ಹಿಂಬಾಲಕರಿಂದಲೆ ಚಂದು ಪಾಟೀಲರ ಸೋಲು

0
133

ಕಲಬುರಗಿ: ಕಳೆದ ಚುನಾವಣೆಯಲ್ಲಿ ಸೋತರೂ ಧೃತಿಗೆಡದ ಚಂದು ಪಾಟೀಲರು ಐದು ವರ್ಷ ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಮತದಾರರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಈ ಬಾರಿ ಚಂದು ಪಾಟೀಲರ ಸೋಲಿಗೆ ಅವರ ಹಿಂಬಾಲಕರೇ ಕಾರಣ ಎಂದು ಸಾಮಾಜಿಕ ಹೋರಾಟಗಾರ ದೇವಿಂದ್ರ ದೇಸಾಯಿ ಕಲ್ಲೂರ್ ಆರೋಪಿಸಿದ್ದಾರೆ.

ಹೇಳಿಕೆ ಹೊರಡಿಸಿರುವ ಅವರು ಚಂದು ಪಾಟೀಲರು ಸಾಮಾಜಿಕ ಕಳಕಳಿ ಉಳ್ಳ ಯುವನಾಯಕರು, ಬಡವರಿಗೆ, ದುರ್ಬಲರಿಗೆ ಸದಾ ಸಹಾಯ ಹಸ್ತ ಇದೆ. ಅವರಲ್ಲಿ ಯಾವುದೇ ಅಹಂ ಇಲ್ಲ, ಉತ್ತರ ಮತ ಕ್ಷೇತ್ರದಲ್ಲಿ 13 ಜನ ಬಿಜೆಪಿ ಕಾಪೆರ್Çರೇಟ್ ಗಳು ತಮ್ಮ ಕರ್ತವ್ಯ, ಪಕ್ಷ ನಿಷ್ಠೆ ಪ್ರಾಮಾಣಿಕತೆಯಿಂದ ಮತದಾರರ ಮನ ಗೆಲ್ಲಲು ಪ್ರಯತ್ನ ಮಾಡಲಿಲ್ಲ. ಚಂದು ಪಾಟೀಲರ ಅಪ್ತರಲ್ಲಿಯೆ ಕೆಲವರು ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಬೇಸರ ತಂದಿದೆ. ಅವರ ಆಪ್ತರಲ್ಲಿ ಕರಪತ್ರ ಕೇಳಿದರೆ ಕಳುಹಿಸಿ ಕೊಡುವದಾಗಿ ಮಾತ್ರ ಹೇಳಿದರು.

Contact Your\'s Advertisement; 9902492681

ಕಾರ್ಯಕರ್ತರ ಫೆÇೀನ್ ಕರೆಗೆ ಸರಿಯಾಗಿ ಸ್ಪಂದಿಸಲಿಲ್ಲ, ಇದು ಕಾರ್ಯಕರ್ತರಲ್ಲಿ ಬೇಸರ ತಂದಿದೆ. ಬಿಜೆಪಿ ಕೆಲವು ಮುಖಂಡರ ವರ್ತನೆ ಇದರ ಹೊರತಾಗಿಲ್ಲ, ಹಾಗಾದರೆ ಚಂದು ಪಾಟೀಲರ ಆಪ್ತರು ಮತದಾರರಲ್ಲಿ ಕರಪತ್ರ ನೀಡದೆ ಪ್ರಚಾರ ಮಾಡಿದರೇ?, ಚಂದು ಪಾಟೀಲರು 13 ಜನ ಕಾಪೆರ್Çರೇಟರ್ ಗಳನ್ನು ಗೆಲ್ಲಿಸಿ ಕೊಟ್ಟರು, ಗೆದ್ದ ಕಾಪೆರ್Çರೇಟ್ ಗಳು ತಲಾ ಎರಡು ಸಾವಿರ ಮತಗಳು ಹಾಕಿಸುವದಕ್ಕೆ ಆಗಲಿಲ್ಲವೆ? ಒಟ್ಟಾರೆ ಚಂದು ಪಾಟೀಲರ ಸೋಲಿಗೆ ಸಂಘಟನಾತ್ಮಕ ಕೊರತೆ ಎದ್ದು ಕಾಣುತಿತ್ತು. ಅವರ ಆಪ್ತರೇ ಅವರ ಸೋಲಿಗೆ ಕಾರಣವಾಗಿದ್ದಾರೆ ಎಂದು ದೇವೇಂದ್ರ ದೇಸಾಯಿ ಕಲ್ಲೂರ್ ಪ್ರಕಟಣೆ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here