ಕಲಬುರಗಿ: ಸಮಾಜದಲ್ಲಿಎಲ್ಲರೂ ಸೌಹಾರ್ದಯುತವಾಗಿ ಬಾಳುವ ನಿಟ್ಟಿನಲ್ಲಿ ಮಹಾತ್ಮಾಗೌತಮಬುದ್ಧರ ಸಂದೇಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಾಜಿ ಸಚಿವ ಹಾಗೂ ರಾಜ್ಯಸಭೆ ಮಾಜಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನುಡಿದರು.
ಇಲ್ಲಿನ ಸೇಡಂರಸ್ತೆಯಲಿರುವ ಬುದ್ಧ ವಿಹಾರದಲ್ಲಿಇಂದು 66ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಹಾಗೂ ಮಾಜಿಕೇಂದ್ರ ಸಚಿವ ಮಲ್ಲಿಕಾರ್ಜುನಖರ್ಗೆಅವರು ಬುದ್ಧ ಮೂರ್ತಿಗೆ ಪುಷ್ಪಾರ್ಷನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಪೂಜ್ಯ ಭಂತೇಜಿಯವರು ಬುದ್ಧ ವಂದನೆ ಸಲ್ಲಿಸಿದರು. ಮಲ್ಲಿಕಾರ್ಜುನಖರ್ಗೆ ಹಾಗೂ ರಾಧಾಬಾಯಿಎಂ.ಖರ್ಗೆ ದಂಪತಿಗಳು ಪೂಜ್ಯ ಭಂತೇಜಿಯವರಿಗೆಚೀವರದಾನಕೈಗೊಂಡುಆತ್ಮೀಯವಾಗಿ ಸನ್ಮಾನಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿಖ್ಯಾತ ಲೇಖಕಿ ಡಾ.ಎಚ್.ಎಸ್.ಅನುಪಮಾಅವರು ವಿಶೇಷ ಉಪನ್ಯಾಸ ನೀಡಿ, ಸಾಮ್ರಾಟ್ ಅಶೋಕ ಮತ್ತುಡಾ.ಬಾಬಾ ಸಾಹೇಬ ಅಂಬೇಡ್ಕರ್‍ಅವರುಇದೇ ವಿಜಯದಶಮಿಯಂದುಧ್ಮ್ಮ ದೀಕ್ಷಾ ಪಡೆದ ದಿನ ಇದೊಂದು ಪರಿವರ್ತನೆಯ ಕಾಲ. ಹೀಗಾಗಿ ಧಮ್ಮಚಕ್ರ ಪ್ರವರ್ತನ ದಿನ ಆಚರಿಸಲಾಗುತ್ತದೆಎಂದು ತಿಳಿಸಿದರು.
ಎಐಸಿಸಿ ವೀಕ್ಷಕರು ಹಾಗೂ ರಾಹುಲ್‍ಗಾಂಧಿಯವರರಾಜಕೀಯ ಕಾರ್ಯದರ್ಶಿ ಕೆ.ರಾಜು, ಮಾಜಿ ಸಚಿವಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದರಹೀಂಖಾನ್, ಕಲಬುರಗಿಉತ್ತರ ವಿಧಾನಸಭಾಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಸಿದ್ಧಾರ್ಥ ವಿಹಾರಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಾರುತಿರಾವ್ ಡಿ. ಮಾಲೆ, ಅಲ್ಲಮಪ್ರಭು ಪಾಟೀಲ್ ನೆಲೋಗಿ, ತಿಪ್ಪಣ್ಣಪ್ಪಕಮಕನೂರ್, ಮಾಜಿ ಶಾಸಕ ಬಿ.ಆರ್.ಪಾಟೀಲ್, ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಸುಭಾಷ್‍ರಾಠೋಡ್,
ಖ್ಯಾತ ಸಾಹಿತಿಡಾ.ಎಚ್.ಎಸ್.ಅನುಪಮಾ, ಉದ್ಯಮಿಕೃಷ್ಣಾಜಿಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ನೀಲಕಂಠ ಮುಲಗೆ, ಡಾ.ಈಶ್ವರಇಂಗನ್, ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.
ನೆಲದ ಮರದಧ್ಯಾನ ಬಿಡುಗಡೆ: ಇದೇ ವೇಳೆ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಕನ್ನಡ ಪ್ರಾಧ್ಯಾಪಕಅಪ್ಪಗೆರೆ ಸೋಮಶೇಖರಅವರು ಬರೆದಿರುವ ‘ನೆರಳು ಮರದಧ್ಯಾನ’ ಕೃತಿಯನ್ನು ಮಾಜಿಕೇಂದ್ರ ಸಚಿವ ಮಲ್ಲಿಕಾರ್ಜುನಖರ್ಗೆಯವರು ಲೋಕಾರ್ಪಣೆಗೊಳಿಸಿದರು. ಡಾ.ಈಶ್ವರಇಂಗನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿದರು. ಉಪನ್ಯಾಸಕಡಾ.ಚಂದ್ರಶೇಖರದೊಡ್ಡಮನಿ ವಂದಿಸಿದರು.
ಸಮಾಜದ ಒಟ್ಟಾರೆ ಆರೋಗ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬ ವ್ಯಕ್ತಿಗೂ ಬುದ್ಧನ ಸಂದೇಶಗಳನ್ನು ಪಾಲಿಸುವುದು ಅನಿವಾರ್ಯಎಂದು ಕಿವಿಮಾತು ಹೇಳಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…