ಸಂಗೀತದಿಂದ ಆರೋಗ್ಯ ವೃದ್ಧಿ

0
9

ಕಲಬುರಗಿ: ನಗರದ ಬ್ರಹ್ಮಪುರ ಬಡಾವಣೆಯ ಕೊಂಡೇದಗಲ್ಲಿಯ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಲಲಿತ ಕಲಾ ಸೇವಾ ಸಂಸ್ಥೆ ಮತ್ತಿಮಡು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಇವರ ಸಹಯೋಗದಲ್ಲಿ ವಚನ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಷ.ಬ್ರ. ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಚೌಡಾಪುರಿ ಹಿರೇಮಠ ಅವರು ಮಾತನಾಡಿ ಸಂಗೀತದಿಂದ ಆರೋಗ್ಯ ವೃದ್ಧಿ ಆಗುತ್ತದೆ ಇದು ವೈಜ್ಞಾನಿಕ ದೃಷ್ಟಿಯಿಂದಲೂ ಸಾಬೀತಾಗಿದೆ ಎಂದರು.

Contact Your\'s Advertisement; 9902492681

ಈ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯೆ ರೇಣುಕಾ ರಾಮು ಗುಮ್ಮಟ್ ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ್ ಅವರು ಮಾತನಾಡಿ ನಿಜವಾದ ಕಲಾವಿದರಿಗೆ ಹಾಗೂ ಕಲಾವಿದರ ಸಂಸ್ಥೆಗೆ ಹೆಚ್ಚಿನ ಅನುದಾನ ಕೊಡಿಸಲು ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರಮಿಸುತ್ತಿದೆ ಕಲೆ ಸಾಹಿತ್ಯ ಸಂಗೀತ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರ ಪ್ರಯತ್ನಿಸುತ್ತದೆ ಎಂದು ತಿಳಿಸಿದರು.

ಲಲಿತಕಲಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಣ್ಣಾರಾವ್ ಶಳ್ಳಗಿ ಮತ್ತಿಮಡು, ಮುಖ್ಯ ಅತಿಥಿಗಳಾಗಿ ರಮೇಶ್ ಹೊಸಪೇಟೆ, ಚಂದ್ರಶೇಖರಯ್ಯ ಸ್ವಾಮಿ, ರಾಜೇಶ್ವರಿ ಸಂತೋಷ್ ತಮಶಟ್ಪಿ, ಕವಿತಾ ಸಂಗಮೇಶ್ ಹೌದೆ, ಬಾಲಚಂದ್ರ ನೆಲ್ಲೂರ್, ಬಸವರಾಜ ಅಷ್ಟಗಿ, ಸುನಿಲ್ ಜಗನ್ನಾಥ್ ಮಹಾಗಾಂವ್, ಚಲನಚಿತ್ರ ನಿರ್ಮಾಪಕ ಗುರುರಾಜ್ ಬಂಡಿ, ಉದ್ಯಮಿ ಸಿದ್ದು ಖೇಣಿ ಮುಂತಾದವರು ಉಪಸ್ಥಿತರಿದ್ದರು.

ನಂತರ ನಡೆದ ವಚನ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಸೈದಪ್ಪ ಚೌಡಾಪುರ್, ಕರಬಸಯ್ಯಸ್ವಾಮಿ ಕೊರವಿ, ವೀರೇಶ್ ವೆಂಕಟ್ ಬೇನೂರ್, ಶರಣಪ್ಪ ಎಚ್ ಕಂಬಾರ್, ತುಳಸಿಮ್ಮ ಅಶೋಕ್, ನಾಗೇಂದ್ರ ಸಪ್ಪಣ ಗೋಳ, ಮಲ್ಲಿಕಾರ್ಜುನ್ ಪಂಚಾಳ, ಸಿದ್ದಲಿಂಗ ನಾಗಪ್ಪ ಕುಂಬಾರ್ ಈ ಎಲ್ಲಾ ಕಲಾವಿದರು ಸಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here