ಶಾಸಕ ನರಸಿಂಹನಾಯಕ ಜನ್ಮ ದಿನಾಚರಣೆ: ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ

0
7

ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹನಾಯಕ (ರಾಜುಗೌಡ)ರವರ 44ನೇ ಜನ್ಮ ದಿನಾಚರಣೆಯನ್ನು ಮಂಗಳವಾರದಂದು ಅದ್ದೂರಿಯಾಗಿ ಆಚರಿಸಲಾಯಿತು.

ಜನ್ಮ ದಿನಾಚರಣೆ ಪ್ರಯುಕ್ತ ಮಾತೋಶ್ರೀ ತಿಮ್ಮಮ್ಮ ಮೆಮೋರಿಯಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ನಗರದ ದೀವಳಗುಡ್ಡ ಬಳಿ ರಾಜಾನಂದ ನಗರದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಚಾಲನೆ ನೀಡಿದರು, ಶಾಸಕ ರಾಜುಗೌಡರವರವರು ಶಾಸಕರಾಗಿ ಅನೇಕ ಜನಪರ ಕಲ್ಯಾಣದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ ಅವರ ಜನ್ಮದಿನದಿಂದು ಕೂಡಾ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು, ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಗ್ನಿ ರೇವಣಸಿದ್ದೇಶ್ವರ ಮಠದ ಶ್ರೀಗಳು, ಮುಖಂಡರಾದ ರಾಜಾ ಹನುಮಪ್ಪ ನಾಯಕ(ತಾತಾ), ಡಾ.ಸುರೇಶ ಸಜ್ಜನ್, ಡಾ.ಬಿ.ಎಂ.ಅಳ್ಳಿಕೋಟಿ, ಡಿಎಸ್‍ಮ್ಯಾಕ್ಸ್ ಡಾ.ದಯಾನಂದ.ಪಿ, ಹೆಚ್.ಸಿ.ಪಾಟೀಲ, ಬಸನಗೌಡ ಯಡಿಯಾಪುರ, ಪ್ರಕಾಶ ಸಜ್ಜನ್, ಮಹ್ಮದ ಸಲೀಂ ವರ್ತಿ, ತಾಲೂಕು ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ, ರಾಜಾ ಮುಕುಂದ ನಾಯಕ, ಶಂಕರ ನಾಯಕ, ಶ್ರೀನಿವಾಸ ನಾಯಕ, ಪಾರಪ್ಪ ಗುತ್ತೇದಾರ, ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ ಸೇರಿದಂತೆ ನಗರಸಭೆ ಸದಸ್ಯರಾದ ನರಸಿಂಹಕಾಂತ ಪಂಚಮಗಿರಿ, ಶಿವಕುಮಾರ ಕಟ್ಟಿಮನಿ ಸೇರಿದಂತೆ ನಗರಸಭೆ ಸದಸ್ಯರು, ರಾಜಗೌಡ ಅಭಿಮಾನಿ ಸಂಘದ ಮುಖಂಡರು ಹಾಗೂ ಬಿಜೆಪಿ ಪಕ್ಷದ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಆರೋಗ್ಯ ತಪಾಸನೆ ಮಾಡಿಸಿಕೊಂಡರು ಈ ಸಂದರ್ಭದಲ್ಲಿ ತೀವ್ರ ಕಾಯಿಲೆ ಇರುವ ಕೆಲವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲು ಶಿಫಾರಸ್ಸು ಕೈಗೊಳ್ಳಲಾಯಿತು.

ಶಾಸಕ ರಾಜುಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಮುಖಂಡ ರಾಜಾ ಹನುಮಪ್ಪ ನಾಯಕ(ತಾತಾ) ಉದ್ಘಾಟಿಸಿದರು, ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು,ಅಗ್ನಿ ರೇವಣಸಿದ್ದೇಶ್ವರ ಮಠದ ಶ್ರೀಗಳು, ಮುಖಂಡರಾದ ರಾಜಾ ಹನುಮಪ್ಪ ನಾಯಕ(ತಾತಾ), ಡಾ.ಸುರೇಶ ಸಜ್ಜನ್, ಡಾ.ಬಿ.ಎಂ.ಅಳ್ಳಿಕೋಟಿ, ಡಿಎಸ್‍ಮ್ಯಾಕ್ಸ್‍ನ ಡಾ.ದಯಾನಂದ.ಪಿ, ಹೆಚ್.ಸಿ.ಪಾಟೀಲ, ಬಸನಗೌಡ ಯಡಿಯಾಪುರ, ಪ್ರಕಾಶ ಸಜ್ಜನ್ ಇತರರಿದ್ದರು ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ರಕ್ತದಾನಗೈದರು.

ತಮ್ಮ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವತ: ಶಾಸಕ ರಾಜುಗೌಡರವರು ಕೂಡಾ ಹೆಸರು ನೊಂದಾಯಿಸಿ ರಕ್ತದಾನಗೈದರು, ಅಪಘಾತಗಳಾದಾಗ ಹಾಗೂ ಇನೀತರ ತುರ್ತು ಸಂದರ್ಭಗಳಲ್ಲಿ ರಕ್ತದಾನ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಅಲ್ಲದೆ ರಕ್ತದಾನ ಮಾಡುವದರಿಂದ ಆರೋಗ್ಯ ಕೂಡಾ ಚೆನ್ನಾಗಿರುತ್ತದೆ ಯುವಕರು ರಕ್ತದಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಬೈಕ್ ರ್ಯಾಲಿ : ಜನ್ಮದಿನದ ಪ್ರಯುಕ್ತ ತಾಲೂಕಿನ ದೇವಾಪುರ ದಿಂದ ಕಾರ್ಯಕ್ರಮ ನಡೆಯುವ ದೀವಳಗುಡ್ಡ ಬಳಿ ಇರುವ ಸ್ಥಳದವರೆಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತುನಗರದ ಪ್ರಮುಖ ರಸ್ತೆಗಳ ಮೂಲಕ ನೂರಾರು ಬೈಕ್‍ಗಳಲ್ಲಿ ರ್ಯಾಲಿ ನಡೆಯಿತು.

ದೇವಾಪುರ ದಿಂದ ಬೈಕ್ ರ್ಯಾಲಿ ಮೂಲಕ ಶಾಸಕ ರಾಜುಗೌಡರವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಸಂದರ್ಭದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಅಭಿಮಾನಿಗಳು ಶಾಸಕ ರಾಜುಗೌಡರವರಿಗೆ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸನ್ಮಾನಿಸಿದರು ನಾಲ್ಕು ಕಡೆಗಳಿಂದ ಜೆಸಿಬಿ ಮೂಲಕ ಹೂವುಗಳ ಸುರಿಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು.

ಅನ್ನ ಸಂತರ್ಪಣೆ :
ಶಾಸಕ ರಾಜುಗೌಡರವರ ಜನ್ಮದಿನದ ಪ್ರಯುಕ್ತ ನಗರದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು ನಗರದ
ಮಹಾತ್ಮ ಗಾಂಧಿ ವೃತ್ತ, ತಿಮ್ಮಾಪುರ ಬಸ್ ನಿಲ್ದಾಣ, ನಾಲ್ವಡಿ ರಾಜಾ ವೆಂಕಟಪ್ಪ ನಾಯಕ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಹಾಗೂ ಕುಂಬಾರ ಪೇಟೆ ವೃತ್ತಗಳಲ್ಲಿ ಅಭಿಮಾನಿಗಳ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪಾಲು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here