ಭಾಷಾ ಅಧ್ಯಯನದಿಂದ ಹೆಚ್ಚಿನ ಅಂಕ ಗಳಿಕೆ

ಕಲಬುರಗಿ : ಕನ್ನಡ ಭಾಷಾ ಅಧ್ಯಯನ ಎಲ್ಲದಕ್ಕೂ ಮೂಲವಾಗಿದ್ದು, ಪರಿಣಾಮಕಾರಿಯಾಗಿ ಓದುವುದರ ಜತೆಗೆ ಪರೀಕ್ಷೆಯಲ್ಲಿ ಸ್ಪಷ್ಟತೆ, ಸಂಕ್ಷಿಪ್ತತೆ ಹಾಗೂ ನಿಖರತೆಯಿಂದ ಬರೆಯುವುದರಿಂದ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.

ನಗರದ ಜೇವರ್ಗಿ ರಸ್ತೆಯಲ್ಲಿರುವ ದಿಶಾ ಪಿಯು ವಿಜ್ಞಾನ ಕಾಲೇಜಿನಲ್ಲಿ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಹಾಗೂ ಸಂಕಲ್ಪ ಫೌಂಡೇಷನ್ ಜತೆಗೂಡಿ ಶನಿವಾರ ಹಮ್ಮಿಕೊಂಡಿದ್ದ ಸಂತ ಜೋಸೆಫ್ ಕಾಲೇಜಿನ ಕನ್ನಡ ಉಪನ್ಯಾಸ ಡಾ.ಚಿ.ಸಿ.ನಿಂಗಣ್ಣ ಸಂಪಾದಿಸಿರುವ ದ್ವಿತೀಯ ಪಿಯುಸಿ ಕನ್ನಡ ಭಾಷೆ ಹೊಸ ಮಾದರಿ ಪ್ರಶ್ನೋತ್ತರ ಸೂಚಿ ಪುಸ್ತಕ ಬಿಡುಗಡೆ ಸಮಾರಂಭವನು ಉದ್ಘಾಟಿಸಿ ಮಾತನಾಡಿ, ಹೊಸ ಪರೀಕ್ಷಾ ವಿಧಾನದಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಎಲ್ಲ ವಿಷಯಗಳಲ್ಲಿ ನೀಡಲಾಗುತ್ತಿದೆ. ಹೀಗಾಗಿ ಎಲ್ಲ ಪಾಠಗಳನ್ನು ಶ್ರದ್ಧೆಯಿಂದ ಓದಬೇಕು ಎಂದರು.

ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಾಗ ಗೊಂದಲಕ್ಕೀಡಾದರೆ ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ.ಹೀಗಾಗಿ ವಿದ್ಯಾರ್ಥಿಗಳು ಕನಿಷ್ಠ 40 ಅಂಕಗಳನ್ನು ಗಳಿಸಲು ಅನುವು ಮಾಡಿಕೊಡಲು ಚಿ.ಸಿ.ನಿಂಗಣ್ಣ ಅವರು ರಚಿಸಿದ ಕನ್ನಡ ಭಾಷೆ ಪ್ರಶ್ನೋತ್ತರ ಸೂಚಿ ಸಹಕಾರಿಯಾಗಿದೆ. ಇದನ್ನು ಎಲ್ಲ ವಿದ್ಯಾರ್ಥಿಗಳು ಓದಬೇಕು ಎಂದು ತಿಳಿಸಿದರು.

ಭಾಷೆ ಬಲಪಡಿಸಿದರೆ, ನಾವು ಸಹಜವಾಗಿಯೇ ಬಲಗೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಅಧ್ಯಯನ ಮಾಡಬೇಕು. ಭಾಷೆ ಹಿಡಿತ, ವ್ಯಾಕರಣ ಶುದ್ಧವಾಗಿರಬೇಕು. ಬರವಣಿಗೆ ನೀಟಾಗಿರಬೇಕು ಎಂದು ಮೂಳೆಗಾಂವ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪುಸ್ತಕ ಪ್ರಕಟಿಸಿರುವ ಸಿದ್ದಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೇಕ್ ಅವರು ಮಾತನಾಡಿ, ದ್ವಿತೀಯ ಪಿಯಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಪುಸ್ತಕ ಮುದ್ರಿಸಿ ನಿಮಗೆ ತಲುಪಿಸಲಾಗುತ್ತಿದೆ. ಝರಾಕ್ಸ್ ಮಾಡಿಕೊಳ್ಳುವ ದರದಲ್ಲಿಯೇ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ನಮ್ಮ ಗುರಿ. ಪಿಯು ಉಪ ನಿರ್ದೇಶಕರು ಉಳಿದ ವಿಷಯಗಳ ಬಹು ಆಯ್ಕೆ ಪ್ರಶ್ನೋತ್ತರ ಸೂಚಿಯನ್ನು ನೀಡಿದರೆ ವಾರದಲ್ಲಿ ಪ್ರಕಟಿಸಲಾಗುವುದು ಎಂದರು.

ಸಂಪಾದಕರಾದ ಡಾ.ಚಿ.ಸಿ.ಲಿಂಗಣ್ಣ ಮಾತನಾಡಿ, ಕಳೆದ ವರ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳು ಕನ್ನಡಲ್ಲಿಯೇ ಫೇಲ್ ಆಗಿದ್ದರು. ಹೀಗಾಗಿ ಅವರಿಗೆ ಹೊಸ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸಲು ಸರಳವಾಗಿ ಆಗಲಿ ಎಂಬ ಸದುz್ದÉೀಶದಿಂದ ಈ ಸೂಚಿಯನ್ನು ರಚಿಸಿದೆ. ಅದನ್ನು ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯವರು ಪ್ರಕಟಿಸಿದರು. ಇದರಿಂದ ಏನಿಲ್ಲವೆಂದರೂ 40 ಗಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ದಿಶಾ ಪಿಯು ವಿಜ್ಞಾನ ಕಾಲೇಜಿನ ಸಂಸ್ಥಾಪಕರಾದ ಶಿವಾನಂದ ಖಜೂರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ದ್ವಿತೀಯ ಪಿಯುಸಿ ಕನ್ನಡ ಭಾಷೆ ಹೊಸ ಮಾದರಿ ಪ್ರಶ್ನೋತ್ತರ ಸೂಚಿ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕ ಕುರಿತು ಜಿಲಾನಾಬಾದ ಕಾಲೇಜಿನ ಪ್ರಾಚಾರ್ಯ ಡಾ.ಗೌಸುದ್ದೀನ್ ತುಮಕೂರಕರ್ ಮಾತನಾಡಿದರು.

ಕಲಬುರಗಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ, ಶರಣಬಸವೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಬಿ.ಸಿ.ಚವ್ಹಾಣ, ಕರ್ನಾಟಕ ರಾಜ್ಯ ಅನುದಾನಿತ ಪಿಯು ಕಾಲೇಜುಗಳ ಒಕ್ಕೂಟದ ಉಪಾಧ್ಯಕ್ಷ ಬಿ.ಎಸ್.ಮಾಲಿಪಾಟೀಲ್, ಎಂಪಿಎಚ್‍ಎಸ್ ಪ್ರಾಚಾರ್ಯ ಮಲ್ಲೇಶಿ ನಾಟೀಕಾರ,ಉಪನ್ಯಾಸಕರಾದ ಚಂದ್ರಶೇಖರ ದೊಡ್ಡಮನಿ, ವಿಜಯಕುಮಾರ ರೋಣದ, ರಮೇಶ ಬಡಿಗೇರ, ದೇವಿದಾಸ ಪವಾರ, ಸಾಹಿತಿಗಳಾದ ಪ.ಮಾನು ಸಗರ, ಡಾ.ಗವಿಸಿದ್ದಪ್ಪ ಪಾಟೀಲ, ಗುರುಕುಲ ಕಾಲೇಜಿನ ಅನಿಲ್ ಮೊದಲಾದವರಿದ್ದರು. ಸತ್ಯಂ ಪಿಯು ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಿರಗುಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವೇದಿಕಾ ಪ್ರಾರ್ಥಿಸಿದರು.

ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ನಮ್ಮ ಕಾಲೇಜಿನ ವಿದ್ಯಾರ್ಥಿ ಪಡೆದುಕೊಂಡಿದ್ದು, ಈ ಸಲ ಮೊದಲ ರ್ಯಾಂಕ್ ಗಳಿಸುವುದು ನಮ್ಮ ಗುರಿಯಾಗಿದೆ. ಗುಣಮಟ್ಟದ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಚಿ.ಸಿ.ನಿಂಗಣ್ಣ ಅವರು ರಚಿಸಿದ ಕೃತಿ ಮಾದರಿಯಾಗಿದೆ. ಇನ್ನುಳಿದ ವಿಷಯಗಳಿಗೂ ಇಂತಹ ಪುಸ್ತಿಕೆ ತರಲು ಪಿಯು ಶಿಕ್ಷಣ ಇಲಾಖೆ ಮುಂದಾಗಲು ಕೋರಿಕೆ.- ಶಿವಾನಂದ ಖಜೂರಿ ದಿಶಾ ಪಿಯು ಕಾಲೇಜಿನ ಅಧ್ಯಕ್ಷರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

5 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

8 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

13 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

15 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420