ಜಾತ್ರೆಗಳು ಸಾಮಾಜಿಕ ಸಂಸ್ಕೃತದ ಪ್ರತೀಕ: ಪಸಾರ

0
25

ಕಾಳಗಿ: ಜಾತ್ಯತೀತವಾದ ಕೋಡ್ಲಿ ಗ್ರಾಮದಲ್ಲಿ ಐತಿಹಾಸಿಕ ಶ್ರೀರಾಮ ನೆಟ್ಟ ಲಿಂಗದ ಸ್ಥಳದಲ್ಲಿ ದೇಶಮುಖ ಮನೆತನದಿಂದ ದೇವಸ್ಥಾನ ನಿರ್ಮಾಣವಾಯಿತು. ಜಾತ್ರೆ ಎಂದರೆ ಬೆಂಡು ಬತಾಸು ಮನರಂಜನಾ ಕ್ರೀಡೆಗೆ ಸೀಮಿತವಾಗದೆ, ಧರ್ಮ ಚಿಂತನೆಯನ್ನು ಮನವರಿಕೆಯ ಜ್ಞಾನ ಸಂಗಮವಾಗಿದೆ ಎಂದು ಹಿರಿಯ ಪತ್ರಕರ್ತ ಮಾಣಿಕರಾವ ಪಸಾರ ಹೇಳಿದರು.

ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಆರಾಧ್ಯದೈವ ರಾಮಲಿಂಗೇಶ್ವರ ಭವ್ಯ ರಥೋತ್ಸವ, ಜಾತ್ರೆಯ ನಿಮಿತ್ತ ಧರ್ಮ ಸಂಸ್ಮೃತಿ ಚಿಂಚನ ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದರು.

Contact Your\'s Advertisement; 9902492681

ಉಪನ್ಯಾಸ ನೀಡಿದ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೋ.ಶಿವಶರಣಪ್ಪ ಮೊತಕಪಳ್ಳಿ ಮಾತನಾಡಿ, ಬಸವಣ್ಣನವರ ವಚನದಲ್ಲಿ ಸಮಾಜದ ಅಂಕು ಡೊಂಕುಗಳ ಬಗ್ಗೆಯಷ್ಟೇ ಅಲ್ಲ, ರಾಜ್ಯ ಆಳುವವರು ತಪ್ಪು ಮಾಡಿದರೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಆಳುವ ವರ್ಗ ಎಚ್ಚರಿಸುವ ಶಕ್ತಿ ವಚನಗಳಿಗಿದೆ. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಖಂಡನೀಯ  ಎಂದರು.

ದಿ.ಶಂಕ್ರೇಪ್ಪ ಆಡಕಿ ಕೋಡ್ಲಿ ಪ್ರತಿಷ್ಠಾನದಿಂದ ಇಂಜಿನಿಯರಿಂಗ್ ಹುದ್ದೆ ತ್ಯಾಜಿಸಿ, ಸ್ವಂತ ಜಮೀನಿನಲ್ಲಿ ಜೀವನವನ್ನು ಕಟ್ಟಿಕೊಂಡಿದ್ದ ಮಲ್ಲಿಕಾರ್ಜುನ ರೆಡ್ಡಿ ಗುಡೆಪುರ ಇವರಿಗೆ ಪ್ರಗತಿಪರ ರೈತ ಪ್ರಶಸ್ತಿ, ನಿವೃತ್ತ ಶಿಕ್ಷಕರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದ ಬಸವರಾಜ ಐನೋಳ್ಳಿ ರವರಿಗೆ ನೀಡಿದರು.

ಅತ್ಯುಮ ವಿದ್ಯಾರ್ಥಿ ಪ್ರಶಸ್ತಿಯನ್ನು ಭಾಗ್ಯಶ್ರೀ ನವದಗಿ, ಪ್ರೀಯಾ ಶಿವಶರಣಪ್ಪ ನಿಂಗದಳ್ಳಿ, ಸಿಂಧು ಸಿದ್ರಾಮಪ್ಪ, ಪ್ರೀಯಾ ಶಿವಶರಣಪ್ಪ ನಿಂಗದಳ್ಳಿ ಇವರಿಗೆ ಸನ್ಮಾನಿಸಿ ಗೌರವಿಸಿದರು. ಹಾರಕೂಡ ಶ್ರೀ ಚೆನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತ ಅಧಿಕಾರಿ ಶ್ರೀಮತಿ ಗೀತಾರಾಣಿ ಬಸವರಾಜ ಐನೋಳ್ಳಿ ಇವರಿಗೆ ಆದರ್ಶ ದಂಪತಿಗಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಮಲಿಂಗರೆಡ್ಡಿ ದೇಶಮುಖ, ಶಾಸಕ ಡಾ.ಅವಿನಾಶ ಜಾಧವ್, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ, ಚಿತ್ತಾಪುರ ಕಂಬಳೇಶ್ವರ ಶ್ರೀಗಳು ಮಾತನಾಡಿದರು.

ಭರತನೂರ ವಿರಕ್ತ ಮಠದ ಚಿಕ್ಕಗುರುನಂಜೇಶ್ವರ ಶ್ರೀ,  ಕೋಡ್ಲಿ ಬಸವಲಿಂಗ ಶ್ರೀ,ಮಲ್ಲಿನಾಥ ಕೋಲಕುಂದಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ತಾಂಡೂರ, ಉಪಾಧ್ಯಕ್ಷೆ ಲಲಿತಾಬಾಯಿ ಜಾಧವ, ಶ್ರೀಕಾಂತ ಆಡಕಿ, ವೈಜಿನಾಥ ರೆಡ್ಡಿ ದೇಶಮುಕ, ರಾಮಚಂದ್ರ ರೆಡ್ಡಿ, ಜಗನ್ನಾಥ ರೆಡ್ಡಿ, ಅನಂತ ರೆಡ್ಡಿ ದೇಶಮುಖ, ಜೈಶಂಕರ ಕೋಲಕುಂದಿ, ಪತ್ರಕರ್ತ ನಾಗರಾಜ ಗದ್ದಿ, ವಿಜಯಕುಮಾರ ಚೇಂಗಟಿ, ಸಂತೋಷ ಪಾಟೀಲ ಸೇರಿ, ಸಿದ್ದು ಪೆದ್ದಿ, ವಮಹೇಶ ಪೆದ್ದಿ, ಬಸವರಾಜ ಕರಕಮುಕಲಿ, ಅಣ್ಣರಾವ ಪೆದ್ದಿ, ಸೂರ್ಯಕಾಂತ ಪೆದ್ದಿ, ಶಶಿಕಾಂತ ಆಡಕಿ, ಸಿದ್ದು ಬುಬಲಿ, ಕನ್ಯಾಕುಮಾರಿ ಪೆದ್ದಿ, ಮಾಣಿಕರಾವ ಬುಬಲಿ ಸೇರಿ ಅನೇಕರಿದ್ದರು. ಶಿವಪ್ರಕಾಶ ಹಿರೇಮಠ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here