ಕಲಬುರಗಿ: ಪ್ರಸ್ತುತ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ತಮ್ಮ ತಮ್ಮ ಪಕ್ಷಗಳ ತತ್ವ ಸಿದ್ಧಾಂತಗಳಿಗೆ ಮತ್ತು ಮೌಲ್ಯಗಳಿಗೆ ತಿಲಾಂಜಲಿ ಕೊಟ್ಟು ಮಾರಿಕೊಳ್ಳುತ್ತಿರುವದು ಮತದಾರರಿಗೆ ಮತ್ತು ದೇಶಕ್ಕೆ ಮಾಡುತ್ತಿರು ಮಹಾ ದ್ರೋಹ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.
ದೀರ್ಘಕಾಲದಿಂದ ಒಂದು ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಮತದಾರರಿಗೆ ಮೌಲ್ಯಗಳ ಮಂತ್ರ ಬೋಧಿಸಿ ಅಧಿಕಾರದ ಸ್ಥಾನಮಾನಗಳು ಗಿಟ್ಟಿಸಿಕೊಂಡು ಅನುಭವಿಸಿ ನಂತರ ಅಧಿಕಾರ ಸಿಗುವುದಿಲ್ಲ ಎಂಬ ಕಾರಣಕ್ಕೆ ಸ್ವಾರ್ಥಿರಾಜಕಾರಿಣಿಗಳು ರಾತ್ರೋರಾತ್ರಿ ತಮಗೆ ಬೆಳೆಸಿದ ಪಕ್ಷಕ್ಕೆ ಮತ್ತು ಮತ ನೀಡಿದ ಮತದಾರರಿಗೆ ದ್ರೋಹ ಎಸಗುತ್ತಿದ್ದಾರೆ.
ಇಂಥಹ ಸ್ವಾರ್ಥ ರಾಜಕಾರಣಿಗಳಿಗೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ರಾಜ ಮರ್ಯಾದೆ ನೀಡುವ ಮೂಲಕ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಅವಕಾಶವಾದಿ ಸ್ವಾರ್ಥ ರಾಜಕಾರಣಿಗಳಿಗೆ ಮಣೆ ಹಾಕಿ ತಮ್ಮ ಪಕ್ಷಗಳಲ್ಲಿ ಸೇರಿಸಿಕೊಳ್ಳುತ್ತಿರುವದು ಕೇವಲ ಅಧಿಕಾರಕ್ಕಾಗಿ ಎಂಬುವುದು ಮತದಾರ ಸರಿಯಾಗಿ ಅರ್ಥಮಾಡಿಕೊಳ್ಳುತ್ತಿದ್ದಾನೆ.ಅಧಿಕಾ
ಇಂಥಹ ಸ್ವಾರ್ಥ ರಾಜಕಾರಣಿಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಿದೆ.ಭವಿಷ್ಯದಲ್ಲಿಎಲ್ಲಾ ರಾಜಕೀಯ ಪಕ್ಷಗಳು ಇಂಥಹ ಕೆಟ್ಟ ಸಂಪ್ರದಾಯ ವ್ಯವಸ್ಥೆ ತಡೆಗಟ್ಟಲು ಆರು ತಿಂಗಳ ಪೂರ್ವದಲ್ಲಿಯೇ ತಮ್ಮ ಪಕ್ಷಗಳ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಪ್ರಕಟಿಸಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲಪಡಿಸಲು ಇಂಥಹ ವಾಮ ಮಾರ್ಗ ವ್ಯವಸ್ಥೆಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಚುನಾವಣಾ ವ್ಯವಸ್ಥೆಯಲ್ಲಿ ಅಮೋಘವಾದ ಬದಲಾವಣೆಗಳು ಮಾಡುವುದು ಅತಿ ಅವಶ್ಯವಾಗಿದೆ.ಪ್ರಸ್ತುತ ಚುನಾವಣೆ ವ್ಯವಸ್ಥೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಚುನಾವಣೆಯಲ್ಲಿ ಭಾಗವಹಿಸುವದು ಗಗನ ಕುಸುಮವಾಗಿದೆ.
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಆಶಯಕ್ಕೆ ಇದು ವಿರುದ್ಧವಾಗಿದೆ.ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸದ್ದಿದ್ದರೆ ಭವಿಷ್ಯದಲ್ಲಿ ರಾಜಕೀಯ ಪಕ್ಷಗಳು ವ್ಯಾಪಾರಿ ಮನೋಭಾವದ ಕಂಪನಿಗಳಾಗುತ್ತವೆ.ಚುನಾವಣಾ ಆಯೋಗ ಪ್ರಸ್ತುತ ವಾಸ್ತವಿಕ ವಾತಾವರಣವನ್ನು ಗಮನಿಸಿ ಕಠಿಣ ಕ್ರಮಗಳು ಕೈಗೊಳ್ಳುವುದು ತುರ್ತು ಅವಶ್ಯವಾಗಿದೆ.ಸಮಿತಿ ಚುನಾವಣಾ ವ್ಯವಸ್ಥೆಗಳಲ್ಲಿ ಬದಲಾವಣೆ ತರಲು ರಾಷ್ಟ್ರಪತಿಗಳಿಗೆ ಮತ್ತು ಚುನಾವಣಾ ಆಯೋಗಕ್ಕೆ ದೂರ ನೀಡುವುದಲ್ಲದೆ, ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.