್ರದಾನ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭವನ್ನು ಸೆಪ್ಟೆಂಬರ 11 ರಂದು ರಂಗಾಯಣ ಸಭಾಂಗಣದಲ್ಲಿ ಬೆಳಿಗ್ಗೆ 10.45 ಕ್ಕೆ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೆಪುರಂ ಜಿ.ವೆಂಕಟೇಶ ಅವರು 6ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಲಿದ್ದು,ಡಾ. ಶರಣಬಸಪ್ಪ ವಡ್ಡನಕೇರಿ ಅವರು ರಚಿಸಿದ ಏಳು ಪುಸ್ತಕಗಳನ್ನು ಸಿದ್ದಲಿಂಗೇಶ್ವರ ಪ್ರಕಾಶನದ ಮಾಲಿಕರಾದ  ಬಸವರಾಜ ಕೊನೇಕ ಅವರು ಬಿಡುಗಡೆಗೊಳಿಸಲಿದ್ದಾರೆ.

Contact Your\'s Advertisement; 9902492681

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ,ನೀರಾವರಿ ಇಲಾಖೆಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಕೆ. ವೀರಣ್ಣ ಅವರು ಭಾಗವಹಿಸಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ವಹಿಸಿಕೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಡಾ. ಎಚ್. ಟಿ ಪೋತೆ, ಸಿದ್ದರಾಮ ಹೊನಕಲ್, ಡಾ.ಸತೀಶ ಕುಮಾರ ಹೊಸಮನಿ, ಡಾ. ವಿಜಯ ಕುಮಾರಿ ಕರಿಕಲ್, ಸಿದ್ದಪ್ಪ ತಳ್ಳಳ್ಳಿ, ಹಾಗೂ ಶಶಿಕಲಾ ಮಾಲಿ ಪಾಟೀಲ ಅವರಿಗೆ “ಅವ್ವ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ಎಂದು ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಸಂಚಾಲಕ ಡಾ. ನಾಗಪ್ಪ ಗೋಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here