ಜಾನಪದ ಪರಿಷತ್ ಜಿಲ್ಲಾ ಘಟಕ ಉದ್ಘಾಟನೆ 9ಕ್ಕೆ

0
49

ಕಲಬುರಗಿ: ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ 9 ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ ತಿಳಿಸಿದರು.

ಅಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭ ಸಾನ್ನಿಧ್ಯವನ್ನು ದೀಪಿಕಾ ಲಿಂಗರಾಜಪ್ಪ ಅಪ್ಪ ವಹಿಸಲಿದ್ದು, ಗುಲ್ಬರ್ಗ ವಿಶ್ವ ವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಟಿ.ಪೆÇೀತೆ ಉದ್ಘಾಟಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.

Contact Your\'s Advertisement; 9902492681

ಸಿ.ಎಸ್.ಮಾಲಿ ಪಾಟೀಲರ ನೆನಪು ಹಾಗೂ ನೆನಪುಗಳು ಸುಳಿದಾವು ಕವನ ಸಂಕಲನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಹಾಗೂ ಡಾ.ಎಸ್.ಎಸ್.ಗುಬ್ಬಿ ಬಿಡುಗಡೆಮಾಡುವರು.
ನಿವೃತ್ತ ಪ್ರಾಧ್ಯಾಪಕಿ ಡಾ. ವಿಶಾಲಾಕ್ಷಿ ಕರಡ್ಡಿ ಉಪನ್ಯಾಸ ನೀಡುವರು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಯುವ ನಾಯಕ ಕೃಷ್ಣರೆಡ್ಡಿ, ಗುಲ್ಬರ್ಗ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರತಾಪಸಿಂಗ್ ತಿವಾರಿ, ಡಾ. ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಪೆÇ್ರ. ಬಸವರಾಜ ಪೆÇಲೀಸ್ ಪಾಟೀಲ್ ಮುಖ್ಯ ಅತಿತೀಗಳಾಗಿ ಪಲ್ಗೊಳ್ಳುವರು. ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಅಧ್ಯಕ್ಷತೆ ವಹಿಸಿದ್ದರು. ಡಾ. ಗೀತಾ ಪಾಟೀಲ್, ಸಿ.ಎಸ್.ಆನಂದ ಕೃತಿ ಪರಿಚಯ ಮಾಡುವರು. ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ್ ಪ್ರಾಸ್ತಾವಿಕ ಮಾತನಾಡುವರು ಎಂದು ಅವರು ತಿಳಿಸಿದರು.

ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ ಜಿಲ್ಲೆಯಲ್ಲಿನ ಜಾನಪದ ಕಲವಿದರನ್ನು ಗುರುತಿಸುವ ಕೆಲಸ ಜಾನಪದ ಸಆಹಿತ್ಯ ಮಾಡುತ್ತಿದೆ. ನಮ್ಮಜಿಲ್ಲೆಯ ಜಾನಪದ ಕಲಾವಿದರನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕೆಲಸ ಪ್ರಮಾಣಿಕವಾಗಿ ಮಡಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಸರದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ವಿಶ್ವೇಶ್ವರಯ್ಯ ಸಭಾ ಭವನದ ವರೆಗೆ ಆಕರ್ಷಕ ಕಲಾ ದಂಡಗಳಿಂದ ಸಾಮಸ್ಕೃತಿಕ ಮೆರವಣಿಗೆ ನಡೆಸಲಗುವುದು ಎಂದು ಹೇಳಿದರು.

ಬಾಬು ಜಾಧವ, ಮಲ್ಲಿಕಾರ್ಜುನ ರೋಣದ, ಡಾ. ವಿಶಾಲಾಕ್ಷಿ ಕರಡ್ಡಿ, ಮಹಾಲಕ್ಷ್ಮಿ ಪಾಟೀಲ್, ಸವಿತಾ ಹಿರೇಮಠ, ಡಾ. ಗೀತಾ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ಜಾನಪದ ವಿದ್ವಂಸರಿಗೆ ಸನ್ಮಾನ; ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಶ್ರೀ ಶಯಲ ನಾಗರಾಳ, ಡಾ. ಚಂದ್ರಕಲಾ ಬಿದರಿ, ಡಾ. ಹಣಮಂತರಾವ ದೊಡ್ಡಮನಿ, ಡಾ. ರಾಜೇಂದ್ರ ಯರನಾಳೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ವಿವಿಧ ಕ್ಷೇತ್ರಗಳಲ್ಲಿ ಸಧನೆಗೈದ ಸಾದಕರಾದ ಡಾ. ಸುರೇಶ ಜಂಗೆಡಾ. ಸಂಗಮೇಶ ಹಿರೇಮಠ, ಡಾ. ಕೆ.ಎಸ್.ಬಂಧು, ಡಾ. ವಿಜಯಕುಮಾರ ಗೋತಗಿ, ಡಾ. ಗೀತಾ ಪಾಟೀಲ್, ಶೀವಪ್ಪ ಎ.ಎಸ್, ಡಾ. ವಿಜಯಲಕ್ಷ್ಮೀ ಕೋಸಗಿ, ಡಾ. ಚಿ.ಸಿ.ನಿಂಗಣ್ಣ, ಬಾಬು ಜಾಧೌ ಅವರನ್ನು ಸನ್ಮಾನಿಸಿ ಗೌರವಿಸಲಗುವುದು ಎಂದು ಸಿ.ಎಸ್.ಮಾಲಿಪಟೀಲ್ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here