ಹೈದರಾಬಾದ್ ಕರ್ನಾಟಕ

ಸಾಹಿತ್ಯ ಸಮ್ಮೇಳನದಲ್ಲಿ ಬಾಲಕಿ ಮೇಲಿನ ಘೋರಕೃತ್ಯ, ಕೊಲೆ ಘಟನೆ ಖಂಡನೆ

ಆಳಂದ: ತಾಲೂಕಿನಲ್ಲಿ ಅಮರ್ಜಾ ಹಾಗೂ ಬೆಣ್ಣೆತೊರೆ ನದಿಗಳು ಹರಿದರೂ ರೈತರಿಗೆ ಅದರ ಉಪಯೋಗವಾಗುತ್ತಿಲ್ಲ. ಇದಕ್ಕೆ ಕೋಟ್ಯಂತರ ರೂ. ಖರ್ಚಾದರೂ ಅನ್ನದಾತರ ಹೊಲಗಳಿಗೆ ನೀರು ತಲುಪಿಲ್ಲ. ಇದು ಗಂಭೀರ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಜನಾಂದೋಲನದ ಅಗತ್ಯವಿದೆ ಕನ್ನಡ ಸಾಹಿತ್ಯ ತಾಲೂಕು 11ನೇ ಸಮ್ಮೇಳನದ ಅಧ್ಯಕ್ಷ ಪ್ರಭುಲಿಂಗ ನಿಲೂರ ಅವರು ಕರೆ ನೀಡಿದರು.

ತಾಲೂಕಿನ ನಿಂಬರಗಾ ವಲಯದ ಮಾಡಿಯಾಳ ಗ್ರಾಮದದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ದಿ. ಮಲ್ಲೇಶಪ್ಪ ವೇದಿಕೆಯಲ್ಲಿ ಶನಿವಾರ ನಡೆದ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಭಾಷಣ ಮಂಡಿಸಿ ಅವರು ಮಾತನಾಡಿದರು.

ರೈತರ ಮೊಗದಲ್ಲಿ ನಗು ಕಾಣಬೇಕಾದರೆ ನೀರಾವರಿಗೆ ಆದ್ಯತೆ ನೀಡಬೇಕು. ಎಲ್ಲರ ಹೊಲಗಳಿಗೂ ನೀರು ತಲುಪುವಂತಾಗಬೇಕು.
ತಾಲೂಕು ಮಹಾರಾಷ್ಟ್ರದ ಗಡಿಯಲ್ಲಿರುವುದರಿಂದ ಇಲ್ಲಿ ನಿರಂತರ ಕನ್ನಡ ಜಾಗೃತಿ ಕಾರ್ಯಕ್ರಮಗಳು ಆಯೋಜಿಸಬೇಕು. ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ, ಅಗತ್ಯ ಸೌಲಭ್ಯ, ಶಿಕ್ಷಣ ಕೊರತೆ ನೀಗಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯಲಿ ಎಂದು ಅವರು ಹೇಳಿದರು.

ಎಲ್ಲ ಗ್ರಾಮಗಳಿಗೂ ಉತ್ತಮ ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಸಮರ್ಪಕ ವಿದ್ಯುತ್ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಿರಂತರ ಹೋರಾಟದ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು.

ಯುವಕರಿಗೆ ಉದ್ಯೋಗದ ಅಗತ್ಯತೆ ಇದೆ. ದುಡಿಯವ ಕೈಗಳಿಗೆ ಕೆಲಸ ಬೇಕಿದೆ. ಈ ಕಾರಣಕ್ಕೆ ತಾಲೂಕಿನಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಅವುಗಳ ಸ್ಥಾಪನೆಗೆ ತಾಲೂಕಿನ ಜನಪ್ರತಿನಿಧಿಗಳು, ಮಠಾಧೀಶರು, ಆರ್ಥಿಕವಾಗಿ ಸಬಲರಾದವರು ಮುಂದಾಗುವುದು ಇಂದಿನ ಅಗತ್ಯವಿದೆ ಎಂದರು.

ಆಳಂದ ತಾಲೂಕಿಗೆ ಸರಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು. ಸಾಕಷ್ಟು ವಿದ್ಯಾರ್ಥಿನಿಯರು ಪಿಯು ನಂತರದ ಪದವಿ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕು ಗೊಳಿಸುತ್ತಿರುವುದರಿಂದ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಸಹಿತ ಮಹಿಳಾ ಪದವಿ ಕಾಲೇಜು ಆರಂಭಿಸಬೇಕು. ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಬೇಕು. ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ಕುರಿತು ಅನ್ನದಾತರಿಗೆ ತರಬೇತಿ ನೀಡಬೇಕು. ಆ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಬೆಳೆದು ರೈತರು ಆರ್ಥಿಕವಾಗಿ ಸದೃಢವಾಗುವಂತೆ ನೋಡಿಕೊಳ್ಳಬೇಕು. ನೀಡುವ ರೈತ ಎಂದಿಗೂ ಬೇಡುವವನಾಗದಂತೆ, ಆತ್ಮಹತ್ಯೆಗೆ ಶರಣಾಗದಂತೆ ತಡೆಯಬೇಕಾದ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ರೈತರಿಗೆ ಆಧುನಿಕ ತಂತ್ರಜ್ಞಾನದ ಬಳಕೆ, ಸಾವಯವ ಕೃಷಿಗೆ ಒತ್ತು, ಅಂತರ್ಜಲ ಹೆಚ್ಚಳದ ಬಗ್ಗೆ ಅರಿವೂ ಮೂಡಿಸುವ ಕೆಲಸವಾಗಬೇಕು ಎಂದು ನುಡಿದರು.

ಸೋಲಾರ್ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಸೋಲಾರ್ ಘಟಕಗಳು ಹೆಚ್ಚು ಹೆಚ್ಚು ಸ್ಥಾಪನೆಯಾಗುವಂತೆ ಪೆÇ್ರೀತ್ಸಾಹ ನೀಡಬೇಕು. ಆ ಮೂಲಕ ವಿದ್ಯುತ್ ಸಮಸ್ಯೆ ಇರುವ ಗ್ರಾಮಗಳಿಗೆ ವಿದ್ಯುತ್ ಉತ್ಪಾದಿಸಿ ಅನ್ನದಾತರ ಹೊಲಗಳಿಗೆ ನಿರಂತರ ವಿದ್ಯುತ್ ಸಿಗುವಂತೆ ನೋಡಿಕೊಳ್ಳಬೇಕು. ಈ ಭಾಗದಲ್ಲಿ ಅತಿ ಹೆಚ್ಚು ಬಿಸಿಲು ಇರುವುದಿರಂದ ಅದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಚಿಂತನೆ ನಡೆಸಿದಾಗ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಗುವುದರ ಜೊತೆಗೆ ಆ ಮೂಲಕ ಆರ್ಥಿಕವಾಗಿಯೂ ಸಬಲರಾಗಬಹುದು.
ಮಾಡಿಯಾಳ, ನರೋಣಾ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಹೊಂದಿದ್ದು, ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು.

ಸಂಘರ್ಷ ಸಾಕು, ಸಾಮರಸ್ಯ ಬೇಕು: ಜಾತಿ, ಧರ್ಮಗಳ ಹೆಸರಲ್ಲಿ ಇತ್ತೀಚೆಗೆ ಸಂಘರ್ಷಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಭಾರತೀಯ ಸಂವಿಧಾನವು ವಿವಿಧ ಧರ್ಮ, ಬಣ್ಣ, ಭಾಷೆ, ಸಂಸ್ಕøತಿ, ಆಚಾರ-ವಿಚಾರಗಳ ವೈವಿಧ್ಯತೆಯ ನಡುವೆ ದೇಶದ ಏಕತೆಯನ್ನು ಸಾರುವ ಮಾದರಿ ಪ್ರಜಾತಂತ್ರ ವ್ಯವಸ್ಥೆಯಾಗಿದೆ. ವಿವಿಧತೆಯಲ್ಲಿ ಏಕತೆಯೇ ಭಾರತದ ಅತಿ ದೊಡ್ಡ ಶಕ್ತಿ. ಈ ನೆಲದಲ್ಲೇ ಸಾಮರಸ್ಯದ ಬೇರುಗಳಿವೆ. ಅವುಗಳನ್ನು ಮತ್ತಷ್ಟು ಗಟ್ಟಿಗೊಳಿಸಿ ಎಲ್ಲ ಜಾತಿ, ಧರ್ಮದವರು ಒಂದೇ ತಾಯಿಯ ಮಕ್ಕಳೆಂಬಂತೆ ಕೂಡಿ ಸಾಗಬೇಕು ಎಂದರು.

ಸಮ್ಮೇಳನಗಳ ಉದ್ದೇಶ ಸಫಲವಾಗಬೇಕು: ಹನ್ನೆರಡನೇ ಶತಮಾನದ ವಚನಕಾರರಿಂದ ಹಿಡಿದು ಇಂದಿನ ಕವಿಗಳವರೆಗೆ ಎಲ್ಲರಿಗೂ ಅವರವರದೇ ಆದ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಪ್ರೀತಿ, ಮಮತೆ, ಕಷ್ಟ ಸಹಿಷ್ಣುತೆ, ಔದಾರ್ಯ ಇದ್ದ ಸಂವೇದನಾಶೀಲ ಮನುಷ್ಯ ಮಾತ್ರ ಕವಿಯಾಗಬಲ್ಲ, ಸಾಹಿತಿಯಾಗಬಲ್ಲ. ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ ಎನ್ನುವುದು ಕೇವಲ ಘೋಷಣೆಯಲ್ಲ. ಅದು ಬರಹಗಾರನಲ್ಲಿ ಸುಪ್ತ ಪ್ರಜ್ಞೆಯಾಗಿz್ದÁಗಲೇ ಬಹುಕಾಲ ಉಳಿಯುವ ಗಟ್ಟಿಯಾದ ಸಾಹಿತ್ಯ ಹುಟ್ಟಬಲ್ಲದು. ಸಾಹಿತ್ಯದಿಂದ ಸಮಾಜದಲ್ಲಿ ಬದಲಾವಣೆ, ಪರಿವರ್ತನೆ ಸಾಧ್ಯ ಎಂಬ ನಂಬಿಕೆ ಇನ್ನೂ ಗಟ್ಟಿಗೊಳಿಸಬೇಕಾದ ಜವಾಬ್ದಾರಿ ಸಹ ಬರಹಗಾರರ ಮೇಲಿದೆ ಎಂದು ಅವರು ಹೇಳಿದರು.

ಈಶ್ವರ ಸಣಕಲ್ಲರ ಒಂದು ಕವಿತೆ ಪ್ರತಿಯೊಬ್ಬ ಲೇಖಕನ ಅಜೆಂಡಾ ಆಗಬೇಕಿದೆ. ಜಗದ ನೋವು ದುಃಖ, ದುಮ್ಮಾನ, ಹಸಿವು, ಬಡತನ, ಅಸಹಾಯಕತೆ, ಅವಮಾನ ಇಂತಹ ನೋವುಗಳ ಕಡೆ ಇಂತಹ ನೊಂದವರ ಪರವಾಗಿ ಕವಿಯ ಕಾವ್ಯ ಹೊರ ಹೊಮ್ಮಬೇಕು. ನೋವಿನಲ್ಲಿ ಮಾತ್ರ ಕಾವ್ಯ ಹುಟ್ಟುತ್ತದೆ. ಸಂತೋಷದಲ್ಲಿ ನಗು ಅರಳುತ್ತದೆ. ಹೀಗಾಗಿ ಲೇಖಕನ ಹೃದಯ ಸಮಾಜಮುಖಿಯಾಗಿ, ಜನಮುಖಿಯಾಗಿ ಅವರ ನೋವಿನ ಕಡೆಗೆ ಮಿಡಿಯುವ ಮಾಧ್ಯಮವಾದಾಗ ಮಾತ್ರ ಬಹುಕಾಲ ನಿಲ್ಲುವ ಸಾಹಿತ್ಯ ಹುಟ್ಟುತ್ತದೆ. ಇಂತಹ ಸಮ್ಮೇಳನಗಳು ಆ ಬಗೆಗಿನ ಒಂದು ಸಾಮಾಜಿಕ ಎಚ್ಚರವನ್ನು ಬರಹಗಾರರಿಗೂ ಹಾಗೂ ಅವರನ್ನು ಒಳಗೊಂಡ ಸಮಾಜಕ್ಕೂ ಮುಖ್ಯವಾಗುತ್ತದೆ ಎಂದರು.

ಕನ್ನಡದ ಜನ ಕುಳಿತು ಓದದೆಯೂ ಕಾವ್ಯ ಕಟ್ಟುವ ಕಲೆಯ ಪರಿಣಿತ ಮತಿಗಳು ಎಂದು ಸಾವಿರಾರು ವರ್ಷಗಳ ಹಿಂದೆ ಶ್ರೀವಿಜಯನು ಕವಿರಾಜ ಮಾರ್ಗದಲ್ಲಿ ಹೇಳಿದ ಮಾತು ಇಂದಿಗೂ ಅನ್ವಯಿಸಬೇಕೆಂದರೆ ಈ ಸಮ್ಮೇಳನದಲ್ಲಿ ಭಾಗಿಯಾದ ಸರ್ವರೂ ಒಳ್ಳೆಯ ಸಾಹಿತ್ಯ ಓದಿ ಮನನ ಮಾಡುವಂತಾಗಬೇಕು. ಸಾಹಿತ್ಯ ಸಮ್ಮೇಳನಗಳ ಉz್ದÉೀಶ ಅಂತಿಮವಾಗಿ ಸಾಹಿತ್ಯ ಓದುಗರ ಸಂಖ್ಯೆ ಹೆಚ್ಚಾಗಬೇಕು. ಕನ್ನಡಾಭಿಮಾನ ಮೂಡಬೇಕು, ಆ ಮೂಲಕ ಅರಿವು ಉಂಟಾಗಿ ಎಲ್ಲ ಜನರ ಬದುಕು ಸುಂದರವಾಗಬೇಕೆಂಬುದೇ ಆಗಿದೆ. ಸಾಹಿತ್ಯ ಸಂಪೂರ್ಣವಾಗಿ ಮನುಷ್ಯನ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ನಡೆಸುವ ಕಾರ್ಯವೇ ಹೊರತು ಬಾಹ್ಯಾಡಂಬರ ಉತ್ಸವಗಳಿಗಾಗಿ ಅಲ್ಲ. ಹಾಗಾಗಿ ಸಣ್ಣ ಸಣ್ಣ ಚರ್ಚೆಗಳು, ವಿಚಾರ ವಿನಿಮಯಗಳು, ಕಾವ್ಯಾನ್ವೇಷಣೆಗಳು, ಸಾಹಿತ್ಯ ಕೃತಿಗಳ ಸೂP್ಷÀ್ಮ ವಿಶ್ಲೇಷಣೆಗಳು, ಚಿಂತನ ಗೋಷ್ಠಿಗಳು, ಸಂವಾದಗಳು, ಓದುಗರ ಸೃಷ್ಠಿಗೆ ಹೆಚ್ಚು ಪೂರಕ ಆಗುತ್ತವೆ ಎಂದರು.

ಕನ್ನಡವೆಂದರೆ ಕಥೆಯಲ್ಲ, ಬರೀ ಕವಿತೆಯಲ್ಲ, ಬರಿ ಭಾಷೆಯಲ್ಲ, ಕನ್ನಡವೆಂದರೆ ಅದೊಂದು ಗಾಳಿ, ಬೆಳಕು, ನೆಲ, ಜಲ. ಒಟ್ಟಾರೆ ಹೇಳುವುದಾದರೆ ಕನ್ನಡವೆಂದರೆ ಒಂದು ಸಂಸ್ಕøತಿ ಮತ್ತು ಜೀವನ ಶೈಲಿ. ಆ ಕಾರಣಕ್ಕಾಗಿ ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರಾಗಿರುತ್ತಾರೆ. ನಾನು ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಇತ್ಯಾದಿಗಿಂತ ಮೊದಲು ನಾನೊಬ್ಬ ಕನ್ನಡಿಗನೆಂಬ ಪ್ರಜ್ಞೆ ನಮಲ್ಲಿರಬೇಕು. ನಮ್ಮ ಬದುಕು ಸುಂದರವಾಗುವಂತೆ, ಸಹ್ಯವಾಗುವಂತೆ ಸಮಾನತೆ, ವರ್ಗ-ಜಾತಿ ವಿಮುಕ್ತ ಸಮಾಜ ನಿರ್ಮಾಣದ ಗುರಿ ಇಟ್ಟುಕೊಂಡು ಸಾಹಿತಿಗಳು ತಮ್ಮ ಬರಹಗಳನ್ನು ದುಡಿಸಿಕೊಳ್ಳಬೇಕಾದ ಅಗತ್ಯತೆ ಹಿಂದಿಗಿಂತಲೂ ಇಂದು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಆಳಂದ ತಾಲೂಕಿನ ಸಾಹಿತ್ತಿಕ, ಸಾಂಸ್ಕøತಿಕ ಹಿರಿಮೆ: ಇಡೀ ಜಿ¯್ಲÉಯಲ್ಲಿ ಆಳಂದ ತಾಲೂಕು ಇತರೆ ಎಲ್ಲ ತಾಲೂಕಿಗಳಿಗಿಂತಲೂ ಭಿನ್ನವಾಗಿದೆ. ಇಲ್ಲಿನ ಸಾಹಿತ್ಯಕ, ಸಾಂಸ್ಕøತಿಕ, ಹೋರಾಟದ ಇತಿಹಾಸ ಇಡೀ ರಾಜ್ಯಕ್ಕೇ ಪ್ರೇರಣೆಯಾಗಿದೆ. ಆಳಂದ ತಾಲೂಕಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಲ್ಲಿನ ನಿಂಬರಗಿಯಲ್ಲಿ ದೊರೆತ ಚಾಲುಕ್ಯರ ಕಾಲದಲ್ಲಿನ ಶಾಸನ ಆಧಾರದಲ್ಲಿ ಈ ಪ್ರದೇಶವನ್ನು ನಾಡುಗಳರಸ ಸಾಸಿರನಾಡು ಎಂದು ಬಣ್ಣಿಸಲಾಗಿದೆ. ಆಳಂದ ಪ್ರಾಚೀನ ಕಾಲದಲ್ಲಿ ಕಲ್ಯಾಣದಷ್ಟೇ ಪ್ರಸಿದ್ಧಿ ಪಡೆದಿತ್ತು. ಶರಣ ಏಕಾಂತ ರಾಮಯ್ಯನವರ ಕಾಲಕ್ಕೆ ಇದು ಒಂದು ಸಾಂಸ್ಕøತಿಕ ಕೇಂದ್ರವೂ ಆಗಿತ್ತು. ಆಳಂದನಲ್ಲಿ ದೊರೆತ ಕ್ರಿಶ ೧೦೮೨ ಶಾಸನದಲ್ಲಿ `ಶ್ರೀಮದಲನ್ದೆ ಪವಿತ್ರಂ ಸೋಮೇಶ್ವದೇವರಿನಲ್ದನಾಪುರದಿಂದ’ ಎಂದು ದಾಖಲಾಗಿರುವುದು ನೋಡಿದರೆ ಈ ಪಟ್ಟಣ ಅಂದು ಪ್ರಮುಖ ಸಾಂಸ್ಕøತಿಕ ಕೇಂದ್ರವಾಗಿತ್ತು ಎಂಬುದನ್ನು ಸಾರುತ್ತದೆ.

ಕ್ರಿಶ ೧೦೭೬ರಿಂದ ಕ್ರಿಶ ೧೧೨೬ರವರೆಗೆ ಈ ಪ್ರದೇಶವನ್ನು ಆಳಿದ ಕಲ್ಯಾಣ ಚಾಳುಕ್ಯ ವಿಕ್ರಮಾದಿತ್ಯನ ವಿಶಾಲ ಸಾಮ್ರಾಜ್ಯದ ಆಡಳಿತ ವಿಭಾಗಗಳಲ್ಲಿ ಆಳಂದವು ಒಂದು ಪ್ರಮುಖ ವಿಭಾಗವಾಗಿತ್ತು. ಅಂದು ಈ ಪ್ರದೇಶವನ್ನು `ಆಲಂದೆ ಸಾಸಿರ ನಾಡು’ ಎಂದು ಕರೆಯಲ್ಪಡುತ್ತಿತ್ತು. ಆಳಂದ ಈ ಹಿಂದೆ ಆಲಂದೆ ಸಾಸಿರ ವಿಭಾಗದ ರಾಜಧಾನಿಯಾಗಿತ್ತು. ಅಂದು ಈ ಭಾಗವು ಅÀಜಲಪುರ, ಆಳಂದ ತಾಲೂಕು, ಚಿತ್ತಾಪುರ ತಾಲೂಕಿನ ಕೆಲ ಗ್ರಾಮಗಳು, ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಹಾಗೂ ಸೊಲ್ಲಾಪುರ ಜಿಲ್ಲೆಯ ಕೆಲ ಗ್ರಾಮಗಳು ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕುಗಳನ್ನು ಒಳಗೊಂಡ ಒಟ್ಟು ಸಾವಿರ ಗ್ರಾಮಗಳ ವಿಭಾಗವಾಗಿತ್ತು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಆಳಂದ ತಾಲೂಕು ಹಿಂದು, ಮುಸ್ಲಿಂ ಹಾಗೂ ಜೈನ ಧರ್ಮದ ಅನುಯಾಯಿಗಳು ಕೂಡಿ ಬದುಕಿನ ಸಮನ್ವಯ ಸಂಸ್ಕøತಿಯ ಬೀಡು. ಶರಣರ, ಸಂತರ, ಸೂಫಿಗಳ, ತೀರ್ಥಂಕರ ಬದುಕಿನ ಆದರ್ಶಗಳು ಇಲ್ಲಿನ ಜನರ ನಡೆ-ನುಡಿಗಳಲ್ಲಿ ಹಾಸುಹೊಕ್ಕಿರುವುದು ಕಾಣಸಿಗುತ್ತದೆ. ನಿಂಬರ್ಗಾ, ಚಿಂಚನಸೂರ, ಪಡಸಾವಳಿ ಸೇರಿದಂತೆ ಇತರೆಡೆ ಕಲ್ಯಾಣ ಚಾಳುಕ್ಯರ, ಕಳಚೂರಿಗಳ ಮತ್ತು ದೇವಗಿರಿ ಯಾದವರ ಅನೇಕ ದೇವಾಲಯಗಳು ಇಂದಿಗೂ ಕಾಣಬಹುದಾಗಿದೆ.

ತಾಲೂಕಿನಲ್ಲಿ ಇದುವರೆಗೆ ೩೨ಕ್ಕಿಂತಲೂ ಹೆಚ್ಚು ಶಾಸನಗಳು ದೊರಕಿವೆ. ಮಾಡಿಯಾಳದಲ್ಲಿ ಎಂಟು, ಹೊಡಲ್‍ದಲ್ಲಿ ಮೂರು, ತಡಕಲ್‍ನಲ್ಲಿ ನಾಲ್ಕು, ನಿಂಬರ್ಗಿಯಲ್ಲಿ ಮೂರು, ರುದ್ರವಾಡಿಯಲ್ಲಿ ಮೂರು, ಆಳಂದ, ಜವಳಿ, ಖಜೂರಿ, ದೇವಂತಿಗೆ, ಪಡಸಾವಳಗಿ, ಹಿರೇಝಳಕಿ, ಕಿಣ್ಣಿಸುಲ್ತಾನ, ಚಿಂಚನಸೂರ ಹಾಗೂ ಬೆಳಮಗಿಯಲ್ಲಿ ತಲಾ ಒಂದು ಶಾಸನಗಳು ದೊರಕಿವೆ. ಸದ್ಯಕ್ಕೆ ಒಟ್ಟು ೧೬ ಗ್ರಾಮಗಳಲ್ಲಿ ಸುಮಾರು ೩೨ ಶಾಸನಗಳು ಲಭ್ಯವಾಗಿವೆ. ಈ ಶಾಸನಗಳು ಆಳಂದದ ಇತಿಹಾಸ ರಚನೆಗೆ ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತವೆ. ಈ ಕುರಿತು ಸಮಗ್ರ ಇತಿಹಾಸ ಕಟ್ಟಿಕೊಡುವ ಕೆಲಸ ತಾಲೂಕಿನ ಸಂಶೋಧಕರು ಮಾಡಬೇಕಿದೆ.

ಈ ನಾಡನ್ನು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಳಚುರಿಯರು, ಬಾಣರು, ದೇವಗಿರಿಯ ಯಾದವರು, ತುಘಲಕರು, ಬಹುಮನಿಗಳು, ನಿಜಾಂ ಮುಂತಾದವರು ಆಳಿz್ದÁರೆ. ಕಲ್ಯಾಣಿ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ಈ ಪಟ್ಟಣ ಬಹು ಪ್ರಸಿದ್ಧಿ ಪಡೆದಿರುವುದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ ಸಂದರ್ಭದಲ್ಲಿ ಆರನೇ ವಿಕ್ರಮಾದಿತ್ಯ ತನ್ನ ವಿಸ್ತಾರವಾದ ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ವಿಭಾಗ ಮಾಡಿದ್ದ. ಅದರಲ್ಲಿ ಆಳಂದ ಸಾಸಿರ ವಿಭಾಗವು ಒಂದು. ಇದು ಕಲಬುರಗಿ ಜಿ¯್ಲÉಯ ಆಡಳಿತದ ಚರಿತ್ರೆಯಲ್ಲಿ ಅತಿ ದೊಡ್ಡ ವಿಭಾಗವಾಗಿದ್ದು, ಒಂದು ಸಾವಿರ ಹಳ್ಳಿಗಳ ಪ್ರಭುತ್ವ ಪಡೆದಿತ್ತು.

ಮಹಾಶಿವಶರಣರಾದ ಅಲ್ಲಮಪ್ರಭುದೇವರು ಆಳಂದ ತಾಲೂಕಿನ ಜಿರೊಳ್ಳಿ, ಹೆಬ್ಳಿ ಮತ್ತು ಮಾಡಿಯಾಳ ಗ್ರಾಮಕ್ಕೆ ತಮ್ಮ ದೇಶ ಸಂಚಾರದ ಸಂದರ್ಭದಲ್ಲಿ ಬಂದು ನೆಲೆ ನಿಂತು ಈ ವಿಭಾಗದ ಜನರಿಗೆ ಧರ್ಮ ಮಾರ್ಗ ತೋರಿಸಿಕೊಟ್ಟರೆಂದು ಐತಿಹ್ಯವಿದೆ. ಬಸವಣ ್ಣನವರು ಕೂಡ ಅನೇಕ ಸಲ ಈ ಭಾಗಕ್ಕೆ ಬಂದು ಹೋಗಿದ್ದರೆಂದು ದಾಖಲಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯತೆ ಇದೆ.

ತಾಲೂಕಿನಲ್ಲಿರುವ ದಾವಲ್‍ಮಲೀಕ್ ದರ್ಗಾ, ಬಟ್ಟರ್ಗಾದ ಮೌಲಾಲಿ ದರ್ಗಾ, ದ್ಯಾಗಾಯಿಯ ಶೇಖ ಜಿಂದಾವಲಿ ದರ್ಗಾ ಸೇರಿದಂತೆ ಇತರೆ ದರ್ಗಾಗಳು ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತಗಳಾಗಿವೆ. ಇಸ್ಲಾಂ ಧರ್ಮದ ಸೂಫಿಸಂತರಾದ ಲಾಡ್ಲೆ ಮಶಾಕ್, ಹಜರತ್ ಖರ್ಮ ಅನ್ಸಾರಿ, ಹಜರತ್ ಮುಬಾರಕ ಅನ್ಸಾರಿ ಸೇರಿದಂತೆ ಮುಂತಾದವರು ಉನ್ನತವಾದ ತತ್ವಗಳಿಂದ ಸಾಮಾಜಿಕ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ. ಈ ನೆಲದಲ್ಲಿ ಇಂದಿಗೂ ಸಾಮರಸ್ಯ, ಭಾವೈಕ್ಯತೆ ಬದುಕು ಕಾಣಬಹುದಾಗಿದೆ.

ಇದಕ್ಕೆ ಈ ನೆಲದ ಭವ್ಯ ಪರಂಪರೆಯೂ ಕಾರಣವಾಗಿದೆ. ಹೀಗೆ ಅತ್ಯಂತ ಪುರಾತನವಾದ, ಭವ್ಯವಾದ, ಅದ್ಭುತವಾದ ಐತಿಹಾಸಿಕ ಪರಂಪರೆಯನ್ನು ಇಂದು ನಾವು ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂಬ ಮಾತಿನಂತೆ ನಮ್ಮ ಭವ್ಯ ಇತಿಹಾಸ, ಪರಂಪರೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ನಮ್ಮತನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಹೆಚ್ಚಿದೆ.

ತಾಲೂಕಿನ ಸಾಹಿತ್ತಿಕ ಇತಿಹಾಸ ೧೬ನೇ ಶತಮಾನದಿಂದಲೇ ಆರಂಭವಾಗುತ್ತದೆ. ಕ್ರಿಶ ೧೬೫೦ರಲ್ಲಿ ಸಿದ್ದಮಲ್ಲೇಶ ಎಂಬ ಕವಿ ವೀರಸಾಗರ ಚರಿತ್ರೆ ಎಂಬ ಕೃತಿ ರಚಿಸುವ ಮೂಲಕ ಈ ನೆಲದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ವಿಷಯ ಕೆಲವು ಕಡೆ ದಾಖಲಾಗಿದೆ. ಇದೇ ಕಾಲಘಟ್ಟದಲ್ಲಿ ಕ್ರಿಶ ೧೬೮೦ರಲ್ಲಿ ಕವಿ ಭದ್ರದೇವ ಆಧ್ಯಾತ್ಮಿಕ ಮತ್ತು ಕಾವ್ಯಸಿದ್ಧಿಯಲ್ಲಿ ಪ್ರಸಿದ್ಧಿ ಪಡೆದಿದ್ದ. ೧೭ನೇ ಶತಮಾನದ ಅಂಬಲಗಾದ ಚನ್ನಮಲ್ಲ ಕವಿಯ ಕೆಲ ಕೃತಿಗಳು ಲಭ್ಯವಾಗಿದ್ದು ನೋಡಿದರೆ ಆಳಂದ ತಾಲೂಕಿನ ಸಾಹಿತ್ಯ ಪರಂಪರೆಗೆ ಶತಮಾನಗಳ ಇತಿಹಾಸ ಇರುವುದು ಕಂಡುಬರುತ್ತದೆ. ಇಲ್ಲಿನ ಅನೇಕ ಸಾಹಿತಿ, ಕವಿಗಳ ಕೊಡುಗೆ ಸ್ಮರಿಸುತ್ತಾ ಇಂದಿನ ತಲೆಮಾರಿನ ಹೊಸ ಬರಹಗಾರರು ಗಟ್ಟಿ ಸಾಹಿತ್ಯದಲ್ಲಿ ತೊಡಗಿರುವುದು ಭವಿಷ್ಯತ್ತಿನ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡುವ ಆಶಾಭಾವ ಮೂಡಿಸಿದ್ದಾರೆ. ಈ ಸಾಹಿತ್ಯ, ಸಂಸ್ಕøತಿ ಪರಂಪರೆ ಹೀಗೆ ಮುಂದುವರಿಯಲಿ.

ಶಿP್ಷÀಣ, ದಾಸೋಹ, ಸಾಮರಸ್ಯಕ್ಕೆ ಮಠಗಳ ಕೊಡುಗೆ ಅನನ್ಯ: ತಾಲೂಕಿನಲ್ಲಿ ಹತ್ತಕ್ಕಿಂತ ಹೆಚ್ಚು ಮಠಗಳಿದ್ದು, ಅವು ಶಿP್ಷÀಣ, ದಾಸೋಹ ಹಾಗೂ ಧಾರ್ಮಿಕತೆಗೆ ಬಹುದೊಡ್ಡ ಕೊಡುಗೆ ನೀಡಿವೆ. ಸಮಾಜದ ಶಾಂತಿ, ಸಾಮರಸ್ಯಕ್ಕೂ ಶ್ರಮಿಸುವ ಮೂಲಕ ಎಲ್ಲರಿಗೂ ಮಠಗಳು ನಿತ್ಯ ಅನ್ನದಾಸೋಹ ಮಾಡುವ ಮೂಲಕ ದಾಸೋಹ ಪರಂಪರೆಗೆ ನಾಂದಿ ಹಾಡಿz್ದÁರೆ. ಸಮಾಜದಲ್ಲಿ ಸಾಮರಸ್ಯ, ದೇಶಾಭಿಮಾನ ಬೆಳೆಸುವಲ್ಲಿ ಹವಾ ಮಲ್ಲಿನಾಥ ಮಹಾರಾಜರ ಶ್ರಮ ಅನುಕರಣೀಯ ಹಾಗೂ ಮಾದರಿಯಾಗಿದೆ ಎಂದರು.

ಶಿP್ಷÀಣದಿಂದಲೇ ಸರ್ವಾಂಗೀಣ ಅಭಿವೃದ್ದಿ: ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಶಿP್ಷÀಣ ಅತ್ಯಗತ್ಯ. ಸಾP್ಷÀರರಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಜನರ ಜಾಗೃತಿಗೆ, ಸಮಗ್ರ ಪ್ರಗತಿಗೆ ಶಿP್ಷÀಣ ಬೇಕೆÉೀಬೇಕು. ಗುಣಮಟ್ಟದ ಶಿP್ಷÀಣ ನೀಡುವಲ್ಲಿ ತಾಲೂಕಿನ ಸರಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳು ಸಹ ಶ್ರಮಿಸುತ್ತಿವೆ. ಖಾಸಗಿ ಶಿP್ಷÀಣ ಸಂಸ್ಥೆಗಳು ತಾಲೂಕಿನ ಶೈP್ಷÀಣಿಕ ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆ ನೀಡುತ್ತಿವೆ ಎಂದು ಸ್ಮರಿಸಿದರು.

ಗುರುಗಳು, ಮುಖಂಡರು ಉಪಸ್ಥಿತಿ: ದಿವ್ಯ ಸಾನ್ನಿಧ್ಯ ವಹಿಸಿದ ಮಾಡಿಯಾಳ ಒಪ್ಪತ್ತೇಶ್ವರ ಮಠದ ಶ್ರೀ ಮರುಳಸಿದ್ಧ ಮಹಾಸ್ವಾಮೀಜಿ, ಸಮ್ಮುಖ ವಹಿಸಿದ ಬಡದಾಳ ತೇರಿನಮಠದ ಡಾ. ಚೆನ್ನಮಲ್ಲ ಶಿವಾಚಾರ್ಯರು ಶಾಸಕ ಸುಭಾಷ ಗುತ್ತೇದಾರ, ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಹಿರಿಯ ಬರಹಗಾರ್ತಿ ಹಾಗೂ ಗೋದುತಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನೀಲಾಂಬಿಕಾ ಪೆÇಲೀಸ್ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುರುಬಾಯಿ ಶ್ರೀಕಾಂತ ಕವಲಗಿ ಮಳಿಗೆಗಳನ್ನು ಉದ್ಘಾಟಿಸಿದರು.

ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಮಾಲೀಕ ಬಸವರಾಜ ಕೊನೇಕ್É, ಜಿಪಂ ಎಇಇ ನಾಗಮೂರ್ತಿ ಶೀಲವಂತ, ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ, ಮುಖಂಡ ಸಂತೋಷ ಹಾದಿಮನಿ ತಾಪಂ ಮಾಜಿ ಸದಸ್ಯ ಪ್ರಭು ಸರಸಂಬಿ, ಮಲ್ಲಿನಾಥ £ವಲಿ, ಅಂಬಣ್ಣ ಬಿರಾದಾರ ನಿಂಗಣ್ಣ ದುದ್ಧಗಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಹಣಮಂತ ಶೇರಿ ಮತ್ತಿತರು ಉಪಸ್ಥಿತರಿದ್ದರು.

ಘಟನೆಗೆ ಖಂಡನೆ: ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಪ್ರಭುಲಿಂಗ ನೀಲೂರ, ಶಾಸಕ ಸುಭಾಷ ಗುತ್ತೇದಾರ. ಸಾಹಿತಿ ಡಾ| ನಿಲಾಂಬಿಕ ಪೊಲೀಸ್ ಪಾಟೀಲ ಸೇರಿದಂತೆ ಅನೇಕರು ಘಟನೆಯನ್ನು ಪ್ರಸ್ತಾಪಿಸಿ ಖಂಡಿಸಿದರು ಅಲ್ಲದೆ, ಇಂಥ ಘಟನೆ ಮರುಕಳಿಸದಂತೆ ಎಚ್ಚರವಹಿಸಿ ತಪ್ಪಿತಸ್ಥತ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

emedialine

Recent Posts

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 mins ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

11 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

11 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

11 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

11 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

11 hours ago