ಸುರಪುರ: ನಗರದ ವಿವಿಧೆಡೆಗಳಲ್ಲಿ ಅಧ್ಧೂರಿಯಾಗಿ ಶ್ರೀರಾಮನವಮಿಯನ್ನು ಆಚರಿಸಲಾಯಿತು.ರಾಮ್ ಸೇನಾ ಸಂಘಟನೆಯಿಂದ ಶ್ರೀರಾಮನ ಭವ್ಯವಾದ ಮೂರ್ತಿಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಸಂಘಟನೆಯ ಜಿಲ್ಲಾಧ್ಯಕ್ಷ ಶರಣು ನಾಯಕ ಡೊಣ್ಣಿಗೇರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಾಗವಹಿಸಿದ್ದರು.ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಲಾಯಿತು.ತಾಲೂಕು ಅಧ್ಯಕ್ಷ ಶರಣು ನಾಯಕ ದೀವಳಗುಡ್ಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬಜರಂಗದಳ ಸಂಘಟನೆಯಿಂದ ಶ್ರೀರಾಮ ನವಮಿ ಅಂಗವಾಗಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಗಾತ್ರದ ಶ್ರೀರಾಮನ ಕಟೌಟ್ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.ಅಲ್ಲದೆ ಸಾರ್ವಜನಿಕರಿಗೆ ಪ್ರಸಾದ ಹಾಗೂ ಪಾನಕ ವಿತರಣೆಯನ್ನು ನಡೆಸಲಾಯಿತು. ಸಂಘಟನೆಯ ತಾಲೂಕು ಸಂಯೋಜಕ ಸಚಿನ ಕುಮಾರ ನಾಯಕ,ಗುರುನಾಥರಡ್ಡಿ ಶೀಲವಂತ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮಧ್ವ ಮಂಟಪದಲ್ಲಿ ಶ್ರೀರಾಮ ಭಕ್ತ ಮಂಡಳಿಯಿಂದ ವಿಶೇಷವಾಗಿ ಶ್ರೀರಾಮ ನವಮಿ ಕಾರ್ಯಕ್ರಮ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಪವಮಾನ ಹೋಮ,ಪೂಜೆ ನಡೆಸಲಾಯಿತು.ಅಲ್ಲದೆ ಕಾತ್ಯಾಯನಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.ಭೀಮಸೇನಚಾರ್ಯ ಜೋಷಿ,ನರಸಿಂಹಚಾರ್ಯ ಜೋಷಿ,ಮಲ್ಲಾರಾವ್ ಸಿಂದಗೇರಿ,ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ,ಲಕ್ಷ್ಮೀಕಾಂತ ಅಮ್ಮಾಪುರ,ರಮೇಶ,ಚಂದ್ರಕಾಂತ ನಾಡಗೌಡ,ಗುಂಡುರಾವ್ ಅರಳಹಳ್ಳಿ,ದತ್ತುರಾವ್ ಏವೂರ,ಶ್ರೀನಿವಾಸ,ಪ್ರಾಣೇಶರಾವ್ ಸೇರಿದಂತೆ ಅನೇಕರಿದ್ದರು.
ನಗರದ ಶ್ರೀರಾಮ ಮಂದಿರದಲ್ಲಿ ವಿಶೇಷವಾಗಿ ಶ್ರೀರಾಮನವಮಿ ಆಚರಿಸಲಾಯಿತು. ವಿಶೇಷ ಪೂಜೆ,ಶ್ರೀ ವೇಣುಗೋಪಾಲ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ,ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ರಾಮಭಟ್ ಜೋಷಿ,ಶ್ರೀಹರಿರಾವ್ ಆದವಾನಿ, ಪ್ರಶಾಂತ ಭಟ್ ಜೋಷಿ,ನರಸಿಂಹಕಾಂತ ಪಂಚಮಗಿರಿ, ರಾಘವೇಂದ್ರ ಭಕ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.