ಬಿಸಿ ಬಿಸಿ ಸುದ್ದಿ

ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ಕಲಬುರಗಿ: ನಾವು ಭೌತಿಕ ಸಂಪತ್ತು ಎಷ್ಟಾದರೂ ಗಳಿಸಿ, ಅದನ್ನು ಅನುಭವಿಸಲು ಆರೋಗ್ಯ ಕಳೆದುಕೊಂಡರೆ ಪ್ರಯೋಜನೆಯಿಲ್ಲ. ಆರೋಗ್ಯ ಸಂಪತ್ತೊಂದಿದ್ದರೆ ಎಲ್ಲಾ ಸಂಪತ್ತಿದ್ದಂತೆ. ಇಂದಿನ ಒತ್ತಡ ಬದುಕಿನಲ್ಲಿ ನಿಗದಿತ ಸಮಯದಲ್ಲಿ ಊಟ, ವಿಶ್ರಾಂತಿಯಿಲ್ಲದೆ ಅರೋಗ್ಯ ಕೆಡಿಸಿಕೊಳ್ಳುವ ಸಂದರ್ಭ ಉಂಟಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಕೆಲಸ-ಕಾರ್ಯಗಳ ಜೊತೆಗೆ ಆರೋಗ್ಯದತ್ತ ಗಮನಹರಿಸಿ, ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ್ ಹೇಳಿದರು.

ಸಮಾಜ ಸೇವಕ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಅವರ 53ನೇ ಜನ್ಮದಿನದ ಪ್ರಯುಕ್ತ ಬಸವೇಶ್ವರ ಸಮಾಜ ಸೇವಾ ಬಳಗ, ಹೈದ್ರಾಬಾದ ಕರ್ನಾಟಕ ಸಿದ್ದಾರ್ಥ ಸೇವಾ ಸಂಘ, ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ರಂಗಾಂತರಂಗ ಸಾಂಸ್ಕøತಿಕ ಕಲಾ ಸಂಘ, ಕೆಎಚ್‍ಬಿ ಗ್ರೀನ್ ಪಾರ್ಕ ಕ್ಷೇಮಾಭಿವೃದ್ಧಿ ಸಂಘ, ಅಂತರಂಗ ಸಾಂಸ್ಕøತಿಕ ಕಲಾ ಸಂಘ, ಅಕ್ಕಮಹಾದೇವಿ ಕಲಾ ಸಾಂಸ್ಕøತಿಕ ಸಾಹಿತ್ಯ ಮಹಿಳಾ ಸಂಘ ಇವೆಲ್ಲವುಗಳ ಸಂಯುಕ್ತ ಆಶ್ರಯದಲ್ಲಿ ಎಸ್.ನಿಜಲಿಂಗಪ್ಪ ದಂತ ವಿಜ್ಞಾನ ಮಹಾ ವಿದ್ಯಾಲಯದ ಸಹಯೋಗದೊಂದಿಗೆ ನಗರದ ಟೌನ್ ಹಾಲ್ ಆವರಣದಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಉಚಿತ ದಂತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿರುವ ದುರ್ಬಲ ವರ್ಗದವರಿಗೆ ಆರೋಗ್ಯ ತಪಾಸಣೆ ಜರುಗುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಡಾ.ವಂಟಿ ಅವರಲ್ಲಿರುವ ಸಮಾಜಪರ ಕಾಳಜಿ ಮಾದರಿಯಾಗಿದೆ. ಯಾವುದೇ ಆಚರಣೆ ಅರ್ಥಪೂರ್ಣವಾಗಿರಬೇಕು. ಜನ್ಮದಿನ ಒಂದು ನೆಪ ಮಾತ್ರ. ಪೌರ ಕಾರ್ಮಿಕರಿಗೆ ದಂತ ಚಿಕಿತ್ಸಾ ಕಾರ್ಯ ಶಾಶ್ವತವಾದದ್ದು. ಇಂತಹ ಕಾರ್ಯಗಳು ನಿರಂತರವಾಗಿ ಜರುಗಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದ್ವಿದಳ ಧಾನ್ಯ ನಿಗಮದ ಅಧ್ಯಕ್ಷ ವಿದ್ಯಾಸಾಗರ ಶಾಬಾದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಪ್ರಮುಖರಾದ ಸಿದ್ದಾಜಿ ಪಾಟೀಲ, ಸೂರಜಸಿಂಗ್ ತಿವಾರಿ, ಎಚ್.ಬಿ.ಪಾಟೀಲ, ಡಾ.ಸದಾನಂದ ಪಾಟೀಲ, ವೆಂಕಟೇಶ ರಂಗಂಪೇಟ್, ಸಂಜೀವಕುಮಾರ ಮಾಲೆ, ಜಯಶ್ರೀ ಎಸ್.ವಂಟಿ, ಎಸ್.ಬಿ.ಹರಿಕೃಷ್ಣ, ಅಭಯ ಪ್ರಕಾಶ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೆಂದ್ರಪ್ಪ ಗಣಮುಖಿ, ಬಸವರಾಜ ಎಸ್.ಪುರಾಣೆ, ನಂದಕುಮಾರ ತಳಕೇರಿ, ಸುಜಯ್ ಎಸ್.ವಂಟಿ, ಸಾಯಿಪ್ರಸಾದ ಎಸ್.ವಂಟಿ, ಸಾನ್ವಿ ಎಸ್.ವಂಟಿ, ಶಾಂತಾಬಾಯಿ ಅಗಸ್ಥ್ಯತೀರ್ಥ, ಸುಜಾತಾ ವಿ.ರಂಗಂಪೇಟ್, ಅನೀಲಕುಮಾರ ಎಂಟಮನಿ, ಕಲ್ಯಾಣಕುಮಾರ ಎಂಟಮನಿ, ಪೀರಪ್ಪ ದೊಡ್ಡಮನಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

10 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

10 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

11 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 hours ago