ವಿಧಾನಸಭೆ ಚುನಾವಣೆ: ಸಾಮಾನ್ಯ ವೀಕ್ಷಕರಿಗೆ ದೂರು ಸಲ್ಲಿಸಲು ಸಮಯ ನಿಗದಿ

0
35

ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ವಿಧನಾಸಭಾ ಕ್ಷೇತ್ರಗಳಿಗೆ‌ ನಿಯೋಜನೆಗೊಂಡ ಸಾಮಾನ್ಯ ವೀಕ್ಷಕರಿಗೆ ಚುನಾವಣೆ ಸಂಬಂಧ ದೂರುಗಳು ಸಲ್ಲಿಸಲು ಸಮಯ ನಿಗದಿಪಡಿಸಿದ್ದು,ಸಾರ್ವಜನಿಕರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಕಚೇರಿ ಕರ್ತವ್ಯ ದಿನದಂದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 5 ಜನ ಐ.ಎ.ಎಸ್. ಅಧಿಕಾರಿಗಳನ್ನು ನಿಯೋಜಿಸಿದ್ದು, ವೀಕ್ಷಕರು ಈಗಾಗಲೆ ಜಿಲ್ಕೆಯ ಸಂಬಂಧಿತ ಕ್ಷೇತ್ರದಲ್ಲಿ ಕರ್ತವ್ಯದಲ್ಲಿರುತ್ತಾರೆ.

Contact Your\'s Advertisement; 9902492681

ಸಾಮಾನ್ಯ ವೀಕ್ಷಕರಿಗೆ ಹಂಚಿಕೆ ಮಾಡಿದ ವಿಧಾನಸಭಾ ಮತಕ್ಷೇತ್ರ, ವಾಸಸ್ಥಳ,‌ ಸಂಪರ್ಕ ಸಂಖ್ಯೆ, ಭೇಟಿ ಸಮಯದ ವಿವರ ಇಂತಿದೆ.

*34-ಅಫಜಲಪುರ ಮತ್ತು 35-ಜೇವರ್ಗಿ ವಿಧಾನಸಭಾ ಕ್ಷೇತ್ರ:*

ಸಿ. ಸುದರ್ಶನ ರೆಡ್ಡಿ, ಐವಾನ್-ಎ-ಶಾಹಿ ಹಳೇ ಅತಿಥಿ ಗೃಹ, ಕೋಣೆ ಸಂಖ್ಯೆ-1 ಕಲಬುರಗಿ,7795691046, ಬೆಳಿಗ್ಗೆ 9 ರಿಂದ 10 ಗಂಟೆ.

40-ಚಿತ್ತಾಪುರ ಹಾಗೂ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ:ಮನೋಜ ಖಟ್ರಿ, ಐವಾನ್-ಎ-ಶಾಹಿ ಹಳೇ ಅತಿಥಿ ಗೃಹ ಕೋಣೆ ಸಂಖ್ಯೆ-2 ಕಲಬುರಗಿ, 9632858913, ಬೆಳಿಗ್ಗೆ 9 ರಿಂದ 9.45 ಗಂಟೆ ವರೆಗೆ.

41-ಸೇಡಂ ಹಾಗೂ 42-ಚಿಂಚೋಳಿ ವಿಧಾನಸಭಾ ಕ್ಷೇತ್ರ:

ಇಸ್ರೇಲ್ ವಾಟ್ರೇ ಇಂಗಟಿ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಗೃಹ ಕೋಣೆ ಸಂಖ್ಯೆ-1 ಕಲಬುರಗಿ-7892026724, ಬೆಳಿಗ್ಗೆ 9 ರಿಂದ 10 ಗಂಟೆ ವರೆಗೆ.

44-ಗುಲಬರ್ಗಾ (ದಕ್ಷಿಣ) ಹಾಗೂ 45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರ: ಎಸ್. ಜಯಂದಿ, ಐವಾನ್-ಎ-ಶಾಹಿ ಹಳೇ ಅತಿಥಿಗೃಹ, ಕೊಠಡಿ ಸಂ.3, ಕಲಬುರಗಿ-9611683366, ಬೆಳಿಗ್ಗೆ 9 ರಿಂದ 10 ಗಂಟೆ ವರೆಗೆ.46-ಆಳಂದ ವಿಧಾನಸಭಾ ಕ್ಷೇತ್ರ: ಮಿತಿಲೇಶ್ ಮಿಶ್ರಾ, ಆಳಂದ ಅತಿಥಿಗೃಹ-8310021300, ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆ ವರೆಗೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here