ಚಿಕುಖ್ಯಾತ ರೌಡಿ ಕರ್ಣ ಗಡಿಪಾರು

0
51

ಕಲಬುರಗಿ: ಕುಖ್ಯಾತ ರೌಡಿ ಕರ್ಣ ಅಲಿಯಾಸ್ ರಾಕ್ಸ್ ರಮೇಶ ಜಮಾದಾರನನ್ನು ಗಡಿಪಾರು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ ತಿಳಿಸಿದ್ದಾರೆ.

ನಗರದ ಜಿಡಿಎ ಕಾಲನಿ ಯಲ್ಲಮ್ಮ ಗುಡಿ ನಿವಾಸಿಯದ ಕರ್ಣ ದರೋಡೆ ಕಳ್ಳತನ, ಸುಲಿಗೆ ಸೇರಿದಂತೆ ಹಲವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜಾಮೀನಿನ ಬಿಡುಗಡೆಯಾದ ಮೇಲೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಒಂದು ವರ್ಷದ ಅವಧಿವರೆಗೆ ಶಿವಮೊಗ್ಗ ಜೈಲಿಗೆ ಗಡಿಪಾರು ಮಾಡಲಾಗಿದೆ.

Contact Your\'s Advertisement; 9902492681

ಕರ್ಣ ಸೇರಿದಂತೆ ಈವರೆಗೆ ಆರು ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಬಿಲಾಲಬಾದನ ಮಿರ್ಜಾ ಮೊಹ್ಮದ್, ಬಾಪು ನಗರದ ವಿಜಯಕುಮಾರ ಕಾಂಬಳೆ, ಆರ್.ಎಸ್. ಕಾಲನಿಯ ರಾಜಶೇಖರ ಉಮಾಶೆಟ್ಟಿ, ಯಾದಗಿರಿ ಜಿಲ್ಲೆಯ ಮಣಿಕಂಠ ಮತ್ತು ಕೃಷ್ಣ ಕಾಲನಿಯ ಶೇರ್ ಅಲಿ ಅವರು ಗಡಿಪಾರಾದ ರೌಡಿಗಳಾಗಿದ್ದಾರೆ. ಮಣಿಕಂಠ ರಾಠೋಡ್ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ತಂದಿದಾರೆ ಎಂದು ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here