ಕಲಬುರಗಿ: ಭಜರಂಗದಳ ಸಂಘಟನೆ ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿರುವುದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸುದ್ದಿ ಗೋಷ್ಠಿಯಲ್ಲಿ ಪ್ರಣಾಳಿಕೆ ಸುಟ್ಟಿ ಆಕ್ರೋಶ ಹೋರಹಾಕಿದರು.
ನಗರದ ಫಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಿಎಸ್ಐ ನಿಷೇಧಿತ ಸಂಘಟನೆಯನ್ನು ನಿಷೇಧಿಸುವುದು ಹಾಸ್ಯ ಸ್ಪದವಾಗಿದೆ. ಭಜರಂಗದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಸೇರಿಸುವುದು ರಾಷ್ಟ ಭಕ್ತರಿಗೆ ನೋವು ತಂದುಕೊಟ್ಟಿದೆ. ಭಜರಂಗದಳ ಧರ್ಮ ರಕ್ಷಣೆಗಾಗಿ ಇರುವ ಸಂಘಟನೆ ಇಂತಹ ಸಂಘಟನೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಿಷೇಧ ಮಾಡುವುದಾಗಿ ಘೋಷಿರುವ ಕಾಂಗ್ರೆಸ್ ರಾಷ್ಟದ್ರೋಹಿ ಮನಸ್ಥಿತಿ ಹೊಂದಿದೆ ಎಂಬುದನ್ನು ತೊರಿಸಿಕೊಡುತ್ತದೆ ಎಂದು ಟೀಕಿಸಿದರು.
ಅಧಿಕಾರ ಆಸೆಯಾಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಾತಿ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ ಪ್ರಣಾಳಿಕೆ ಮೊಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್ ಪಕ್ಷದ ಪ್ರಣಾಳಿಕೆ ಇದ್ದಂತೆ ಇದೆ. ಕೂಡಲೇ ಈ ರಾಷ್ಟದ್ರೋಹಿ ಪ್ರಣಾಳಿಕೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಕಲಬುರಗಿ ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಎಸ್ ಪಾಟೀಲ್, ಕಲಬುರಗಿ ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷ ಅಶೋಕ ಬಗಲಿ, ಗ್ರಾಮಾಂತರ ಜಿಲ್ಲಾ ಪ್ರಭಾರಿ ಗುರುನಾಥ್ ಜಾಂತಿಕಾರ್, ಕಾಡ ಮಾಜಿ ಅಧ್ಯಕ್ಷ ಶರಣಪ್ಪ ತಲ್ವಾರ್, ರಾಜ್ಯ ಕುರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ, ಗ್ರಾಮಾಂತರ ಜಿಲ್ಲಾ ವಕ್ತಾರರು ಚಂದ್ರಶೇಖರ್ ರೆಡ್ಡಿ, ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ ಉಪಸ್ಥಿತರಿದ್ದರು.