ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ವಿವಿಧ ಸಮಾಜದ ಮುಖಂಡರು ಕಾಂಗ್ರೆಸ್‍ಗೆ ಸೇರ್ಪಡೆ

0
28

ಶಹಾಬಾದ: ಚಿತ್ತಾಪೂರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಹೊನಗುಂಟ ಗ್ರಾಮದ ದಲಿತ ಯುವ ಮುಖಂಡ ಪಿ.ಎಸ್.ಮೇತ್ರೆ , ಗ್ರಾಪಂ ಸದಸ್ಯ ಇಸ್ಮೈಲ್ ಷಾ, ಕುರುಬ ಸಮಾಜದ ಮುಖಂಡ ಬಸವರಾಜ ಕಂಠಿಕರ್,ರಾಘವೇಂದ್ರ ಗುಡೂರ್,ಶರಣಬಸಪ್ಪ ಮೇತ್ರೆ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಯುವ ಮುಖಂಡ ಪಿ.ಎಸ್.ಮೇತ್ರೆ, ಪ್ರಿಯಾಂಕ್ ಖರ್ಗೆ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಉತ್ತಮ ಕೆಲಸಗಾರರು.ಅಲ್ಲದೇ ಸಾಮಾಜಿಕ ಬದ್ಧತೆಯುಳ್ಳವರಾಗಿದ್ದು, ಸಂವಿಧಾನ ಮೌಲ್ಯಗಳನ್ನು ಅಳವಡಿಸಿಕೊಂಡವರಾಗಿದ್ದರಿಂದ ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತಿದ್ದೆವೆ.ಚಿತ್ತಾಪೂರ ಮತಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಹಿಂದೆಂದೂ ಯಾರು ಮಾಡಿಲ್ಲ.ಆದರೆ ಕೇಂದ್ರದಲ್ಲಿ ಹಾಗೂ ರಾಜ್ಯದ ಬಿಜೆಪಿ ಸರಕಾರ ಕೇವಲ ಸುಳ್ಳಿನ ಕಥೆಗಳನ್ನು ಹೇಳಿ ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರಕ್ಕೆ ಬಂದ ಅವರೇ ಹೇಳಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ.

Contact Your\'s Advertisement; 9902492681

ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರಕಾರ ನಡೆಸಿದ ಹಗರಣಗಳನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದು ರಾಜ್ಯ ಜನತೆ ಕಂಡಿದ್ದಾರೆ.ಅದಕ್ಕೆ ಸಹಿಸಿಕೊಳ್ಳಲಾರದೇ ಅವರನ್ನೇ ಟಾರ್ಗೆಟ್ ಮಾಡಿ, ಸೋಲಿಸಲು ವಾಮಮಾರ್ಗ ಹುಡುಕುತ್ತಿದ್ದಾರೆ.ಆದರೆ ಇದು ಯಾವ ಕಾಲಕ್ಕೂ ಈಡೇರದು. ಚಿತ್ತಾಪೂರ ಮತಕ್ಷೇತ್ರದಲ್ಲಿ ಖರ್ಗೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತವೆ.ಜನರು ಯಾರು ಒಳ್ಳುಯವರು ಎಂದು ಗಮನಿಸುತ್ತಾರೆ.ಚಿತ್ತಾಪೂರ ಮತಕ್ಷೇತ್ರದಲ್ಲಿ ಮತ್ತೆ ಪ್ರಿಯಾಂಕ್ ಖರ್ಗೆ ಅವರ ಗೆಲುವು ಶತಸಿದ್ಧ ಎಂದು ಹೇಳಿದರು.

ಎಸ್‍ಯುಸಿಐ ಪ್ರಚಾರ :ನಗರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಗಣಪತರಾವ.ಕೆ.ಮಾನೆ ಮಾತನಾಡಿ,ಕೋವಿಡ್ ಮಹಾಮಾರಿಯಿಂದ ಚೇತರಿಸಿಕೊಳ್ಳುತ್ತಿರುವ ಜನತೆ ಬೆಲೆ ಏರಿಕೆ, ನೀರುದ್ಯೋಗ, ಹಣದುಬ್ಬರ, ಶಿಕ್ಷಣ-ಆರೋಗ್ಯಗಳ ವ್ಯಾಪರೀಕರಣ, ಎಲ್ಲೆ ಮೀರಿದ ಭ್ರಷ್ಟಾಚಾರಗಳಿಂದ ನಲುಗಿ ಹೋಗಿದ್ದಾರೆ. ಜನಗಳ ಆದಾಯಕ್ಕಿಂತ ಖರ್ಚು ಮುಗಿಲುಮುಟ್ಟಿದೆ. ಜನಗಳ ದಿನ ಬಳೆಕೆಯಾದ ಕನಿಷ್ಠ ಹಾಲು,ಮೊಸರನ್ನು ಬಿಡದೆ ತೆರಿಗೆ ಹಾಕುತ್ತಿದ್ದಾರೆ. ಇನ್ನೊಂದುಕಡೆ ಪ್ಯಾನ್ ಕಾರ್ಡ್‍ಗೆ ಆಧಾರ ಕಾರ್ಡ್ ಲಿಂಕ್ ಮಾಡುವ ಹೆಸರಿನಲ್ಲಿ ಜನರಿಗೆ ಬರೆ ಎಳೆಯಾಲಾಗಿದೆ. ಅಡುಗೆ ಅನಿಲ, ಪೆಟ್ರೋಲ್,ಡೀಸಲ್, ಅಡುಗೆ ಎಣ್ಣೆಗಳ ಬೆಲೆ ಗಗನಕ್ಕೆರಿದೆ. ಇವತ್ತಿನ ಡಬಲ್ ಎಂಜಿನ್ ಸರ್ಕಾರ ಜನರನ್ನ ಹಗಲು ದರೋಡೆ ಮಾಡುತ್ತಿದೆ ಎಂದು ಆಕ್ರೋಶ್ ವ್ಯಕ್ತಪಡಿಸಿದರು.

ಆದಕಾರಣ ಇವರನ್ನು ಸೋಲಿಸಬೇಕಾದರೆ ಹಾಗೂ ಜನರ ಸಮಸ್ಯೆಗಳನ್ನು ಪರಿಹಾರಿಸುವ ನಿಟ್ಟಿನಲ್ಲಿ ಮುನ್ನಡೆಯಾಬೇಕಾದರೆ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷಕ್ಕೆ ತಮ್ಮ ಮತವನ್ನು ನೀಡಬೇಕೆಂದು ಜನರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಸಮಿತಿಯ ಸದಸ್ಯರಾದ ಕಾಮ್ರೇಡ್ ರಾಘವೇಂದ್ರ ಎಮ್.ಜಿ. ಜಗನ್ನಾಥ್ ಎಸ್. ಎಚ್., ರಾಜೇಂದ್ರ ಆತ್ನೂರ್. ಗುಂಡಮ್ಮ ಮಡಿವಾಳ, ಸಿದ್ದು ಚೌಧರಿ, ತುಳಜರಾಮ, ಕೀರ್ತಿ ಎಸ್ ಎಮ್ ಸದಸ್ಯರಾದ ಮಹಾದೇವಿ ಮಾನೆ, ರಘು ಪವಾರ, ಕಿರಣ ಮಾನೆ, ರಮೇಶ ದೇವಕರ್, ಅಜಯ ಗುರಜಾಲಕರ್, ಆನಂದ, ಸಾಕ್ಷಿ ಮಾನೆ, ರಾಧಿಕ ಚೌಧರಿ, ಮಹಾದೇವಿ ಆತ್ನೂರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here