ಸುರಪುರ:ತಾಲೂಕು ಪಂಚಾಯಿತಿ ಮುಂದಿನ ಧರಣಿ ಅಂತ್ಯ

ಸುರಪುರ: ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದ ಮುಂದೆ ಕಳೆದ ಐದು ದಿನಗಳಿಂದ ನಡೆದ ತಾಲೂಕಿನ ಆಲ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಧ್ಯಕ್ಷ ಮತ್ತು ಸದಸ್ಯರು ನಡೆಸಿದ ಧರಣಿ ಅಂತ್ಯಗೊಳಿಸಲಾಗಿದೆ.

ಗ್ರಾಮ ಪಂಚಾಯಿತಿಗೆ ಸರಕಾರ ದಿಂದ ಬಂದಿದ್ದ ೧೫ನೇ ಹಣಕಾಸು ಯೋಜನೆಯ ೧೩ ಲಕ್ಷ ೩೦ ಸಾವಿರದ ೧೦೦ ರೂಪಾಯಿ ಹಣ ವಂಚಿಸಿದ್ದಾರೆ ಎಂದು ಆರೋಪಿಸಿ ಕಳೆದ ಐದು ದಿನಗಳಿಂದ ಧರಣಿ ನಡೆಸಿದ್ದರು.ಶುಕ್ರವಾರ ಸಂಜೆ ಧರಣಿ ಅಂತ್ಯಗೊಳಿಸಿ ಮಾತನಾಡಿದ ಮುಖಂಡರು,ನಮ್ಮ ಗ್ರಾಮ ಪಂಚಾಯಿತಿಯ ಅನುದಾನ ದುರಪಯೋಗ ಮಾಡಿಕೊಂಡ ಹಣವನ್ನು ಅಭಿವೃಧ್ಧಿ ಅಧಿಕಾರಿಯವರು ಮರಳಿ ಪಂಚಾಯಿತಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.ಅಲ್ಲದೆ ಪಿಡಿಓ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.ಆದ್ದರಿಂದ ನಮ್ಮ ಬಹುತೇಕ ಭೇಡಿಕೆಗಳು ಈಡೇರಿದ್ದರಿಂದ ಧರಣಿಯನ್ನು ಅಂತ್ಯಗೊಳಿಸುತ್ತಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಆಲ್ದಾಳ ಗ್ರಾಮ ಪಂಚಾಯಿತಿಯ ಅನುದಾನದ ಹಣ ದುರಪಯೋಗ ಮಾಡಿಕೊಂಡಿದ್ದರ ಕುರಿತು ಸಮಗ್ರ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಮನವಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವರ್ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಶ್ರೀನಿವಾಸ ದೋರನಹಳ್ಳಿ,ಉಪಾಧ್ಯಕ್ಷೆ ನರಸಮ್ಮ ಹಣಮಂತ್ರಾಯ ಕಟ್ಟಿಮನಿ,ಮುಖಂಡರಾದ ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮದ ಅನೇಕರು ಭಾಗವಹಿಸಿದ್ದರು.

emedialine

Recent Posts

ಸುರಪುರ:ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ

ಸುರಪುರ: ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ…

2 mins ago

ಕೃಷಿ ಇಲಾಖೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

ಸುರಪುರ: ನಮ್ಮ ಸರಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜೊರಿಗೊಳಿಸಿದ್ದು ರೈತರು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ಶಾಸಕ…

3 mins ago

ವಿದ್ಯಾರ್ಥಿನಿಯರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಸೈಕಲ್‍ ವಿತರಣೆ

ಕಲಬುರಗಿ: ನಗರದ ಎನ್.ವಿ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಂಗಣದಲ್ಲಿ ಎನ್.ವಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ಗುಲಬರ್ಗ ನಾರ್ಥವತಿಯಿಂದ ವಿದ್ಯಾರ್ಥಿನಿಯರಿಗೆ…

10 mins ago

ಕಲಬುರಗಿಯಲ್ಲಿ ರೈತರ ಜಿಲ್ಲಾ ಸಮಾವೇಶ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ರೈತ ಸಮಾವೇಶವನ್ನು ಸಂಘದ…

12 mins ago

ಪ್ರಶಾಂತ ಡಿ ಜಾನಕರ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ದಾವಣಗೆರೆಯಲ್ಲಿ ನಡೆದ ಸಿ.ಬಿ.ಎಸ್.ಇ ಕ್ಲಸ್ಟರ 8ನೇ ಎಥ್ಲೇಟಿಕ್ ಮೀಟ್ 2024-25 ರಾಜ್ಯ ಮಟ್ಟದ 200 ಮಿಟರ್ ಓಟದ ಸ್ಪರ್ಧೆಯಲ್ಲಿ…

15 mins ago

ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿಗೆ ಬಿಳ್ಕೊಡುಗೆ

ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…

20 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420