ಬಿಸಿ ಬಿಸಿ ಸುದ್ದಿ

ಒಬ್ಬ ಸಾಧಕನಿಗೆ ಸಹೋದರ ದಯಾನಂದ ಮಾದರಿಯಾಗಿದ್ದಾರೆ

ಸುರಪುರ:ನಗರದ ನರಸಿಂಗಪೇಟದಲ್ಲಿ ದ್ರಿಷಿಕಾ ಬಿ ಮುಧೋಳ ಅವರ ಜನ್ಮ ದಿನಾಚರಣೆ ಅಂಗವಾಗಿ ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಗುಳಬಾಳದ ಮರಿಹುಚ್ಚೇಶ್ವರ ಸ್ವಾಮೀಜಿ ಹಾಗೂ ಕರಡಕಲ್‍ನ ಶಾಂತ ರುದ್ರಮುನಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಶಾಸಕ ನರಸಿಂಹ ನಾಯಕ (ರಾಜುಗೌಡ) ಭಾಗವಹಿಸಿ ಮಾತನಾಡಿ,ಇಂದು ಅನೇಕರು ತಮ್ಮ ಜನುಮ ದಿನವನ್ನು ಆಡಂಭರದಿಂದ ಆಚರಿಸುವವರು ಇದ್ದಾರೆ,ಆದರೆ ಜನ್ಮ ದಿನಾಚರಣೆ ಎನ್ನುವುದು ಕೇವಲ ನೆಪವಾಗಿಸಿಕೊಂಡು ವಿವಿಧ ರಂಗಗಳಲ್ಲಿನ ಸಾಧಕರಿಗೆ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಇಂದು ಮುಧೋಳ ಪರಿವಾರ ಜನ್ಮ ದಿನಾಚರಣೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಇಂದು ಬೆಂಗಳೂರಂತ ನಗರದಲ್ಲಿ ಕೇವಲ ಕೆಲಸ ಅರಸಿ ಹೋಗಿ ಇಂದು ಸುಮಾರ 18 ಸಾವಿರ ಮನೆಗಳನ್ನು ನಿರ್ಮಿಸುವ ಮೂಲಕ ಮದ್ಯಮ ವರ್ಗದ ಜನರಿಗೆ ಮನೆಯ ಕನಸನ್ನು ನನಸು ಮಾಡುವ ಮೂಲಕ ಇಂದು ಎಲ್ಲರಿಗೂ ಸಹೋದರ ಡಿಎಸ್ ಮ್ಯಾಕ್ಸ್‍ನ ನಿರ್ದೇಶಕರಾದ ಸಹೋದ ಎಸ್.ಪಿ ದಯಾನಂದ ಇಂದಿನ ಎಲ್ಲ ಸಾಧಕರಿಗೆ ಮಾದರಿಯಾಗಿದ್ದಾರೆ ಎಂದರು.ಕೋವಿಡ್ ಸಂದರ್ಭದಲ್ಲಿ ಎಲ್ಲರು ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಕೈಬಿಟ್ಟರೆ ದಯಾನಂದ ಅವರು ಸುಮಾರು 30 ಸಾವಿರ ಜನರಿಗೆ ಕೋವಿಡ್ ಸಂದರ್ಭದಲ್ಲಿ ನೆವಾಗುವ ಮೂಲಕ ನಾಡು,ದೇಶ ಮಾತ್ರವಲ್ಲದೆ ಜಗತ್ತಿಗೆ ಮಾದಿಯಾಗಿದ್ದಾರೆ ಎಂದರು.

ಡಿಎಸ್ ಮ್ಯಾಕ್ಸ್ ನಿರ್ದೇಶಕ ಎಸ್.ಪಿ ದಯಾನಂದ ಅವರು ಮಾತನಾಡಿ,ನನ್ನ ಸಹೋದರ ಬಸವರಾಜ ತನ್ನ ಸುಪುತ್ರಿಯ ಜನ್ಮ ದಿನವನ್ನು ಸರಳವಾಗಿ ಆಚರಣೆ ಮಾಡುತ್ತಾನೆ ಎಂದು ಭಾವಿಸಿದ್ದೆ,ಆದರೆ ಇಂದು ವಿವಿಧ ರಂಗದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ ಎಂದರು.ಅಲ್ಲದೆ ಇಂದು ನಾವು ಏನು ಸಾಧನೆ ಮಾಡಿಲ್ಲ ಸೇವೆ ಎಂದು ಭಾವಿಸಿ ಸಾಧ್ಯವಾದ ಮಟ್ಟಿಗೆ ನೆರವಾಗುತ್ತಿದ್ದೆವೆ,ಮುಂದೆಯೂ ನಮ್ಮ ಭಾಗದ ಜನರ ಅಭಿವೃಧ್ಧಿಗಾಗಿ ಅನೇಕ ಕಾರ್ಯಗಳನ್ನು ಮಾಡುವ ಯೋಜನೆ ಹೊಂದಲಾಗಿದೆ.ಅದಕ್ಕೆ ನಮ್ಮ ಭಾಗದ ಜನರು ಸದಾ ನೆರವಾಗುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ರಾಜನಕೊಳೂರಿನ ಮೊರಾರ್ಜಿದೇಸಾಯಿ ವಸತಿ ಶಾಲೆ ಮಕ್ಕಳು ಕಬಡ್ಡಿ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತಿಯ ಸ್ಥಾನ ಪಡೆದಿದ್ದರಿಂದ ಸನ್ಮಾನಿಸಲಾಯಿತು.ಅದರಂತೆ ಹತ್ತನೆ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ,ಭಾರತೀಯ ಸೇನೆಯ ಯೋಧ ರಂಗಪ್ಪ ಕವಲಿಗೆ,ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಜ್ಞಾನೋದಯ ಹಾಗೂ ನರಸಿಂಗಪೇಟ ಶಾಲೆಯ ಮಕ್ಕಳಿಗೆ ಬ್ಯಾಗ್ ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಡಿವೈಎಸ್ಪಿ ಡಾ:ಮಂಜುನಾಥ ಟಿ,ಟಿಹೆಚ್‍ಓ ಡಾ:ಆರ್.ವಿ ನಾಯಕ,ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟೆ,ಮಲ್ಲಿಕಾರ್ಜುನ ಸಾಹು ಮುಧೋಳ,ಬಸವರಾಜ ಮುಧೋಳ,ಸೇರಿದಂತೆ ಅನೇಕ ಮುಖಂಡರು ವೇದಿಕೆ ಮೇಲಿದ್ದರು.ಅಮರಯ್ಯಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago