ಶಹಾಬಾದ; ಜನವಿರೋಧಿ, ಕಡುಭ್ರಷ್ಟ ಹಾಗೂ ಕೋಮುವಾದಿ ಪಕ್ಷಗಳಾದ ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳನ್ನು ಸೋಲಿಸಿ, ಜನಹೋರಾಟದಿಂದ ಹೊರಹೊಮ್ಮಿದ ಎಸ್.ಯು.ಸಿ.ಐ (ಕಮ್ಯೂನಿಷ್ಟ್) ಪಕ್ಷದ ಅಭ್ಯರ್ಥಿ ಗಣಪತರಾವ.ಕೆ.ಮಾನೆ ಅವರನ್ನು ಗೆಲ್ಲಿಸಿ. ಎಂದು ಎಸ್.ಯು.ಸಿಐ (ಕಮ್ಯೂನಿಷ್ಟ್) ಪಕ್ಷದ ರಾಜ್ಯ ಕಾರ್ಯಕಾರಿ ಸದಸ್ಯ ಹೆಚ್.ವಿ.ದಿವಾಕರ ಹೇಳಿದರು.
ಅವರು ನಗರದ ಬಸವೇಶ್ವರ ವೃತ್ತದಲ್ಲಿ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್‍ಯುಸಿಐ ಅಭ್ಯರ್ಥಿ ಗಣಪತರಾವ. ಕೆ.ಮಾನೆಯವರ ಚುನಾವಣಾ ಪ್ರಚಾರಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
2023ರ ರಾಜ್ಯ ವಿಧಾನಸಭಾ ಸಾರ್ವವತ್ರಿಕ ಚುನಾವಣ ಕಣವು ರಂಗೇರುತ್ತಿದ್ದು ಹಲವು ಪಕ್ಷಗಳು ಜನರ ಮುಂದೆ ಂiÀiತರೀತಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಸುಮಾರು 75 ವರ್ಷಗಳಿಂದ ಆಡಳಿತ ಮಾಡಿರುವ ಮೂರು ಪಕ್ಷಗಳು ಜನರ ಬದುಕನ್ನು ದಿವಾಳಿಗೆ ತಳ್ಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನವಿರೋಧಿ, ಕಡುಭ್ರಷ್ಟ ಹಾಗೂ ಕೋಮುವಾದಿ ಪಕ್ಷಗಳಾದ ಜೆಸಿಬಿಗಳನ್ನು ಸೋಲಿಸಿ, ಜನಹೋರಾಟದಿಂದ ಹೊರಹೊಮ್ಮಿದ ಎಸ್.ಯು.ಸಿ.ಐ (ಕಮ್ಯೂನಿಷ್ಟ್) ಪಕ್ಷದ ಅಭ್ಯರ್ಥಿಯಾದ ಕಾಮ್ರೇಡ್ ಗಣಪತರಾವ.ಕೆ.ಮಾನೆ ಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ರಾಮಣ್ಣ ಎಸ್ ಇಬ್ರಾಹಿಂಪುರವರು ಮಾತನಾಡಿ ಗುಲಬರ್ಗಾ ಗ್ರಾಮೀಣ ಮತಕ್ಷೇತ್ರದಿಂದ ಆಯ್ಕೆಯಾದ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ವಹಿಸದೆ ಸಂಪೂರ್ಣವಾಗಿ ಕಡೆಗಣಿಸಿವೆ. ಕನಿಷ್ಟ ಮಟ್ಟದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸೋತಿವೆ ಎಂದು ಹೇಳಿದ ಅವರು ಜನರ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ಬೆಳೆಸುತ್ತಿರು ನಮ್ಮ ಪಕ್ಷದ ಅಭ್ಯರ್ಥಿಗೆ ತಮ್ಮ ಮತ ನೀಡುವುದರ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಗಣಪತರಾವ.ಕೆ ಮಾನೆ,ರಾಘವೇಂದ್ರ ಎಮ್.ಜಿ. ಜಗನ್ನಾಥ್ ಎಸ್. ಎಚ್., ರಾಜೇಂದ್ರ ಆತ್ನೂರ್. ಗುಂಡಮ್ಮ ಮಡಿವಾಳ, ಸಿದ್ದು ಚೌಧರಿ, ತುಳಜರಾಮ ಎನ್.ಕೆ, ಭಾಗಣ್ಣ ಬುಕ್ಕಾ, ರಘು ಪವಾರ, ರಮೇಶ ದೇವಕರ, ಕಿರಣ ಮಾನೆ, ಅಜಯ ಗುರಜಾಲಕರ್, ಮಹಾದೇವಿ ಮಾನೆ, ರಾಧಿಕಾ ಇತರರು ಇದ್ದರು.