ಕಲಬುರಗಿ: ನಮ್ಮ ಇ-ಮೀಡಿಯಾಲೈನ್ ಆನ್ ಲೈನ್ ಪತ್ರಿಕೆಯಲ್ಲಿ ಯುವ ಲೇಖಕ ವಿಶ್ವನಾಥ ಮರತೂರ ಅವರು ಕಥೆಗಾರ ಸಿದ್ಧರಾಮ ಹೊನ್ಕಲ್ ಅವರ ‘ಮತ್ತೆ ಮಳೆ ಹೊಯ್ಯುತ್ತಿದೆ ಭೂಮಿ ಕರೆಯುತ್ತದೆ’ ಎಂಬ ಕಥೆಯನ್ನು ಓದಿ ಹೊನ್ಕಲ್ ಅವರ ಕಥೆ, ಕಟ್ಟಿಟ್ಟ ಬುತ್ತಿ’ ತಲೆ ಬರಹದ ಅಡಿಯಲ್ಲಿ ಎಂಬ ಒಕ್ಕಣಿಕೆಯ ಬರಹಕ್ಕೆ ನಾಡಿನಾದ್ಯಂತ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸ್ವತಃ ಹೊನ್ಕಲ್ ಅವರೆ, ವಿಶ್ವನಾಥ ಮರತೂರ ಅವರಿಗೆ ಒಂದು ಮೆಸೆಜ್ ಕಳಿಸಿದ್ದಾರೆ.ಅದರ ಯಥಾವತ್ತಾದ ಮೆಸೆಜ್ ಓದುಗರಿಗಾಗಿ ಇಲ್ಲಿ ಬಳಸಲಾಗಿದೆ.
-ಸಂ
ಆತ್ಮೀಯರೆ,
ಒಂದೆ ಕಥೆ ಓದಿ ನಿರ್ಣಯಕ್ಕೆ ಬರಬಾರದು. ಆದಾಗ್ಯೂ ಇಷ್ಟಾದರು ಓದಿ ರೆಸ್ಪಾನ್ಸ್ ಮಾಡಿದ್ದಕ್ಕೆ ಖುಷಿ ಪಡುವೆ. ಕಲಬುರ್ಗಿ ಬಂದಾಗ, ಶಹಾಪುರ ಬಂದಾಗ ಫೋನು ಮಾಡಿ.ನನ್ನ ಹೊಸ ಪುಸ್ತಕ ಕೊಡುವೆ.ಎಲ್ಲ ಕಥೆಗಳನ್ನು ಗಮನಿಸಿ ಬರೆಯಿರಿ.ನಿಮ್ಮ ಮಾತುಗಳು ಗೌರವಿಸುವೆ.ಇದೇ ಕಥಾ ಹಂದರದ ಮೂರು ಕಥೆಗಳು ಬರೆದಿರುವೆ. ಪತ್ರಿಕೆಗಳು ವಿಧಿಸುವ ಮಿತಿಯಲ್ಲಿ.ಹಾಗಾಗಿ ಒಂದೇ ಕಥೆಯಲ್ಲಿ ಎಲ್ಲ ವಿವರ ಕಟ್ಟಿಕೊಡುವದು ಕಷ್ಟ.ಇದು ನಿಮಗೆ ಅರ್ಥ ಆಗುತ್ತದೆ ಅಂದುಕೋತೇನೆ.ಹಹಹ
ಕಾದಂಬರಿಯ ಕ್ಯಾನ್ವಾಸನಲ್ಲಿ ಕಥೆ ನೋಡಬಾರದು.ಸಣ್ಣ ಕಥೆಗೆ ತನ್ನದೇ ಆದ ಮಿತಿಗಳಿರುತ್ತವೆ.