ಬಿಜೆಪಿಯಿಂದ ಹಕ್ಕು ಕಸಿದುಕೊಳ್ಳುವ ಹುನ್ನಾರ : ಕಿರಣ್

0
192

ಶಹಾಬಾದ: ಬಿಜೆಪಿ ಸರಕಾರ ಮೀಸಲಾತಿ ನಿರ್ಣಯ ಕೈಗೊಳ್ಳುವ ಮೂಲಕ ಲಂಬಾಣಿ,ಭೋವಿ,ಕೊರಮ, ಕೊರಚ ಸಮುದಾಯದ ಹಕ್ಕನ್ನು ಹಾಗೂಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಅವರ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4 ಮೀಸಲಾತಿಯನ್ನು ರದ್ದು ಮಾಡುವ ಮೂಲಕ ಅಲ್ಪಸಂಖ್ಯಾತರ ವಿರೋಧಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಮುಸ್ಲಿಮರ ವಿರುದ್ಧ ಸರಕಾರ ನಡೆಸುವ ಷಡ್ಯಂತ್ರ ಇದಾಗಿದೆಎಂದರು.

Contact Your\'s Advertisement; 9902492681

ಅಲ್ಲದೇ ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ. ಲಂಬಾಣಿ,ಭೋವಿ,ಕೊರಮ, ಕೊರಚ ಸಮುದಾಯಕ್ಕೆ ಕೇವಲ ಶೇ 4.5 ಮೀಸಲಾತಿ ನೀಡಿ ಅನ್ಯಾಯ ಮಾಡಿದೆ.ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಿ ಮೀಸಲಾತಿ ಗೊಂದಲ ಸೃಷ್ಠಿ ಮಾಡಿ ಸಮುದಾಯದ ನಡುವೆಯೂ ಧ್ವೇಷ ಬಿತ್ತುವ ಕೆಲಸ ಬಿಜೆಪಿ ಮಾಡುತ್ತಿದೆ. ಸಂವಿಧಾನ ಮೂಲ ಆಶಯವಾದ ಸಮಾನತೆಯನ್ನು ತೋರುವಲ್ಲಿ ಸರಕಾರ ವಿಫಲವಾಗಿದೆ.ಮಂಬರುವ ದಿನಗಳಲ್ಲಿ ಜನರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here