ಕಲಬುರಗಿ; ನಗರದ ಸಂತ ಗಾಡಗೆ ಬಾಬಾ ಆಶ್ರಮದಲ್ಲಿ ಕಲಬುರಗಿಯ ಕರ್ನಾಟಕ ಜಾನಪದ ಪರಿಷತ್ತಿನಿಂದ ಹಿರಿಯರಾದ ಎ.ಕೆ.ರಾಮೇಶ್ವರ ಸರ್ ಅವರಿಗೆ ೨೦೨೩ ನೇ ಸಾಲಿನ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಕವಿ ಬಿ.ಕೆ.ಹೊಂಗಲ ದತ್ತಿಯಿಂದ ಕೊಡಮಾಡವ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ ಪುರಸ್ಕೃತರಾದ ಪ್ರಯುಕ್ತ ಪುರಸ್ಕೃತರನ್ನು ಶಾಲು ಹೊಂದಿಸಿ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಕೆ.ರಾಮೇಶ್ವರ ಅವರು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಬಹಳ ಕಾಲದಿಂದ ಕನ್ನಡ ನಾಡು – ನುಡಿ ಏಳಿಗೆಗಾಗಿ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸುತ್ತ ಬಂದಿದ್ದು.ಈ ಸಲ ಕಲ್ಯಾಣ ಕರ್ನಾಟಕದಲ್ಲಿರುವ ನನ್ನನ್ನು ಗುರುತಿಸಿ ಮಕ್ಕಳ ಶ್ರೇಷ್ಠ ಕವಿ ಎಂದು ಕವಿ ಬಿ.ಕೆ.ಹೊಂಗಲರವರ ಹೆಸರಿನಲ್ಲಿ ಕೊಡಮಾಡುವ ದತ್ತಿ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದಕ್ಕಾಗಿ ಕೃತಜ್ಞತೆ ಸಿ.ಎಸ್.ಮಾಲಿಪಾಟೀಲ,ಡಿ.ಪಿ.ಸಜ್ಜನ ಮತ್ತು ಬಾಬು ಜಾಧವ,ಗುಂಡಪ್ಪ ಗೋಟಕರ್ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತ ಕಲಬುರಗಿ ಜಿಲ್ಲಾಧ್ಯಕ್ಚರಾದ ಸಿ.ಎಸ್.ಮಾಲಿಪಾಟೀಲ,ಪ್ರಧಾನ ಕಾರ್ಯದರ್ಶಿ ಬಾಬು ಜಾಧವ,ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ರೋಣದ ಸದಸ್ಯರಾದ ಗುಂಡಪ್ಪ ಗೋಟಕರ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಸ್ವಾಗತ ಬಾಬು ಜಾಧವ,ರೋಣದ ಅವರು ಎ.ಕೆ.ರಾಮೇಶ್ವರ ರವರು ಮಕ್ಕಳಿಗಾಗಿ ರಚಿಸಿದ ಹಾಡನ್ನು ಹಾಡಿ ಹೊಗಳಿದರು,ಗುಂಡಪ್ಪ ಗೋಟಕರ್ ವಂದಿಸಿದರು,ಡಿ.ಪಿ.ಸಜ್ಜನ ನಿರೂಪಿಸಿದರು.