ಸುರಪುರ: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಸಂಸ್ಕøತಿ, ಪರಂಪರೆಯನ್ನು ತಿಳಿಸಿಕೊಟ್ಟು ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ಕೂಡಾ ಇದ್ದು ಮಕ್ಕಳು ಸಂಸ್ಕಾರವಂತರಾದಾಗ ಮಾತ್ರ ಶಿಕ್ಷಣಕ್ಕೆ ಮೆರಗು ಬರುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಹೇಳಿದರು.
ನಗರದ ಶ್ರೀ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಈ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಶಿಕ್ಷಣಕ್ಕೆ ಕೊಟ್ಟಷ್ಟೇ ಒತ್ತನ್ನು ಮಕ್ಕಳಲ್ಲಿ ಸಂಸ್ಕಾರವನ್ನು ಕಲಿಸುವದಕ್ಕೂ ಕೊಡಬೇಕು ಈ ಜವಾಬ್ದಾರಿ ಪ್ರತಿಯೊಬ್ಬ ಉಪನ್ಯಾಸಕರ ಮೇಲಿದೆ ಎಂದು ಅವರು ಹೇಳಿದರು.
ಶ್ರೀ ಪ್ರಭು ಕಾಲೇಜಿನ ನಿವೃತ್ತ ಉಪನ್ಯಾಸಕ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ ಹಿಂದಿನ ಪರಿಸ್ಥಿತಿಯನ್ನು ಹೋಲಿಸಿದರೆ ಇಂದು ಮಹಿಳೆಯರು ಶಿಕ್ಷಣವನ್ನು ಕಲಿಯಲು ಸಾಕಷ್ಟು ಅವಕಾಶಗಳಿವೆ ಈಗ ನಮ್ಮ ಸಮಾಜದಲ್ಲಿಯೂ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಸಾಕಷ್ಟು ಅರಿವು ಮೂಡುತ್ತಿದ್ದು ಸರ್ಕಾರ ಕೂಡಾ ಮಹಿಳೆಯರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ಈ ಸೌಲಭ್ಯಗಳ ಸದುಪಯೋಗಪಡಿಸಿಕೊಂಡು ಮಹಿಳಾ ಸಾಕ್ಷರತೆ ಪ್ರಮಾಣದ ಹೆಚ್ಚಳಕ್ಕೆ ಕಾರಣೀಭೂತರಾಗಬೇಕು ಎಂದರು.
ಯಾದಗಿರಿ ಲಿಂಗೇರಿ ಕೋನಪ್ಪ ಮಹಿಳಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಕು.ಜ್ಯೋತಿ ಕೆ ಇವರು ಮಾತನಾಡಿ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಜೊತೆ ಜೊತೆಗೆ ವ್ಯಕ್ತಿತ್ವದ ಬೆಳವಣಿಗೆಗೆ ಬೇಕಾದ ಪರಿಸರವನ್ನು ನಿರ್ಮಿಸಿಕೊಂಡು ನಾವು ಆಕರ್ಷಕರಾಗಬೇಕು ಅಂದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ ಎಂದರು. ನಾವು ನಮ್ಮ ಪಾಡಿಗೆ ಬದುಕಿದರೆ ಅದು ಆದರ್ಶವಲ್ಲ ನಾವು ಪರರಿಗಾಗಿ ಬದುಕಿದರೆ ಅದು ಆದರ್ಶ ಜೀವನ, ನಾವು ಕೇವಲ ವಿದ್ಯಾವಂತರಾದರೆ ದೊಡ್ಡವರಾಗುವುದಿಲ್ಲ ಬದಲಿಗೆ ಹೃದಯವಂತರಾದಾಗ ಮಾತ್ರ ನಾವು ದೊಡ್ಡವರಾಗುತ್ತೇವೆ ಎಂದರು.
ಪ್ರಾಂಶುಪಾಲೆ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆಯ ಕಾರ್ಯದರ್ಶಿ ಡಾ. ಆದಿಶೇಷ ನೀಲಗಾರ ಹಾಗೂ ವೆಂಕಟೇಶ ಜಾಲಗಾರ, ಉಪನ್ಯಾಸಕರಾದ ತಿರುಪತಿ ಕೆಂಭಾವಿ, ಬೀರೆಶಕುಮಾರ ದೇವತ್ಕಲ, ಚಂದ್ರಶೇಖರ ನಾಯಕ, ಅಂಬ್ರೇಶ ಚಿಲ್ಲಾಳ, ನಬಿ ನಾಯ್ಕೋಡಿ, ಮಹೇಶ ಗಂಜಿ, ಮರೆಮ್ಮ ಕಟ್ಟಿಮನಿ, ನಂದಿನಿ ಅಸಗಳ್ಳಿ ಉಪಸ್ಥಿತರಿದ್ದರು, ಕು. ಪ್ರಿಯಾಕ ಮತ್ತು ಸೃಷ್ಠಿ ನಿರೂಪಿಸಿದರು, ರೇಖಾ ಸ್ವಾಗತಿಸಿದರು ಹಾಗೂ ಶಾಂತಾ ವಂದಿಸಿದರು.
ಉಡಿ ತುಂಬುವ ಮೂಲಕ ಬೀಳ್ಕೊಡುಗೆ : ಈ ಸಂದರ್ಭದಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಕಾಲೇಜಿನ ವತಿಯಿಂದ ಉಡಿ ತುಂಬುವ ಮೂಲಕ ಬೀಳ್ಕೊಡುಗೆ ನೆರವೇರಿಸಿದ್ದು ವಿಶೇಷವಾಗಿತ್ತು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…