ಕೊಡೇಕಲ್‍ನಲ್ಲಿ ನಡೆದ ಘಟನೆಗೆ ಪೊಲೀಸರ ಸಹಕಾರ; ಶಾಸಕ ಆರೋಪ

0
14

ಸುರಪುರ:ಕೊಡೇಕಲ್ ಗ್ರಾಮದಲ್ಲಿ ಗುರುವಾರ ನಡೆದ ಕಲ್ಲು ತೂರಾಟ ಘಟನೆಗೆ ಪೊಲೀಸ್ ಇಲಾಖೆ ಅಧಿಕಾರಿಗಳ ಸಹಕಾರ ಎಂದು ಆರೋಪಿಸಿ ಹಾಗೂ ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಲು ಕೋಡೇಕಲ್ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಕೋಡೇಕಲ್ ಗ್ರಾಮದಲ್ಲಿ ಹಾಲಿ ಶಾಸಕ ನರಸಿಂಹ ನಾಯಕ(ರಾಜುಗೌಡ), ಅವರ ಸಹೋದರ ಹಣಮಂತ ನಾಯಕ(ಬಬ್ಲುಗೌಡ) ಹಾಗೂ ಅವರ ಕಾರ್ಯಕರ್ತರು ರಸ್ತೆ ಮೇಲೆ ಹೋಗುವ ನನ್ನ ವಾಹನ ಮತ್ತು ನನ್ನ ಕಾರ್ಯಕರ್ತರ ವಾಹನಗಳಿಗೆ ಅಡ್ಡಗಟ್ಟಿ ಕಲ್ಲು ತೂರಾಟ ನಡೆಸಿದ ಘಟನೆ ಜರುಗಿದೆ. ಈ ಸಮಯದಲ್ಲಿ ನಾನು ಪೆಟ್ಟುತಿಂದ ನನ್ನ ಕಾರ್ಯಕರ್ತರನ್ನು ಸಮಾಧಾನ ಪಡಿಸಿಕೊಂಡು ನಾರಾಯಣಪೂರ ಗ್ರಾಮಕ್ಕೆ ತೇರಳಿದೇವು.

Contact Your\'s Advertisement; 9902492681

ಘಟನೆಯ ಸುದ್ದಿ ತಿಳಿದು ಸುರಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಮಂಜುನಾಥ ಹಾಗೂ ಹುಣಸಗಿ ಸಿಪಿಐ ಎಂ.ಬಿ. ಚಿಕ್ಕಣ್ಣವರ್ ಮತ್ತು ಕೊಡೇಕಲ್ ಪಿಎಸ್‍ಐ ಶ್ರೀಶೈಲ್ ಅಂಬಾಟಿ ರವರು ನಾವಿದ್ದ ಸ್ಥಳ ನಾರಾಯಣಪುರಕ್ಕೆ ಬಂದು ಸರ್ ನಾವಿದ್ದೇವೆ ಪೊಲೀಸ್ ಇಲಾಖೆಯು ನಿಮ್ಮ ರಕ್ಷಣೆಗಿದೆ ನಾವು ನಿಮ್ಮನ್ನು ಹಾಗೂ ಕಾರ್ಯಕರ್ತರನ್ನು ಸುರಕ್ಷಿತವಾಗಿ ಬೀಡುತ್ತೇವೆ ಎಂದು ಪುನಃ ನಮ್ಮನ್ನು ಅದೇ ಕೊಡೇಕಲ್ ಮಾರ್ಗವಾಗಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕೊಡೇಕಲ್ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ(ಪ್ಯಾಟಿಗುಡಿ) ಕ್ರಾಸ್ ಬಳಿಯಲ್ಲಿ ಖುದ್ದಾಗಿ ಡಿವೈಎಸ್‍ಪಿ, ಹುಣಸಗಿ ಸಿಪಿಐ ಹಾಗೂ ಕೊಡೇಕಲ್ ಪಿಎಸ್‍ಐ ಅವರ ಸಮ್ಮುಖದಲ್ಲಿ ಬ್ಯಾರಿಕೇಡಗಳನ್ನು ಅಡ್ಡಲಾಗಿ ಹಾಕಿ ನನ್ನ ಮೇಲೆ ಹಾಗೂ ನನ್ನ ಕಾರ್ಯಕರ್ತರ ಮೇಲೆ ಕಲ್ಲು, ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಹಾಗೂ ಸುಮಾರು 25ಕ್ಕೂ ಹೆಚ್ಚು ಬೆಲಬಾಳುವ ಕಾರು, ಜೀಪು ಸೇರಿದಂತೆ ಇನ್ನಿತರರ ವಾಹನಗಳನ್ನು ಜಖಂಗೊಳಿಸಿದ್ದಾರೆ.

ಹಲ್ಲೆಗೊಳಗಾಗಿದ್ದು ನಾನು ಮತ್ತು ನಮ್ಮ ಕಾಂಗ್ರೆಸ್ ಕಾರ್ಯಕರ್ತರಿದ್ದರು ಇದಕ್ಕೆಲ್ಲಾ ಪೊಲೀಸರೆ ಪ್ರತ್ಯಕ್ಷ ದರ್ಶಿಗಳಿದ್ದರು ಸಹ ಪೊಲೀಸ್ ಇಲಾಖೆಯ ಅಧಿಕಾರಿಗಳು ನನ್ನ ಮೇಲೆ ಮತ್ತು ನಮ್ಮ ಕಾರ್ಯರ್ತರ ಮೇಲೆನೆ ಪ್ರಕರಣ ದಾಖಲಿಸಿದ್ದಾರೆ, ಹಲ್ಲೆಗೊಳಗಾದವರನ್ನು ರಕ್ಷಿಸಬೇಕಾಗಿದ್ದ ಪೊಲೀಸ ಇಲಾಖೆಯವರೆ ಈ ರೀತಿಯಾಗಿ ವರ್ತಿಸಿದರೆ ಕ್ಷೇತ್ರದ ಜನರಪಾಡೇನು? ಅಲ್ಲದೆ ಈ ಘಟನೆಯಲ್ಲಿ ಅನೇಕ ಜನ ಕಾರ್ಯಕರ್ತರು ಕಲ್ಬುರ್ಗಿ,ವಿಜಯಪುರ, ಯಾದಗಿರ ಇನ್ನಿತರ ಪ್ರದೇಶದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಧಾಖಲಾಗಿದ್ದರೂ ಇದುವರೆಗೂ ಇಲಾಖೆಯ ಒಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯಾಗಿಲಿ ಅವರ ಬಳಿ ತೆರಳಿ ಎಮ್.ಎಲ್.ಸಿ ಪಡೆಯಲು ತೆರಳದೆ ಇರುವುದನ್ನು ಒಂದು ಪಕ್ಷದ ಕೈಗೊಂಬೆಯಾಗಿರುವುದು ಎದ್ದು ತೋರುತ್ತದೆ.

ಈ ಎಲ್ಲಾ ಘಟನೆಗಳು ಪೊಲೀಸ್ ಇಲಾಖೆಯವರ ಸಮ್ಮುಖದಲ್ಲೆ ನಡೆದಿದ್ದು ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ನನ್ನ ಮೇಲೆ ಮತ್ತು ನನ್ನ ಕಾರ್ಯಕರ್ತರ ಮೇಲೆ ಹಲ್ಲೆಗೆ ಕಾರಣರಾದ ಹಾಲಿ ಶಾಸಕ ನರಸಿಂಹನಾಯಕ(ರಾಜುಗೌಡ) ಹಾಗೂ ಹಣಮಂತ ನಾಯಕ(ಬಬ್ಲುಗೌಡ) ಹಾಗೂ ಅವರ ಬೆಂಬಲಿಗರನ್ನು ಬಂಧಿಸುವವರೆಗೂ ಹಾಗೂ ಈ ಘಟನೆಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಏಪ್ರಿಲ್ 12ರ ಬುಧವಾರ ಹುಣಸಗಿ ಪಟ್ಟದ ಯು.ಕೆ.ಪಿ. ಕ್ಯಾಂಪ ಮೈದಾನದಲ್ಲಿ ನಾನು ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ನನ್ನ ಅಭಿಮಾನಿಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here