ಶಹಾಬಾದ: ವಿಶ್ವಗುರು ಬಸವಣ್ಣನವರ ಅಶ್ವಾರೂಢ ಪ್ರತಿಮೆ ಅನಾವರಣ ಫೆ.27ಕ್ಕೆ

0
33

ಶಹಾಬಾದ: ನಗರದ ಬಸವೇಶ್ವರ ವೃತ್ತದಲ್ಲಿ ಕಣ್ಮನ ಸೆಳೆಯುವ ವಿಶ್ವಗುರು ಬಸವಣ್ಣನವರ ಅಶ್ವಾರೂಢ ಪ್ರತಿಮೆ ಅನಾವರಣಕ್ಕೆ ಸಕಲ ಸಿದ್ಧವಾಗಿದೆ. ಸುಮಾರು 50 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಾಣವಾಗಿದೆ.

ನಗರದ ಬಸವೇಶ್ವರ ವೃತ್ತದಲ್ಲಿ 14 ಅಡಿ ಎತ್ತರದ ಪಂಚಲೋಹದ ಅಶ್ವಾರೂಢ ಪ್ರತಿಮೆಯನ್ನು ಅಡಿಗಲ್ಲಿನ ಮೇಲೆ ಕೂಡಿಸಿದ್ದು, ನಗರಸಭೆಯಿಂದ ಸುಮಾರು ವಾರದಿಂದ ಅನಾವರಣಕ್ಕೆ ಸಕಲ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.

Contact Your\'s Advertisement; 9902492681

ಇದೇ ಫೆ.27ರಂದು ಮಧ್ಯಾಹ್ನ 12:30 ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ಅವರು ಅನಾವರಣಗೊಳಿಸಲಿದ್ದಾರೆ.ಶಾಸಕ ಬಸವರಾಜ ಮತ್ತಿಮಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅದ್ದೂರಿ ಕಾರ್ಯಕ್ರಮದ ಆಯೋಜನೆಗೆ ನಗರಸಭೆಯ ಪೌರಾಯುಕ್ತ ಬಸವರಾಜ ಹೆಬ್ಬಾಳ ಅವರು ಸಕಲ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪ್ರತಿಮೆಯ ಸುತ್ತಮುತ್ತಲೂ ಸಮತಟ್ಟು ಮಾಡಲಾಗಿದೆ.ರಸ್ತೆಯ ಬದಿಯಲ್ಲಿರುವ ಎಲ್ಲಾ ಕಡೆ ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆಯೂ ಕೈಗೊಳ್ಳಲಾಗಿದೆ. ಎಲ್ಲಾ ಸಿದ್ಧತಾ ಕಾರ್ಯಗಳನ್ನು ಕಂಡು ಬಹುವರ್ಷಗಳಿಂದ ಸ್ಥಾಪನೆ ಮಾಡಲು ಉದ್ದೇಶಿರುವ ಬಸವಣ್ಣನವರ ಕಂಚಿನ ಪ್ರತಿಮೆ ಅನಾವರಣಕ್ಕೆ ಸಿಂಗಾರ ಗೊಳ್ಳುತ್ತಿರುವುದಕ್ಕೆ ನಗರದ ಎಲ್ಲಾ ಸಮಾಜದ ಬಂಧುಗಳಲ್ಲಿ ಸಂತೋಷ ವ್ಯಕ್ತವಾಗಿದೆ.

ಸುತ್ತಮುತ್ತಲಿನ 2015-16 ರಲ್ಲಿ ನಗರಸಭೆಯ ಎಸ್‍ಎಫ್‍ಸಿ ಯೋಜನೆಯಡಿ ಅನುದಾನದಲ್ಲಿ ಬಸವೇಶ್ವರ ಅಶ್ವಾರೂಢ ಪ್ರತಿಮೆ ಬಸವೇಶ್ವರ ವೃತ್ತದ ಸಮೀಪ ನಿರ್ಮಾಣ ಮಾಡಲು ನಗರಸಭೆಯ ಸಾಮನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದರು.ಅಲ್ಲಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವನ್ನು ಶಾಸಕ ಬಸವರಾಜ ಮತ್ತಿಮಡು ಅವರು ಶಾಸಕರಾದ ನಂತರ ಮುತುವರ್ಜಿ ವಹಿಸಿ ನಗರಸಭೆಯ ಸಾಮನ್ಯ ಸಭೆಯಲ್ಲಿ ಅವರ ಸಮ್ಮುಖದಲ್ಲಿಯೇ ನಗರಸಭೆಯ ಅನುದಾನದಲ್ಲಿ ಹೆಚ್ಚುವರಿಯಾಗಿ ಸುಮಾರು 20 ಲಕ್ಷ ರೂ. ಅನುದಾನ ಕಾಯ್ದಿರಿಸಲು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಕಾಯ್ದಿರಿಸಲಾಯಿತು.

ಮೂರ್ತಿಗೆ ಸುಮಾರು 39 ಲಕ್ಷ ರೂ.,ಅಡಿಗಲ್ಲಿಗೆ ಸುಮಾರು 9 ಲಕ್ಷ ರೂ ಕ್ರೀಯಾಯೋಜನೆ ಮಾಡಲಾಯಿತು. ಸುಮಾರು ವರ್ಷಗಳಿಂದ ಅನಾವರಣಗೊಳ್ಳಬೇಕಿದ್ದ ಪ್ರತಿಮೆ ವಿಳಂಬವಾದರೂ ಅನಾವರಣಗೊಳ್ಳುತ್ತಿರುವುದಕ್ಕೆ ಬಸವ ಅನುಯಾಯಿಗಳಲ್ಲಿ ಎಲ್ಲಿಲ್ಲದ ಉಲ್ಲಾಸ ಮೂಡಿಸಿದೆ.ಇಲ್ಲಿನ ವೀರಶೈವ ಲಿಂಗಾಯತ ಸಮಾಜದ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ.

ಇಲ್ಲಿನ ಶ್ರೀಬಸವೇಶ್ವರ ವತ್ತದ ಬಳಿ ಪ್ರತಿμÁ್ಠಪಿಸಿರುವ ಬಸವೇಶ್ವರ ಪುತ್ಥಳಿ ಅನಾವರಣ ಫೆ.27ರಂದು ನಡೆಯಲಿದ್ದು ನಾನಾ ತಯಾರಿಗಳು ಭರದಿಂದ ನಡೆದಿವೆ. ನಗರಸಭೆಯ ಸರ್ವ ಸದಸ್ಯರ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಹಾಗೂ ಸ್ಥಳೀಯರ ಬಹಳ ದಿನಗಳ ಬಯಕೆಯಂತೆ ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ಸಜ್ಜಾಗಿದೆ.ಎಲ್ಲರನ್ನು ಅಪ್ಪಿಕೊಂಡ ವಿಶ್ವಗುರು ಬಸವಣ್ಣನವರ ಪ್ರತಿಮೆ ಅನಾವರಣವಾಗುತ್ತಿರುವುದು ನನಗೆ ಅತೀವ ಸಂತೋಷವಾಗಿದೆ. – ಬಸವರಾಜ ಹೆಬ್ಬಾಳ, ಪೌರಾಯುಕ್ತರು ನಗರಸಭೆ ಶಹಾಬಾದ.

ಜಗತ್ತಿಗೆ ಸಮಾನತೆಯ ತತ್ವವನ್ನು ಹೇಳಿ, ನುಡಿದಂತೆ ನಡೆದ ಅಣ್ಣ ಬಸವಣ್ಣನವರ ಮೂರ್ತಿ ಅನಾವರಣಕ್ಕೆ ಸಜ್ಜಾಗಿರುವುದು ನಮಗೆಲ್ಲರಿಗೂ ಸಂತಸದ ಕ್ಷಣ. ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡುವುದು ವೀರಶೈವ ಸಮಾಜದ ಅಧ್ಯಕ್ಷರಾಗಿದ್ದ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಅವರ ಕನಸಾಗಿತ್ತು.ಅವರ ಕನಸನ್ನು ನನಸು ಮಾಡಲು ಸಹಕರಿಸಿದ ನಗರಸಭೆಯ ಪದಾಧಿಕಾರಿ, ಅಧಿಕಾರಿ, ಸರ್ವ ಸದಸ್ಯರಿಗೆ ಹಾಗೂ ಶಹಾಬಾದ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆವೆ. – ಅಣವೀರ ಇಂಗಿನಶೆಟ್ಟಿ, ಮುಖಂಡರು ವೀರಶೈವ ಸಮಾಜ ಶಹಾಬಾದ.

26ಎಸ್‍ಬಿಡಿ1(ಸಿ)
ಶಹಾಬಾದ:ಬಸವರಾಜ ಹೆಬ್ಬಾಳ

ಚಿತ್ರ ಶೀರ್ಷಿಕೆ
26ಎಸ್‍ಬಿಡಿ1(ಎ)
ಶಹಾಬಾದ:ಅಣವೀರ ಇಂಗಿನಶೆಟ್ಟಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here