ಕಬ್ಬು ಮಾರಾಟಕ್ಕೆ ರೈತ-ಸಕ್ಕರೆ ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ ಕಡ್ಡಾಯ: ಡಿ.ಸಿ. ಯಶವಂತ ವಿ. ಗುರುಕರ್

ಕಲಬುರಗಿ: ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಅದನ್ನು ಮಾರಾಟ ಮಾಡುವ ಸಕ್ಕರೆ ಕಾರ್ಖಾನೆಗಳೊಂದಿಗೆÉ ಎಫ್.ಆರ್.ಪಿ. ದರದನ್ವಯ ಮಾರಾಟ ಮಾಡಲು ಮತ್ತು ಸಕ್ಕರೆ ಆಯುಕ್ತರ ಆದೇಶದಂತೆ ಪ್ರತಿ ಕಿ.ಮೀ. ಅನ್ವಯ ಸಾರಿಗೆ ಮತು ಕಟಾವಿನ ವೆಚ್ಚ ಕಡಿತದೊಂದಿಗೆ ಹಣ ಪಾವತಿಸುವ ಷರತ್ತಿಗೊಳಪಟ್ಟು ದ್ವಿಪಕ್ಷೀಯ ಒಪ್ಪಂದ ಮಾಡುವುದು ಕಡ್ಡಾಯವಾಗಿದ್ದು, ರೈತ ಸಮುದಾಯ ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಡಿ.ಸಿ. ಯಶವಂತ ವಿ. ಗುರುಕರ್ ಅವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

ಬುಧವಾರ ಸಕ್ಕರೆ ಕಾರ್ಖಾನೆ ಮತ್ತು ರೈತರೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಬ್ಬು ನಿಯಂತ್ರಣ ಆದೇಶ-1966ರ ನಿಯಮ 6ರ ಪ್ರಕಾರ ದ್ವಿಪಕ್ಷೀಯ ಒಪ್ಪಂದ ಕಡ್ಡಾಯವಾಗಿದೆ. ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ರೈತರ ಸಹಮತದೊಂದಿಗೆ ಇಂದು ನಡೆದ ಸಭೆಯಲ್ಲಿ ನಿರ್ಧರಿಸಿದೆ. ಒಪ್ಪಂದದ ನಮೂನೆಯನ್ನು ಡಿ.ಸಿ. ಕಚೇರಿಯಿಂದಲೆ ತಯಾರಿಸಿ ತಹಶೀಲ್ದಾರರ ಮೂಲಕ ರೈತರಿಗೆ ಮತ್ತು ಕಾರ್ಖಾನೆಗಳಿಗೆ ನೀಡಲಾಗುವುದು ಎಂದರು.

ಕಬ್ಬು ಬೆಳೆಗಾರರ ಅನೇಕ ಸಮಸ್ಯೆಗಳಿಗೆ ಒಮ್ಮೆಲೆ ತಿಲಾಂಜಲಿ ನೀಡಲು ಇಂದು ನಡೆಸಿದ ರೈತರು ಮತ್ತು ಸಕ್ಕರೆ ಕಾರ್ಖಾನೆ ನಡುವಿನ ಸಭೆ ಫಲಪ್ರಧವಾಗಿದ್ದು, ಕಬ್ಬು ಬೆಳೆಗಾರರ ಹಿತದಲ್ಲಿ ಜಿಲ್ಲೆಯ ಮಟ್ಟಿಗೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಕಂಪನಿಗಳಲ್ಲಿ ಲಂಚಾವತಾರಕ್ಕೆ ಬ್ರೇಕ್ ಬೀಳಲಿದ್ದು, ಅನ್ನದಾತ ರೈತನಿಗೆ ಕಿರಿಕಿರಿ ತಪ್ಪಲಿದೆ. ಒಪ್ಪಂದದಂತೆ ಕಾಲಮಿತಿಯಲ್ಲಿ ಹಣ ಸಿಗಲಿದೆ. ಪರಿಹಾರ ಕೊಟ್ಟಿಲ್ಲ, ಕಬ್ಬು ಕಟಾವಾಗಿಲ್ಲ ಎನ್ನುವ ದೂರುಗಳು ಇನ್ನು ಮುಂದೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ ಎಂದು ಯಶವಂತ ವಿ. ಗುರುಕರ್ ವಿವರಿಸಿದರು.

ರೈತರು ಬೆಳೆದ ಕಬ್ಬನ್ನು ಸಕಾಲದಲ್ಲಿ ಕಟಾವು ಮಾಡಿಕೊಂಡು ಹೋಗಲು ಆಯಾ ಸಕ್ಕರೆ ಕಾರ್ಖಾನೆಗಳಿಂದ ಪ್ರದೇಶವಾರು ಇಬ್ಬರು ಸಿಬ್ಬಂದಿಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಕಬ್ಬು ಕಟಾವು ಮಾಡುವ ಮುನ್ನ ಗ್ರಾಮಸ್ಥರಿಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್ ತಂತ್ರಾಂಶ ಸಹ ಸಿದ್ಧಪಡಿಸಲಾಗುತ್ತಿದೆ. ಇನ್ನೂ ಕಬ್ಬು ತೂಕದ ದೂರುಗಳ ನಿವಾರಣೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ 2 ರ್ಯಾಪಿಡ್ ತಪಾಸಣಾ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಇದೇ ಇಲಾಖೆಯಡಿ ಕಬ್ಬು ಕಟಾವು ಮತ್ತು ಮಾರಾಟ ಕುರಿತಂತೆ ರೈತರು ದೂರು ಸಲ್ಲಿಸಲು ಸಹಾಯವಾಣಿ ಸ್ಥಾಪಿಸಲಾಗುತ್ತಿದೆ. ರೈತರು ದೂರು ಸಲ್ಲಿಸಿದ 24 ಗಂಟೆಯಲ್ಲಿ ಅಧಿಕಾರಿಗಳ ತಂಡ ಹೊಲಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಿದೆ ಎಂದರು.

ರೈತರಿಗೆ ಶೇ.10-15 ರಷ್ಟು ಹೆಚ್ಚಿನ ಲಾಭ: ಪ್ರಸ್ತುತ ಕಬ್ಬನ್ನು ಮಶೀನ್‍ಗಳಿಂದ ಕಟಾವು ಮಾಡಿದಲ್ಲಿ ಸಾರಿಗೆ ಮತ್ತು ಕಟಾವು ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ ಶೇ.5ರಷ್ಟು ಮೊತ್ತವನ್ನು ಕಾರ್ಖಾನೆಯವರು ರೈತರಿಂದ ಪಡೆಯುತ್ತಿದ್ದಾರೆ. ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಮಾಡಿದಲ್ಲಿ ರೈತರು ಶೇ.5ರಷ್ಟು ಹೆಚ್ಚುವರಿ ಹಣ ನೀಡಬೇಕಿಲ್ಲ. ನಿಯಮದಂತೆ ಇದನ್ನು ಸಾರಿಗೆ ಮತ್ತು ಕಟಾವು ವೆಚ್ಚದಲ್ಲಿಯೇ ಸೇರಿಸಲಾಗಿದೆ. ಇದರಿಂದ ರೈತರಿಗೆ ಶೇ.10-15ರಷ್ಟು ಹೆಚ್ಚಿನ ಹಣ ಸಿಗಲಿದೆ. ಕಿ.ಮೀ. ಅನ್ವಯ ಸಾರಿಗೆ ವೆಚ್ಚ ನಿಗದಿಪಡಿಸಿದ್ದು, ಇದು ಸಹ ಕಾರ್ಖಾನೆ ಸಮೀಪದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದರು.

ಕಾರ್ಖಾನೆಗಳಲ್ಲಿ ಕುಂದುಕೊರತೆ ಕೋಶ: ಇನ್ನ ಜಿಲ್ಲೆಯ ಪ್ರತಿ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ಕಬ್ಬು ಕಟಾವಿನ ವಿವರದ ಜೊತೆಗೆ ಹಣ ಪಾವತಿ ಕುರಿತಂತೆ ಮಾಹಿತಿ ನೀಡಲು ಸಾರ್ವಜನಿಕ ಕುಂದುಕೊರತೆ ಕೋಶ ತೆರೆಯಲು ಕಾರ್ಖಾನೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಶೇ.100 ರಷ್ಟು ಕಬ್ಬು ಹಣ ಪಾವತಿ: 2021-22ನೇ ಸಾಲಿಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಎನ್.ಎಸ್.ಎಲ್. ಸುಗರ್ ಲಿ. ಕಾರ್ಖಾನೆಯು ಎಫ್.ಆರ್.ಪಿ. ದರ 2,915 ರೂ. ಗಳಂತೆ ರೈತರಿಂದ 8,95,193 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 26,095 ಲಕ್ಷ ರೂ., ಹವಳಗಾದ ರೇಣುಕಾ ಶುಗರ್ಸ್ ಲಿ. ಕಾರ್ಖಾನೆಯು ಎಫ್.ಆರ್.ಪಿ. ದರ 2,964 ರೂ. ಗಳಂತೆ 13,50,279 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 41,495.87 ಲಕ್ಷ ರೂ. ಹಾಗೂ ಜೇವರ್ಗಿ ತಾಲೂಕಿನ ಮಳ್ಳಿಯ ಉಗರ್ ಶುಗರ್ಸ್ ಲಿ. ಕಾರ್ಖಾನೆಯು ಎಫ್.ಆರ್.ಪಿ. ದರ 3,109 ರೂ. ಗಳಂತೆ 5,29,217 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 16,453.37 ಲಕ್ಷ ರೂ. ಹಣ ಪಾವತಿಸಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯು ಎಫ್.ಆರ್.ಪಿ. ದರ 2,926 ರೂ. ಗಳಂತೆ ರೈತರಿಂದ 6,44,276 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 18,851.52 ಲಕ್ಷ ರೂ. ಪಾವತಿಸಿದೆ. ಒಟ್ಟಿನಲ್ಲಿ ಈ ನಾಲ್ಕು ಕಾರ್ಖಾನೆಯಿಂದ ಕಳೆದ 2021-22ನೇ ಸಾಲಿನಲ್ಲಿ 34,18,965 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 1028.95 ಕೋಟಿ ರೂ. ಹಣ ರೈತರಿಗೆ ಪಾವತಿಸಿದ್ದು, ಶೇ.100ರಷ್ಟು ಕಬ್ಬು ಹಣ ಪಾವತಿಯಾಗಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಅಂಕಿ-ಸಂಖ್ಯೆಯೊಂದಿಗೆ ಮಾಹಿತಿ ನೀಡಿದರು.

emedialine

Recent Posts

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

6 mins ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

9 mins ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

14 mins ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ್ಲ –ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

19 mins ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

24 mins ago

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420