ಬಿಸಿ ಬಿಸಿ ಸುದ್ದಿ

ಮಾಧ್ಯಮಗಳು ನೈತಿಕತೆ, ಜವಾಬ್ದಾರಿ ಕಾಪಾಡಿಕೊಂಡು ಬರಬೇಕು

ಕಲಬುರಗಿ: ಸಮಾಜದಲ್ಲಿ ಮೌಲ್ಯಗಳು ಹಾಳಾಗುತ್ತಿರುವಂತೆ ಮಾಧ್ಯಮಗಳಲ್ಲೂ ಮೌಲ್ಯಗಳು ಹಾಳಾಗುತ್ತಿವೆ ಎಂದು ಪತ್ರಕರ್ತ ಸಂಜಯ ಪಾಟೀಲ ತಿಳಿಸಿದರು.

ಆಳಂದ ತಾಲ್ಲೂಕಿನ ಜಿಡಾಗದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ: ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಾಧ್ಯಮವೂ ಕೂಡ ಇಂದು ಉದ್ಯಮವಾಗಿರುವುದರಿಂದ ಮಾಧ್ಯಮಗಳಲ್ಲಿ ಮೌಲ್ಯ ಹುಡುಕಾಡುವುದು ತಪ್ಪು ಎಂಬ ಭಾವನೆ ಜನ ಸಾಮಾನ್ಯರಲ್ಲಿ ಕೂಡ ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.

ದೃಶ್ಯ ಮಾಧ್ಯಮಗಳು ವಿಸ್ಮಯ, ಕ್ರೋದ, ಹಿಂಸೆ, ಜಾತಿ, ಕೋಮು ಭಾವನೆ ಬಿತ್ತುತ್ತಿವೆ. ಹೀಗಾಗಿ ಮಾಧ್ಯಗಳಿಂದ ಯಾವ ಸಂದೇಶ ಕೊಡಬಹುದು ಎಂಬ ಪ್ರಶ್ನೆ ಎದುರಾಗುತ್ತಿದೆ. ಮುದ್ರಣ ಮಾಧ್ಯಮಗಳಲ್ಲಿ ಅಷ್ಟಿಷ್ಟು ಜಬಾಬ್ದಾರಿ ಉಳಿದುಕೊಂಡಿದೆ. ಇಷ್ಟೆಲ್ಲವುಗಳ ಮಧ್ಯೆ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಮಾಧ್ಯಮ ರಂಗ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಬಿ.ವಿ. ಚಕ್ರವರ್ತಿ ಮಾತನಾಡಿ, ಗಾಂಧೀಜಿ, ಅಂಬೇಡ್ಕರ್ ಅವರು ಹೊರ ತರುತ್ತಿದ್ದ ಪತ್ರಿಕೆಗಳು ದೇಶಪ್ರೇಮ, ಸ್ವಾತಂತ್ರ್ಯ ಹುಟ್ಟಿಸುವ, ಅಸ್ಪೃಶ್ಯತೆ ನಿವಾರಣೆಯನ್ನು ಮಾಡುತ್ತಿದ್ದವು.‌ ಸ್ವಾತಂತ್ರ್ಯ ನಂತರವೂ ಮಾಧ್ಯಮಗಳು ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದವು.‌ ಆದರೆ ಮಾಧ್ಯಮಗಳು ಇಂದು ವಿಶ್ವಾಸಾರ್ಹತೆ ಯನ್ನು ಉಳಿಸಿಕೊಂಡಿಲ್ಲ ಎಂದು ತಿಳಿಸಿದರು.

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕೋಮುದ್ವೇಷ ಸಾಮರಸ್ಯ ತಾಣವಾದ ಕಲ್ಯಾಣ ನಾಡಿನಲ್ಲಿ ಹಬ್ಬುತ್ತಿರುವುದು ಆತಂಕದ ವಿಷಯ. ಜನಪರ, ಜೀವಪರ ಸುದ್ದಿಗಳನ್ನು ವಿವೇಚನೆಯಿಂದ ಪ್ರಕಟಿಸಿದಾಗ ಮಾತ್ರ ಸಮಾಜದಲ್ಲಿ ಜಾಗೃತಿ ಉಂಟು ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸೋಮಶೇಖರ ಜಮಶೆಟ್ಟಿ, ಕಲ್ಯಾಣಿ ಸಾವಳಗಿ, ಅಶೋಕ ರೆಡ್ಡಿ, ಆನಂದ ದೇಶಮುಖ, ಮಹೇಶ ಕಾಶಿ, ರಾಜಶೇಖರ ಹರಿಹರ, ಮಲ್ಲಿಕಾರ್ಜುನ ಕಂದಗೂಳೆ ವೇದಿಕೆಯಲ್ಲಿದ್ದರು.

ರವಿಕುಮಾರ ಶಾಪುರಕರ್ ನಿರೂಪಿಸಿದರು. ನಾಗಪ್ಪ ಎಂ.‌ಸಜ್ಜನ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಇಬ್ರಾಹಿಂಪುರ ವಂದಿಸಿದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

51 mins ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

53 mins ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

57 mins ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

1 hour ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

1 hour ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

1 hour ago