ಆಳಂದ: ಸಡಗರ, ಸಂಭ್ರಮದ ನಡುವೆ ನೂರಾರು ಕನ್ನಡ ಮನಸುಗಳ ಒಂದಡೆ ಸಾಕ್ಷಿಯಾದ ನೂರು ದೇವಾಲಯಗಳ ಕೇಂದ್ರ ತಾಲೂಕಿನ ಮಾಡಿಯಾಳದಲ್ಲಿ ನಡೆದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಡಗರ ಸಂಭ್ರಮದ ಮಧ್ಯೆ ಹೆಚ್ಚು ಜನ ಸೇರುವ ಮೂಲಕ ದಾಖಲೆ ಬರೆಯಿತು.
ಬೆಳಗಿನ ಜಾವ ರಾಷ್ಟ್ರಧ್ವಜ ನಿಂಬರಗಾ ಪಿಎಸ್‍ಐ ಭೀಮರಾಯ ಅಂಕಲಿ ಅವರು ನೆರವೇರಿಸಿದರೆ, ಕಸಾಪ ಧ್ವಜವನ್ನು ಮಾಡಿಯಾಳ ಕಸಾಪ ವಲಯ ಅಧ್ಯಕ್ಷ ಸಿದ್ಧರಾಮ ಶಿರವಾಳ ನೆರವೇರಿಸಿದರು. ಧ್ವಜ ಅರೋಹಣ ಸಿದ್ಧಗೊಳಿಸಿದ್ದು ಹಾಗೂ ಧ್ವಜವಂದನೆಯನ್ನು ಭಾರತ ಸೇವಾದಳ ತಾಲೂಕು ಅಧಿನಾಯಕ ಶರಣಬಸಪ್ಪ ವಡಗಾಂವ, ಬಿ.ಆರ್. ವೀರಭದ್ರ ಹಾರಕೆ, ಜಮಾದಾರ, ಸ್ಕೌಟ್ ಮತ್ತು ಗೈಡ್ಸ್‍ನ ವೆಂಕಟೇಶ ಮರಾಟೆ ಅಚ್ಚೂಕಟ್ಟಾಗಿ ನೆರವೇರಿಸಿದರು. ಕಸಾಪ ಅಧ್ಯಕ್ಷ ಹಣಮಂತ ಶೇರಿ ಹಾಗೂ ಗ್ರಾಮಸ್ಥರು, ತಡಕಲ್ ಶಿವಲಿಂಗೇಶ್ವರ ಪ್ರೌಢಶಾಲೆಯ ಭಾರತ ಸೇವಾದಳ ವಿದ್ಯಾರ್ಥಿನಿಯರು ಶ್ರಮಿಸಿದರು.
ನಂತರ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ನಾಡದೇವಿ ಭುವನೇಶ್ವರಿ ಹಾಗೂ ಸಾರೋರಟದಲ್ಲಿ ಸಮ್ಮೇಳನಾಧ್ಯಕ್ಷ ಪ್ರಭುಲಿಂಗ ನೀಲೂರ ಅವರ ಕರೆ ತರುವ ಭವ್ಯ ಮೆರವಣಿಗೆಯನ್ನು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಕನ್ನಡ ಧ್ವಜ ಬೀಸುವ ಮೂಲಕ ಉದ್ಘಾಟಿಸಿ ಮೆರವಣಿಗೆ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷರೊಂದಿಗೆ ಗ್ರಾಮದ ಯಳಸಂಗಿ ಕ್ರಾಸ್‍ನಿಂದ ಸಮ್ಮೇಳನ ವೇದಿಕೆಯವರೆಗೆ ಸಮ್ಮೆಳನಾಧ್ಯಕ್ಷ ಪ್ರಭುಲಿಂಗ ನಿಲೂರೆ ಅವರನ್ನೂ ಅದ್ಧೂರಿಯಾಗಿ ನೆರೆ ಹೊರೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಾಲಾ, ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಒಳಗೊಂಡ ಕಲಾತಂಡ ಲಂಬಾಣಿ ನೃತ್ಯ, ವಿದ್ಯಾರ್ಥಿಗಳ ಡೊಳ್ಳು ಕುಣಿತ, ಹಲಿಗೆ ವಾದನ, ಗೊಂದಲಿಗರ ಮೇಳ, ಪಾರಿಜಾತ ಹಾಗೂ ಭಜನೆ ಮೇಳದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ಬಡದಾಳ ಮತ್ತು ಮಾಡಿಯಾಳ ಶ್ರೀಗಳು ಸೇರಿದಂತೆ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ದೊಡ್ಡಮನಿ, ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಯಶ್ವಂತ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ತಾಲೂಕು ಕಸಾಪ ಅಧ್ಯಕ್ಷ ಹಣಮಂತ ಶೇರಿ, ಕಾರ್ಯದರ್ಶಿ ಮಲ್ಲಿನಾಥ ತುಕಾಣೆ, ಸಿದ್ಧಪ್ಪ ಜಮಾದಾರ, ಕೋಶಾಧ್ಯಕ್ಷ ಅಶೋಕ ರೆಡ್ಡಿ, ರೂಪಚಂದ ಮಡ್ಲೆ, ಹವಳಪ್ಪ ಸಂಟನೂರ, ರಾಜಶೇಖರ ಕಡಗನ ಇಕ್ಕಳಕಿ, ಗೋವಿಂದ ಹುಸೇನಖಾನ, ಶಿವಲೀಲಾ ಕವಿತಾಅ ರಾಠೋಡ, ಹಿರಿಯ ಶ್ರೀಮಂತ ಗೋಧೆ, ಕಲ್ಯಾಣಿ ಸಾವಳಗಿ, ಮಲ್ಲಿಕಾರ್ಜುನ ಬುಕ್ಕೆ, ಬಸವರಾಜ ದೊಡ್ಡಮನಿ, ಮೋನಪ್ಪ ಸುತಾರ, ಅಣ್ಣಾಅರಾಯ ಬೋರಟ್ಟಿ ಹಾಗೂ ಕಸಾಪ ಆಳಂದ ವಲಯ ಅಧ್ಯಕ್ಷ ಶಾಂತೇಶ ಹೂಗಾರ, ಮಾದನಹಿಪ್ಪರಗಾ ಅಧ್ಯಕ್ಷ ಸಿದ್ಧಲಿಂಗ ಅಷ್ಟಗಿ, ನಿಂಬರಗಾದ ಅಧ್ಯಕ್ಷ ಪರಮೇಶ್ವರ ದುಗೊಂಡ, ಮಾಡಿಯಾಳ ಅಧ್ಯಕ್ಷ ಸಿದ್ಧರಾಮ ಶಿರವಾಳ, ಖಜೂರಿ ಅಧ್ಯಕ್ಷ ಶ್ರೀಶೈಲ ಭೀಂಪೂರೆ ಮತ್ತು ನರೋಣಾ ಅಧ್ಯಕ್ಷ ಶಿವರಾಜ ತಳವಾರ ಸೇರಿ ಪದಾಧಿಕಾರಿಗಳು, ಗ್ರಾಮದ ಸೂರ್ಯಕಾಂತ ರಾಮಜಿ, ಭಾಗವಹಿಸಿದ್ದರು. ಸಮ್ಮೇಳನ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…