ಕಲಬುರಗಿ: ಜೇವರ್ಗಿಯಲ್ಲಿ ಭಾರಿ, ಮಳೆ, ಸಿಡಿಲು ಮತ್ತು ಬಿರುಗಾಳಿಗೆ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಜನರಿಗೆ ಕ್ಷೇತ್ರದ ಮತದಾರರಿಗೆ ಆದ ಅನಾನೂಕೂಲಕ್ಕೆ ಶಾಸಕ ಹಾಗೂ ಅಭ್ಯರ್ಥಿ ಡಾ. ಅಜಯಸಿಂಗ್ ಮತದಾರರ ಬಳಿ ಓಡೋಡಿ ಹೋಗಿ ಕ್ಷಮೆಯಾಚಿಸಿದರು.
ಪ್ರತಿ ಬಾಕ್ಸ್ ಗಳ ಬಳಿ ಹೋಗಿ ಮಳೆ ನೀರಲ್ಲಿ ನಿಂತು ಕೈ ಮುಗಿದು ಕ್ಷಮೆ ಯಾಚಿದರು.
ನಿಮಗಾದ ಅನಾನೂಕೂಲಕ್ಕೆ ನಾನು ಕ್ಷಮೆ ಕೋರುತ್ತೇನೆ. ಬಿರು ಬಿಸಿಲಿನಲ್ಲೂ ಮಳೆರಾಯ ಕೃಪೆ ತೋರಿದ್ದಾನೆ. ರೈತಾಪಿ ವರ್ಗಕ್ಕೆ. ಮೂಕ ಪ್ರಾಣಿಗಳಿಗಾದರೂ ಅನುಕೂಲವಸಗುತ್ತದೆ. ಇದು ಶುಭ ಸಂಕೇತ ಆದರೆ. ನೀವು ಮಳೆಯಲ್ಲಿ ನೆನೆದು ಹೈರಾಣಾದಿರಿ…ಎಂದು ಮರುಗಿ ಕ್ಷಮೆ ಕೋರಿದರು.
ಸಮಾವೇಶಕ್ಕಾಗಿ ಹಾಕಿದ್ದ ವೇದಿಕೆ ಮಜಬೂತ ಇತ್ತು. ಆದರೆ ಪೆಂಡಾಲ್ ನೀರಿಗೆ..ನೆನೆದು ಗಾಳಿಗೆ ಹಾರಿತು. ಕೆಲವಡೆ ಜನರಿಗೆ ಕುಳಿತು ಕೊಳ್ಳಲು ತೊಂದರೆ ಅನುಭವಿಸಿದರು.
ಮುಖ್ಯ ವೇದಿಕೆ ಮುಂಭಾಗದಲ್ಲಿ ಮಾತ್ರ ಜನರು ಮಳೆಗೆ ಆಸರೆ ಪಡೆದರು. ಅಲ್ಲಿ ಮಳೆ ನಿರೋಧಕ ಪೆಂಡಾಲ್ ಹಾಕಲಾಗಿತ್ತು. ಉಳಿದಂತೆ ಇಡೀ ಕ್ರೀಡಾಂಗಣ ನೀರಿನಿಂದ ತುಂಬಿ ನಿಂತಿದೆ.