ಕಲಬುರಗಿ: ಪವರ್ ಸ್ಟಾರ್ಟ್, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ಕೊನೆಯ ಕನಸು ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ಶುಕ್ರವಾರ ಪ್ರದರ್ಶನಗೊಂಡಿತು.
ನಗರದಲ್ಲಿ ಸಂಗಮ ಚಿತ್ರಮಂದಿರ, ಶೆಟ್ಟಿ ಚಿತ್ರಮಂದಿರ, ಐನಾಕ್ಸ್ ಹಾಗೂ ಮಿರಾಜ್ ಚಿತ್ರಮಂದಿರ ಎದುರುಗಡೆ ಪುನೀತ್ ಅಭಿಮಾನಿಗಳಿಂದ ಅಪ್ಪು ಕಟೌಟ್ ಗೆ ಕ್ಷೀರಾಭಿμÉೀಕ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಿತ್ರ ಮೊದಲ ಶೋ ಆರಂಭಗೊಳ್ಳುವ ಮುನ್ನ ಚಿತ್ರಮಂದಿರ ಎದುರುಗಡೆ ಅಪ್ಪು ಅಪ್ಪು ಅಪ್ಪು ಎಂಬ ಹμÉರ್ೂೀದ್ಘಾರ ಅಭಿಮಾನಿಗಳು ಮೊಳಗಿಸಿದರು. ಗಂಧದಗುಡಿಗೆ ಜೈ, ಅಪ್ಪುಗೆ ಜೈ ಎನ್ನುವ ಮೂಲಕ ಅಪ್ಪುವಿನ ಕಡೆಯ ಚಿತ್ರವಾದ ಗಂಧದಗುಡಿಯನ್ನು ಅಭಿಮಾನಿಗಳು ವಿಜೃಂಭಿಸಿದರು.
ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಎಂಬ ಬೋರ್ಡ್ ನೇತು ಹಾಕಿರುವ ದೃಶ್ಯ ಕಂಡು ಬಂದವು. ಚಿತ್ರಮಂದಿರಗಳ ಎದುರು ವೀಕ್ಷಕರ ದಂಡೆ ಹರಿದು ಬಂದಿತ್ತು. ಚಿತ್ರ ವೀಕ್ಷಣೆ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಂಧದಗುಡಿ ಚಿತ್ರದಲ್ಲಿ ಅಪ್ಪು ಹಾಗೂ ಅಮೋಘವರ್ಷ ಅವರು ಕರುನಾಡಿನ ಒಡಲಾಳದ ಸೌಂದರ್ಯ, ವಿಸ್ಮಯ ಜಗತ್ತನ್ನೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನುತ್ತಿದ್ದಾರೆ ಪ್ರೇಕ್ಷಕರು.
ಮೊದಲ ದಿನವೇ ಗಂಧದಗುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಗಂಧದಗುಡಿಯ ಮೂಲಕ ಪುನೀತ್ ರಾಜಕುಮಾರ ಅವರು ನೆಲ, ಜಲ, ಕಾಡು, ಪ್ರಾಣಿ, ಪಕ್ಷಿಗಳ ಜೀವ ಸಂಕೋಲೆ ಉಳಿಸಬೇಕು ಎಂದು ಕರುನಾಡಿನ ಜನತೆಗೆ ಒಂದೊಳ್ಳೆ ಸಂದೇಶ ನೀಡಿದ್ದಾರೆ. ಅಭಿಮಾನಿಗಳು ತಿಳಿಸಿದರು.
ಗಂಧದಗುಡಿಯ ಮೂಲಕ ಪುನೀತ್ ರಾಜಕುಮಾರ ಅವರನ್ನು ಕೊನೆಯದಾಗಿ ತೆರೆಮೇಲೆ ನೋಡುವ ವಿಷಯವೇ ನೋವಿನ ಸಂಗತಿಯಾಗಿದೆ. ಚಿತ್ರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಹಾಗೂ ಕಾಡನ್ನು ದೇವರ ರೂಪದಲ್ಲಿ ಕಾಣಬೇಕು ಎಂಬ ಸಂದೇಶ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. -ಪ್ರಮಥ ಎಸ್, ಅಪ್ಪು ಅಭಿಮಾನಿ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…