ಹೇಗಿತ್ತು ಪ್ರಧಾನಿ ಮೋದಿ ಅವರ ಕಲಬುರಗಿ ಕಾರ್ಯಕ್ರಮ

0
34

ಕಲಬುರಗಿ: ಮುಂಜಾನೆ ನಡುಗುವ ಚಳಿ ಆವರಿಸಿ, ಮಧ್ಯಾಹ್ನ ನೆತ್ತಿಯ ಸುಡುವ ಬಿಸಿಲು ಕಲಬುರ್ಗಿ ಜಿಲ್ಲೆಯಲ್ಲಿತ್ತು.  ಇದರ ನಡುವೆ ಜಿಲ್ಲೆ ಸೇಡಂ ತಾಲ್ಲೂಕು ಮಳಖೇಡದಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ,  ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಣ್ಣಾರೆ ಕಂಡು, ಅವರ ಮಾತುಗಳನ್ನು ಆಲಿಸಲು ಸಾಗರೋಪಾದಿಯಲ್ಲಿ ಹರಿದುಬಂದಿದ್ದು ಕಂಡುಬಂತು.

ಅಲೆಮಾರಿ ಬದುಕಿನಲ್ಲಿ ಖಾಯಂ ಸೂರಿಲ್ಲದೆ ಸಂಕಟ ಎದುರಿಸುತ್ತಿದ್ದ ಲಂಬಾಣಿ, ಹಾಡಿ, ಹಟ್ಟಿ ಮುಂತಾದ ಪ್ರದೇಶಗಳ ಜನರಿಗೆ ಸಂಕಷ್ಟ ಕೊನೆಗಾಣಿಸಿ, ಅವರಿಗೂ ಶಾಶ್ವತ ಸೂರು ಕಲ್ಪಿಸಲು ಸರ್ಕಾರ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿಸಿದ್ದರಿಂದ ಬಡ ಅಲೆಮಾರಿ ಸಮುದಾಯಕ್ಕೆ ನೆಲೆಯ ಹಕ್ಕುಪತ್ರ ಪಡೆಯಲು ಸಾಧ್ಯವಾಗಿದೆ.  ಸರ್ಕಾರ ಒಂದೇ ವೇದಿಕೆಯಲ್ಲಿ 5 ಜಿಲ್ಲೆಗಳ 372 ಗ್ರಾಮಗಳ 52072 ಜನರಿಗೆ ಹಕ್ಕುಪತ್ರ ವಿತರಿಸುವ ಐತಿಹಾಸಿಕ ಹಾಗೂ ದಾಖಲೆಯ ಕಾರ್ಯಕ್ರಮವನ್ನು ಏರ್ಪಡಿಸಿ, ಶತಮಾನಗಳ ಕಾಲ ಅಲೆಮಾರಿಗಳಾಗಿದ್ದವರಿಗೆ ಬದುಕು ಕಟ್ಟಿಕೊಡುವ ಅಪೂರ್ವ ಹಾಗೂ ಶ್ಲಾಘನೀಯ ಕಾರ್ಯ ಮಾಡಿದೆ.

Contact Your\'s Advertisement; 9902492681

ಕಂದಾಯ ಸಚಿವ ಆರ್. ಅಶೋಕ್ ಅವರೇ ಖುದ್ದಾಗಿ ವೇದಿಕೆಯಲ್ಲಿ ನಿಂತು, ಇಡೀ ಸಮಾರಂಭದ ಆಯೋಜನೆಯ ನೇತೃತ್ವ ವಹಿಸಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ, ಸಾರ್ವಜನಿಕರನ್ನು ಗ್ಯಾಲರಿಗಳಿಗೆ ಫ್ರವೇಶಕ್ಕೆ ಅವಕಾಶ ಮಾಡಿಸಿಕೊಟ್ಟರು, ಅಲ್ಲದೆ ನುಗ್ಗಿಬರುತ್ತಿದ್ದವರನ್ನು ಸಾವಧಾನವಾಗಿ ಬಂದು ಶಾಂತರೀತಿಯಲ್ಲಿ  ಆಸನಗಳಲ್ಲಿ ಕುಳಿತುಕೊಳ್ಳಲು ಆಗಾಗ್ಗೆ ಮೈಕ್ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು.

ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಮಳಖೇಡಕ್ಕೆ ಆಗಮಿಸುತ್ತಿದ್ದ ಲಂಬಾಣಿ ಸಮುದಾಯದ ಜನ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ತಮ್ಮದೇ ಶೈಲಿಯ ಹಾಡುಗಳನ್ನು ಹಾಡುತ್ತ, ವಾದ್ಯಮೇಳಗಳೊಂದಿಗೆ, ನೃತ್ಯ ಮಾಡುತ್ತಾ, ಹಬ್ಬದ ವಾತಾವರಣದೊಂದಿಗೆ, ಆಗಮಿಸಿ, ಸಂಭ್ರಮಿಸಿದ್ದು ಕಂಡುಬಂದಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here