ಉಪ್ಪಿಟ್ಟಿನವರು “ಬೇಡ ಬೇಡ ಉಪ್ಪಿಟ್ಟೇ ಇರಲಿ”: ಮತದಾನ ಜಾಗೃತಿ ಕಥೆ

0
29
  • Anil Kumar G ಪೋಸ್ಟ್:

100 ಜನರಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ್ನೇ ತಿಂಡಿಯನ್ನಾಗಿ ಮಾಡುತ್ತಿದ್ದರು. ಆ ಹಾಸ್ಟೆಲ್ಲಿನಲ್ಲಿದ್ದ 20%ಜನರಿಗೆ ಉಪ್ಪಿಟ್ಟು ಇಷ್ಟವಾದರೆ ಇನ್ನುಳಿದ 80% ಜನ ಉಪ್ಪಿಟ್ಟಿನಿಂದ ರೋಷಿಹೋಗಿದ್ದರು !

ಒಂದು ದಿನ ತಿಂಡಿಯ ಕುರಿತು ಅಸಮಾದಾನ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20% ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80% ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನ ದಿನವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಹೊಸ ತಿಂಡಿ ಮಾಡಬಹುದು ಎಂದು ವಾರ್ಡನ್ ಹೇಳಿದರು.

Contact Your\'s Advertisement; 9902492681

ಉಪ್ಪಿಟ್ಟಿನವರು “ಬೇಡ ಬೇಡ ಉಪ್ಪಿಟ್ಟೇ ಇರಲಿ” ಅಂತ ಹಠ ಹಿಡಿದು ಕೂತಿದ್ದರು. ಉಳಿದವರು “ಅದೆಲ್ಲಾ ಆಗಲ್ಲ. ಬೇರೆ ತಿಂಡಿ ಬೇಕು ಅಂತ ರಚ್ಚೆ ಹಿಡಿದರು.

ಆಗ ವಾರ್ಡನ್ “ನಾವು ಸಂವಿಧಾನಯುಕ್ತ ಭವ್ಯ ಭಾರತದ ಪ್ರಜಾಪ್ರಭುತ್ವದ ಪ್ರಜೆಗಳು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ವೋಟಿಂಗ್ ಮಾಡಿಸಿ ಮೆಜಾರಿಟಿ ನೋಡೋಣ ಎಂದರು. 20% ಜನ “ಉಪ್ಪಿಟ್ಟಿರುವಾಗ ಇವೆಲ್ಲಾ ಯಾಕೆ?” ಅಂತಾ ಪುಸುಗುಟ್ಟಿದರು. ಉಳಿದ 80% ಜನ “ವೋಟಿಂಗ್ ಮಾಡಿ ಪ್ರಜಾಸತ್ತಾತ್ಮಕವಾಗಿ ನಿಮಗೆ ಬುದ್ಧಿ ಕಲಿಸ್ತೀವಿ” ಅಂತಾ ಬುಸುಗುಟ್ಟಿದರು. ಮತ್ತು ಗೆಲ್ಲುವುದು ತಾವೇ ಎಂಬ ಭ್ರಮೆಯಲ್ಲಿ ಉಳಿದರು !!

ಮರುದಿನ ಮತದಾನ. ಉಪ್ಪಿಟ್ಟುಪ್ರಿಯ 20% ಜನರು ಮೊದಲೇ ನಿರ್ಧರಿಸಿದಂತೆ ಉಪ್ಪಿಟ್ಟಿಗೇ ಮತ ಹಾಕಿದರು. ಉಳಿದ 80% ಜನರ ಮತಗಳು ಹೀಗಿದ್ದವು:

ಮಸಾಲೆ ದೋಸೆ – 18% ಜನ
ಆಲೂ ಪರಾಠ – 16% ಜನ
ಪೂರಿ ಸಾಗು – 14% ಜನ
ಮ್ಯಾಗಿ – 12% ಜನ
ಇಡ್ಲಿ ಸಾಂಬಾರ್ – 10% ಜನ
ಟೋಸ್ಟ್ ಆಮ್ಲೆಟ್ – 10% ಜನ

ಬಹುಮತ ಉಪ್ಪಿಟ್ಟಿಗೇ ಬಂದಿದ್ದರಿಂದ, ಪ್ರಜಾ ಅಭಿಪ್ರಾಯಗಳಿಗನುಗುಣವಾಗಿ, ಉಪ್ಪಿಟ್ಟನ್ನೇ ಹಾಸ್ಟೆಲ್ಲಿನ (ರಾಷ್ಟ್ರೀಯ) ಆಹಾರವಾಗಿ ಘೋಷಿಸಿ ಮುಂದುವರೆಸುವುದೆಂದು ತೀರ್ಮಾನಿಸಲಾಯಿತು.

ನೀತಿ: ಎಲ್ಲಿಯವರೆಗೆ 80% ಜನ ತಮ್ಮ ಸ್ವಾರ್ಥವನ್ನೇ ನೋಡಿಕೊಂಡು ಒಡೆದು ಹರಿದು ಹಂಚಿ ಕೂತಿರುತ್ತಾರೋ, 20% ಜನರೇ ನಿಮ್ಮ ಜೀವನವನ್ನು ನಿರ್ಧರಿಸುತ್ತಾರೆ, ಅವರ ಆಯ್ಕೆಗಳಿಗೆ ನೀವು ಅನುಗುಣವಾಗಿ ಹೊಂದಿಕೊಳ್ಳಬೇಕಾಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here