ಕಲಬುರಗಿ: ಮುಂಜಾನೆ ನಡುಗುವ ಚಳಿ ಆವರಿಸಿ, ಮಧ್ಯಾಹ್ನ ನೆತ್ತಿಯ ಸುಡುವ ಬಿಸಿಲು ಕಲಬುರ್ಗಿ ಜಿಲ್ಲೆಯಲ್ಲಿತ್ತು. ಇದರ ನಡುವೆ ಜಿಲ್ಲೆ ಸೇಡಂ ತಾಲ್ಲೂಕು ಮಳಖೇಡದಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಣ್ಣಾರೆ ಕಂಡು, ಅವರ ಮಾತುಗಳನ್ನು ಆಲಿಸಲು ಸಾಗರೋಪಾದಿಯಲ್ಲಿ ಹರಿದುಬಂದಿದ್ದು ಕಂಡುಬಂತು.
ಅಲೆಮಾರಿ ಬದುಕಿನಲ್ಲಿ ಖಾಯಂ ಸೂರಿಲ್ಲದೆ ಸಂಕಟ ಎದುರಿಸುತ್ತಿದ್ದ ಲಂಬಾಣಿ, ಹಾಡಿ, ಹಟ್ಟಿ ಮುಂತಾದ ಪ್ರದೇಶಗಳ ಜನರಿಗೆ ಸಂಕಷ್ಟ ಕೊನೆಗಾಣಿಸಿ, ಅವರಿಗೂ ಶಾಶ್ವತ ಸೂರು ಕಲ್ಪಿಸಲು ಸರ್ಕಾರ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿಸಿದ್ದರಿಂದ ಬಡ ಅಲೆಮಾರಿ ಸಮುದಾಯಕ್ಕೆ ನೆಲೆಯ ಹಕ್ಕುಪತ್ರ ಪಡೆಯಲು ಸಾಧ್ಯವಾಗಿದೆ. ಸರ್ಕಾರ ಒಂದೇ ವೇದಿಕೆಯಲ್ಲಿ 5 ಜಿಲ್ಲೆಗಳ 372 ಗ್ರಾಮಗಳ 52072 ಜನರಿಗೆ ಹಕ್ಕುಪತ್ರ ವಿತರಿಸುವ ಐತಿಹಾಸಿಕ ಹಾಗೂ ದಾಖಲೆಯ ಕಾರ್ಯಕ್ರಮವನ್ನು ಏರ್ಪಡಿಸಿ, ಶತಮಾನಗಳ ಕಾಲ ಅಲೆಮಾರಿಗಳಾಗಿದ್ದವರಿಗೆ ಬದುಕು ಕಟ್ಟಿಕೊಡುವ ಅಪೂರ್ವ ಹಾಗೂ ಶ್ಲಾಘನೀಯ ಕಾರ್ಯ ಮಾಡಿದೆ.
ಕಂದಾಯ ಸಚಿವ ಆರ್. ಅಶೋಕ್ ಅವರೇ ಖುದ್ದಾಗಿ ವೇದಿಕೆಯಲ್ಲಿ ನಿಂತು, ಇಡೀ ಸಮಾರಂಭದ ಆಯೋಜನೆಯ ನೇತೃತ್ವ ವಹಿಸಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ, ಸಾರ್ವಜನಿಕರನ್ನು ಗ್ಯಾಲರಿಗಳಿಗೆ ಫ್ರವೇಶಕ್ಕೆ ಅವಕಾಶ ಮಾಡಿಸಿಕೊಟ್ಟರು, ಅಲ್ಲದೆ ನುಗ್ಗಿಬರುತ್ತಿದ್ದವರನ್ನು ಸಾವಧಾನವಾಗಿ ಬಂದು ಶಾಂತರೀತಿಯಲ್ಲಿ ಆಸನಗಳಲ್ಲಿ ಕುಳಿತುಕೊಳ್ಳಲು ಆಗಾಗ್ಗೆ ಮೈಕ್ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು.
ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಮಳಖೇಡಕ್ಕೆ ಆಗಮಿಸುತ್ತಿದ್ದ ಲಂಬಾಣಿ ಸಮುದಾಯದ ಜನ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ತಮ್ಮದೇ ಶೈಲಿಯ ಹಾಡುಗಳನ್ನು ಹಾಡುತ್ತ, ವಾದ್ಯಮೇಳಗಳೊಂದಿಗೆ, ನೃತ್ಯ ಮಾಡುತ್ತಾ, ಹಬ್ಬದ ವಾತಾವರಣದೊಂದಿಗೆ, ಆಗಮಿಸಿ, ಸಂಭ್ರಮಿಸಿದ್ದು ಕಂಡುಬಂದಿತು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…