ಬಿಸಿ ಬಿಸಿ ಸುದ್ದಿ

ಮೇದಾರ ಸಮುದಾಯದ ಅಭಿವೃಧ್ಧಿಗೆ ಎಲ್ಲಾ ರೀತಿಯ ನೆರವು

ಸುರಪುರ:ನಗರದ ಮೇದಾರಗಲ್ಲಿಯ ಬಳಿಯಲ್ಲಿನ ಶಿವಶರಣ ಮೇದಾರ ಕೇತಯ್ಯನವರ ನಾಮಫಲಕದ ಬಳಿಯಲ್ಲಿ ಮೇದಾರ ಕೇತಯ್ಯನವರ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ,ಶಿವಶರಣ ಮೇದಾರ ಕೇತಯ್ಯನವರು ಬಸವಾದಿ ಶರಣರ ಸಮಕಾಲಿನ ಮಹಾನ್ ಶರಣರಾಗಿದ್ದು ಅವರ ವಚನಗಳು ಇಂದಿಗೂ ಎಲ್ಲಿರಿಗೂ ದಾರಿದೀಪವಾಗಿವೆ.ಮೇದಾರ ಸಮಾಜ ಯಾವತ್ತೂ ನನ್ನೊಂದಿಗಿದೆ,ನಾನು ಸಮಾಜದೊಂದಿಗಿದ್ದೇನೆ ಸಮಾಜದ ಅಭಿವೃಧ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.ಅಲ್ಲದೆ ಶಾಲೆ ನಿರ್ಮಾಣ, ನಿವಾಸಿಗಳ ಬೇಡಿಕೆಯಂತೆ ಶೌಚಾಲಯ ನಿರ್ಮಿಸಿಕೊಡಲಾಗುವುದು.. ಮೇದಾರ ಗಲ್ಲಿಗೆ ಕಮಾನು, ಪಂಚಲೋಹದ ಮೂರ್ತಿಯನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು.

ಜ.7ರಂದು ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾರ್ಯಕ್ರಮಕ್ಕೆ ಕರೆತರಲು ಶಕ್ತಿಮೀರಿ ಪ್ರಯತ್ನಿಸುವೆ.ಜೊತೆಗೆ ಇಲ್ಲಿಂದ ಹೋಗುವವರಿಗೆ ವ್ಯವಸ್ಥೆ ಕಲ್ಪಿಸುವೆನು, ಸಮುದಾಯ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಎಸ್‍ಟಿಗಿರುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮೇದಾರ ಸಮಾಜದ ರಾಜ್ಯಾಧ್ಯಕ್ಷ ಸಿ.ಸಿ. ಪಾಟೀಲ್ ಮಾತನಾಡಿ, ಜ. 7ರಂದು ಚಿತ್ರದುರ್ಗದ ಮೇದಾರ ಪೀಠದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು, ರಕ್ಷಣ ಸಚಿವ ರಾಜನಾಥ ಸಿಂಗ್ ಉದ್ಘಾಟಿಸುವರು. ಇಡೀ ದೇಶದಲ್ಲಿರುವ ಮೇದಾರ ಪೀಠ ಏಕೈಕವಾಗಿದ್ದು, ಅಖಿಲ ಭಾರತ ಮೇದಾರ ಪೀಠವೆಂದು ನಾಮಕರಣಗೊಳ್ಳಲಿದೆ. ಶಿವಶರಣ ಕೇತೇಶ್ವರ ದಂಪತಿಯ ಪಂಚಲೋಹ ಪುತ್ಥಳಿ ಸೇರಿದಂತೆ ವಿವಿಧ ನಾಲ್ಕು ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ಇಮ್ಮಡಿ ಬಸವ ಮೇದಾರ ಕೇತೇಶ್ವರ ಸೇರಿದಂತೆ ವಿವಿಧ ಹರಚರ ಗುರುಗಳು ಪಾಲ್ಗೊಳ್ಳುವರು. 25111 ಮುತ್ತೈದೆಯರಿಗೆ ಉಡಿತುಂಬಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಸೀಬಾರ ಕೇತೇಶ್ವರ ಮಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಆಶೀರ್ವಚನ ನೀಡಿದರು. ಉಪನ್ಯಾಸಕ ಡಾ. ನಾಗರಾಜ ಚವಲಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ, ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ, ನಗರಸಭೆ ಉಪಾಧ್ಯಕ್ಷ ಮಹೇಶ್ ಪಾಟೀಲ್, ಬಿಜೆಪಿ ಮುಖಂಡ ಶಂಕರನಾಯಕ, ನಗರಸಭೆ ಸದಸ್ಯೆ ಸರೋಜ ಬಸವರಾಜ್, ನಾಮನಿರ್ದೇಶಿತ ಸದಸ್ಯೆ ರೇಣುಕಾ ಈರಣ್ಣ, ಶರಣಗೌಡ, ಭೀಮಣ್ಣ ಕುಲಕರ್ಣಿ, ಪ್ರಕಾಶ ಪಾಟೀಲ, ಬಸವರಾಜ ಕೊಡೇಕಲ್, ನರಸಪ್ಪ ಚಾಮನಾಳ, ಕೃಷ್ಣ, ನಾಗಣ್ಣ ಚವಲಕರ್, ಗೋಪಾಲ ಗುತ್ತೇದಾರ, ರಾಘವೇಂದ್ರ ಪೊಲೀಸ್, ದೇವೇಂದ್ರಪ್ಪ ಮಾಸ್ತರ್, ರಾಘವೇಂದ್ರ ಬಾಳೆಕಾಯಿ, ಲಕ್ಷ್ಮಣ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago