ಬಿಸಿ ಬಿಸಿ ಸುದ್ದಿ

ಕಥಾ ಸಮಯ ವಾರ್ಷಿಕ ಕಥಾ ಸ್ಪರ್ಧೆಗೆ ಆಹ್ವಾನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಆನೇಕಲ್ ಘಟಕ, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನ ಜಂಟಿಯಾಗಿ ಕಥಾ ಸಮಯ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸಿದೆ.

ಮೊದಲ ಮೂರು ಅತ್ಯುತ್ತಮ ಕತೆಗೆ ತಲಾ 10,000/- ಸಾವಿರ ಬಹುಮಾನ ನೀಡಲಾಗುತ್ತದೆ ಹಾಗಗೂ ಆಯ್ಕೆಯಾದ 20 ಕತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯಮಗಳು: ಪ್ರಪಂಚದ ಯಾವುದೇ ಭಾಗದಿಂದ 45 ವರ್ಷದೊಳಗಿನವರು ಮಾತ್ರ ಕತೆ ಕಳಿಸಬಹುದು, ಸ್ಪರ್ಧೆಗೆ ಕಳಿಸುವ ಕತೆ ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು, ಬಹುಮಾನಿತ ಕತೆಗಳು ಸೇರಿದಂತೆ ಮೊದಲ 20 ಕತೆಗಳ ಯಾವುದೇ ಮಾಧ್ಯಮದಲ್ಲಿ ಪ್ರಕಟಿಸುವ ಹಕ್ಕು ಸ್ಪರ್ಧೆಯ ಅಯೋಜಕರದಾಗಿರುತ್ತದೆ, ಕತೆ ನುಡಿ ತಂತ್ರಾಂಶದಲ್ಲಿ ಇರಬೇಕು, ಕಥೆಗೆ ಪದಗಳ ಮಿತಿ ಇಲ್ಲ, ಸ್ಪರ್ಧೆಗೆ ಕಳಿಸುವ ಕತೆಗಳ ಜೊತೆಗೆ ಪ್ರತ್ಯೇಕ ಪುಟದಲ್ಲಿ ನಿಮ್ಮ ಭಾವಚಿತ್ರದೊಂದಿಗೆ ಪರಿಚಯ ಕತೆಗಳು ನಮಗೆ ತಲುಪಲು ಕಡೆಯ ದಿನಾಂಕ 1 ನವೆಂಬರ್ 2022. anekalkathasparde@gmail.com ಗೆ ಕಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕ.ಸಾ.ಪ ಆನೇಕಲ್ ಘಟಕ 7795212012, ಪ್ರಜಾತಾರೆ ಬಳಗ 7204761668,  ಕೌದಿ ಪ್ರಕಾಶನ 9380697082, ಗಂಧದನಾಡು ಜನಪರ ವೇದಿಕೆ 9880460306 ಗೆ ಸಂಪರ್ಕಿಸಬಹುದು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

42 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago