ಜಿಲ್ಲಾ ಪಂ. CEO ಯಡ್ರಾಮಿ ಆರೋಗ್ಯ ಕೇಂದ್ರಕ್ಕೆ ಭೇಟಿ

0
131

ಯಡ್ರಾಮಿ: ತಾಲ್ಲೂಕ ಸರ್ಕಾರಿ ಆಸ್ಪತ್ರೆ ಆರೋಗ್ಯ ಕೇಂದ್ರದಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (C.E.O) ಸಮುದಾಯ ಆರೋಗ್ಯ ಕೇಂದ್ರ ಯಡ್ರಾಮಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಸಿದ್ದು ಪಾಟೀಲ್  ರವರು ತಾವು ವೈಯಕ್ತಿಕವಾಗಿ 200 ಟಿ.ಬಿ ರೋಗಿಗಳಿಗೆ 6 ತಿಂಗಳವರೆಗೆ ಅವರ ಆರೋಗ್ಯ ಸುಧಾರಣೆಗಾಗಿ  ಪೌಷ್ಟಿಕಾಂಶಯುಕ್ತ ಪೌಡರ್ ನೀಡಲು ದತ್ತು  ತೆಗೆದುಕೊಂಡಿದ್ದು. ಈ ಸಮಾಜ ಮುಖಿ ಮಹತ್ಕಾರ್ಯವನ್ನು ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (C.E.O)  ಜಿಲ್ಲಾ ಪಂಚಾಯತ್ ಕಲಬುರಗಿ ಇವರ ಅಮೃತ ಹಸ್ತದಿಂದ ಪ್ರೋಟೀನ್ ಪೌಡರನ್ನು ಟಿ.ಬಿ ರೋಗಿಗಳಿಗೆ ವಿತರಿಸಲಾಯಿತು.

Contact Your\'s Advertisement; 9902492681

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಮಹತ್ವದ ಕಾರ್ಯಕೈಗೊಂಡಿದ್ದು 2025ರ ವಳಗೆ ಕ್ಷಯ ಮುಕ್ತ ಭಾರತದ ಮಾಡಲು ಕ್ಷಯ ಮಿತ್ರ ಆ್ಯಫ್ ಮೂಲಕ ನೊಂದಾಯಿಸಿಕೊಂಡು ಕ್ಷಯರೋಗದಿಂದ ಬಳಲುತ್ತಿರುವವರಿಗೆ ಸಹಕಾರಿ ಅಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಸಿದ್ದು ಪಾಟೀಲ್ , ಮಕ್ಕಳ ತಜ್ಞರು ಡಾ.ವಿನೀತ ಕುಲಕರ್ಣಿ. ತಾಲೂಕ ಟಿಬಿ ಮೇಲ್ವಿಚಾರಕರು ಅನಂದ ದೊಡ್ಡಮನಿ. ಆರ್ ಕೆಎಸ್ ಕೆ ಆಪ್ತಸಂಲೋಚಕ ಅಶೋಕ್ ಬಡಿಗೇರ್ .

ಐಸಿ ಟಿಸಿ ಆಪ್ತಸಮಾಲೋಚಕಿ ಅಂಬೀಕಾ ಜಾನೆ. ಕ್ಷಯರೋಗಿಗಳು, ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here