ನೀತಿಸಂಹಿತೆ ಉಲ್ಲಂಘನೆ ಆರೋಪ: ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

0
109

ಕಲಬುರಗಿ: ಮಂಗಳವಾರ ಪ್ರಧಾನಿ‌ ಮೋದಿ ರೋಡ್ ಶೋ ಕಾರ್ಯಕ್ರಮ ವ್ಯವಸ್ಥೆಯಲ್ಲಿ ನೀತಿಸಂಹಿತೆ ಉಲ್ಲಂಘಿಸಿ ಬಿಜೆಪಿ ಪಕ್ಷದ ಧ್ವಜಗಳು ಮತ್ತು ಕಟೌಟ್ ಹಾಗೂ ಬ್ಯಾನರ್ ಗಳು ಹಾಕಲಾಗಿದೆ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಜೆಡಿಯು ಅಭ್ಯರ್ಥಿ ಶರಣ ಐಟಿ ಆರೋಪಿಸಿ ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದಾರೆ.

ನಗರದ ಕೆಎಂಎಫ್ ಕಚೇರಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತದ ವರೆಗೆ ಚುನಾವಣಾಧಿಕಾರಿಗಳು ನೀತಿಸಂಹಿತೆ ಕಾಪಾಡುವಲಿ ವಿಫಲವಾಗಿದೆ. ನಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬ್ಯಾನರ್ ಹಾಕಲು ಅವಕಾಶಕೇಳಿದ್ದಕ್ಕೆ ರೀಟನಿಂಗ್ ಅಧಿಕಾರಿ ಅವಕಾಶ ನೀಡದೇ ಆದೇಶದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡ್ತಾರೆ.

Contact Your\'s Advertisement; 9902492681

ಆದರೆ ಮಂಗಳವಾರ ಪ್ರಧಾನಿ ರೋಡ್ ಶೋ ಮಾರ್ಗದಲ್ಲಿ ನೀತಿಸಂಹಿತೆ ಉಲ್ಲಂಘನೆಯಾದರು ಪಾಲಿಕೆಯ ಆಯುಕ್ತರು, ಚುನಾವಣಾಧಿಕಾರಿಗಳು ಹಾಗೂ ರೀಟನಿಂಗ್ ಅಧಿಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದುರಿದ್ದಾರೆ.

ಪ್ರಧಾನಿ ಎಂಬ ಮಾತ್ರಕ್ಕೆ ಅವರು ಏನೂ ಮಾಡಿದರು ನಡೆಯುತ್ತದೆ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಈ ದ್ವಂದ್ವ ನೀತಿಯಿಂದ ಪಾರದರ್ಶಕ ಚುನಾವಣೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪಕ್ಷ ತಾರತಮ್ಯವನ್ನು ಅನುಸರಿಸಲಾಗುತ್ತದೆ ಎಂದು ಆರೋಪಿಸಿದರು.

ಬಿಜೆಪಿಯ ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳಿಗೆ ಕೋಟಿ ಗಟ್ಟಲೆ 40% ಕಮಿಷನ್ ಹಣ ಖರ್ಚು ಮಾಡಲಾಗುತ್ತಿದೆ. ಬಿಜೆಪಿ ಅವರು ಅಧಿಕಾರದಲ್ಲಿ ಇರುವ ಕಾರಣ ನೀತಿಸಂಹಿತೆ ಅವರಿಗೆ ಅಪ್ಲೈ ಆಗುವುದೇವೇ? ಇತರೆ ಪಕ್ಷಗಳಿಗೆ ಮಾತ್ರ ನೀತಿಸಂಹಿತೆ ಪಾಲಿಸಬೇಕೆಂಬ ಚುನಾವಣೆ ಆಯೋಗದ ಕ್ರಮ ಖಂಡನೀಯವಾಗಿದೆ ಎಂದರು.

ತಕ್ಷಣ ಪ್ರಧಾನಿ ಮೋದಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಪಾರದರ್ಶಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ ಅವರು ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಒ್ರಧಾನಿ ವಿರುದ್ಧ ದೂರು ನೀಡಲು ತೆರಳಿದ ವೇಳೆ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here