ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

0
9

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರುಸುಜಾತಾ ಪಾಟೀಲ್ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ( ಎಂ.ಪಿಹೆಚ್ಎಸ್.) ಸಭಾಂಗಣದಲ್ಲಿ.ನೆಹರು ಯುವ ಕೇಂದ್ರ ಕಲಬುರಗಿ.ದಿಶಾ ಯುವಕ ಸಂಘ (ರಿ ), ಸರ್ಕಾರಿ ಪಿಯು ಕಾಲೇಜು ಕಲಬುರಗಿ,ಎನ್ ಎಸ್ ಎಸ್ ಘಟಕ . ಹಾಗೂ ಹರ್ಷ ಅರ್ಬನ್ಆಂಡ್ ರೂರಲ್ಡೆವಲಪ್ಮೆಂಟ್ ಸೊಸೈಟಿ ಕಲಬುರಗಿ. ಮತ್ತುಜಿಲ್ಲಾ ತಂಬಾಕು ನಿಯಂತ್ರಣ ಕೋಶ  ಜಿಲ್ಲಾಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಶ್ರಾಯದಲ್ಲಿ ಮಾದಕ ವ್ಯಸನದ ಬಗ್ಗೆ ಅರಿವು ಮತ್ತು ಶಿಕ್ಷಣ ಕಾರ್ಯಕ್ರಮ ಏರ್ಪಡಿಸಲಾಯಿತು.

Contact Your\'s Advertisement; 9902492681

ಮೊದಲಿಗೆ ಸಸಿಗೆ ನೀರೆರುವುದರ ಮೂಲಕ ಚಾಲನೆ ನೀಡಿ ಅವರು ವಿದ್ಯಾರ್ಥಿಗಳನ್ನುಉದ್ದೇಶಿಸಿಮಾತನಾಡುತ್ತಇಂದಿನ ಯುವಕರು ನಗರದಲ್ಲಿ ಶೋಕಿಗಾಗಿ ತಲೆ ಎತ್ತಿದು ಮಾದಕ ವಸ್ತುಗಳು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಸಣ್ಣ ಸಣ್ಣ ಹಳ್ಳಿಗಳು ಬಲಿಯಾಗುತ್ತಿರುವ ಯುವ ಜನಾಂಗದ ಆಶೋತ್ತರಗಳನ್ನು ಹಾಳು ಮಾಡುತಿದ್ದು ವ್ಯಾಸನ ಮುಕ್ತ ಸಮಾಜನಿರ್ಮಾಣಕ್ಕಾಗಿ ಯುವಕರೆ ಸಾರಥ್ಯ ವಹಿಸಬೇಕಾಗಿದ ಅಗತ್ಯವಿದೆ. ಯುವಕರು ಹೆರಾಯಿನ್ , ಬ್ರೌನ ಶುಗರ್,ಆಫಿಮ್ ಮಾದಕಗಳು ಆತಿ ಕಡಿಮೆ ಅವಧಿಯಲ್ಲಿದೇಹ ಮತ್ತುಮನಸ್ಸಿನ ಮೇಲೆ ಆತಿ ವೇಗವಾಗಿ ದುಷ್ಟಪರಿಣಾಮ ಬರುತ್ತವೆ ಕೊನೆಗೆ ಆತ ಮಾದಕ ವಸ್ತುವಿನ ದಾಸನಾಗಿ ಪರಿವರ್ತನೆಗೊಳ್ಳತ್ತಾನೆ ಮಾದಕ ವ್ಯಸನಿ ಆಲ್ಲದೆ ಅವನ ಕುಟುಂಬ ಘೋರ ಸಂಕಷ್ಟಕ್ಕೆಒಳಗಾಗುತ್ತದೆ ಎಂದರು.ದುಶ್ಚಟಗಳಿಗೆ ಬಲಿ ಆಗಬಾರದುವ್ಯಾಸನ ಮುಕ್ತ ಭಾರತ ಮಾಡಬೇಕಾದರೆ ಯುವಕರ ಪಾತ್ರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ನಂತರ ಜಿಲ್ಲಾ ಮಾನಸಿಕಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕೋಲ್ಜೊಸ್ಟ್ಸಂತೋಷಿ ಗೋಳ ಅವರುಯುವಕ / ಯುವತಿಯರಿಗೆ ಉದ್ದೇಶಿಸಿ ಮಾತನಾಡುತ್ತ ಮಾನಸಿಕ ಖಾಯಿಲೆಗೆ ಒಳಗಾಗುವ ಬಹಳಷ್ಟು ಸಾಮನ್ಯ ಜನರಲ್ಲಿ ಕಂಡುಬರುತ್ತದೆ .ಆತಿ ದುಖಃ,ಅತಿ ಸಂಶಯ, ವಿಚಿತ್ರ ವರ್ತನೆ, ಮದ್ಯ ಮತ್ತು ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿ ಸಿಲುಕಿರುವವರು.ಆತ್ಮಹತ್ಯೆ ಆಲೋಚನೆ. ಮೈ ಮೇಲೆ ದೇವರ,ದೆವ್ವ ಬಂದಂತೆ ಆಡುವುದು. ಹೀಗೆಹಲಾವಾರು ಗಂಭಿರ ಸ್ವರೂಪದ ಮಾನಸಿಕ ಖಾಯಿಲೆಗೆ ಒಳಗಾಗುತ್ತರೆ.ಪರೀಕ್ಷಾ ಒತ್ತಡಕ್ಕೊಳಗಾದವವರು , ಕೌಟಂಬಿಕ ಕಲಹದಿಂದ ನರಳುತ್ತಿರುವವರಿಗೆ ನಮ್ಮ ಇಲಾಖೆಯಿಂದ ಮನೋಚೈತನ್ಯ ಕಾರ್ಯಕ್ರಮದ ಮೂಲಕ ತಾಲೂಕಾವಾರುಉಚಿತ ಅಪ್ತ ಸಮಾಲೋಚನೆ ಮಾಡಲಾಗುತ್ತಿದೆ. ಪ್ರತಿ ಒಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳಬೆೇಕೆಂದು ತಿಳಿಸಿದರು.

ಕಾರ್ಯಕ್ರಮದ.ಸರ್ಕಾರಿ ಪದವಿ ಪೂರ್ವಕಾಲೇಜಿನಪ್ರೋ ಶಮ್ಮಶೊದ್ದಿನ್ ಪಾಟೇಲ್ ಅಧ್ಯಕ್ಷತೆವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಕಾರ್ಯಕ್ರಮ ಆಧಿಕಾರಿಗಳಾದಅಬ್ದಲ್ ಶಫೀ ಅಹ್ಮದ್ ,ಟುಬ್ಯಾಕೋ ಸೇಲ್ ಸೊಷಲ್ ವರ್ಕರ್ ಆರತಿ ಎಂ ಧನಶ್ರೀ.ಜಿಲ್ಲಾ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಹರ್ಷ ಆರ್ಬನ್ ಆಂಡ್ ರೂರಲ್ ಡವಲಪ್ಮೆಂಟ್ ಸೊಸೈಟಿಯ ಸುನೀತಾ ಎಂ.ಉಪನ್ಯಾಸಕರುಗಳಾದ ಪ್ರೋ. ನಾಗಪ್ಪ ಕೊಟ್ಟರಾಗಿ. ನಾರ್ಸಿಂಗ್ ಆಫೀಸರ್ಮಹಾನಂದ ಮಠ. ವೇದಿಕೆ ಇದ್ದರು.

ಕಾಲೇಜಿನ ಯುವತಿ ಯುವಕರಿಗೆ ತಂಬಾಕು / ಧೂಮಪಾನ ವ್ಯಸನ ಮುಕ್ತ ಕಲಬುರಗಿಮಾಡಲು ಪ್ರಮಾಣ ಮಾಡಿಸಲಾಯಿತು.ಹಾಗೆ ಇತರರು ಕಾರ್ಯಕ್ರಮದಲ್ಲಿಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here