ಸುರಪುರ: ರಾಜಾ ವೆಂಕಟಪ್ಪ ನಾಯಕ ಅವರಿಗೆ ಸಚಿವ ಸ್ಥಾನ ದೊರೆಯಲೆಂದು ನಗರದ ಕುಂಬಾರಪೇಟದಲ್ಲಿ ಮರೆಮ್ಮ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಸಲಾಗಿದೆ.
ನಗರಸಭೆ ಮಾಜಿ ಸದಸ್ಯ ಮಲ್ಲಣ್ಣ ಹುಬ್ಬಳ್ಳಿ ನೇತೃತ್ವದಲ್ಲಿ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,ಮರೆಮ್ಮ ದೇವಿಗೆ ವಿಶೇಷವಾಗಿ ಪೂಜೆ ಮಾಡಿಸುವ ಮೂಲಕ ಎಲ್ಲ ಮುಖಂಡರು ಸಚಿವ ಸ್ಥಾನ ದೊರೆಯಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಣ್ಣ ಹುಬ್ಬಳ್ಳಿ,ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗುರಿ,ವೆಂಕಟೇಶ ವಕೀಲ,ಬಸವರಾಜ ಹಿರೇಕುರಬ,ಪ್ರಕಾಶ ಪಗಡೆಕಲ್,ಮರೆಪ್ಪ ಶಾಂತಪುರ,ಬಸವರಾಜ ಗುಡ್ಡಕಾಯಿ,ಸೂಗುರಾಜ ಪಾಣಿ,ಭೀಮರಾಯ ಕುಂಬಾರ,ಬಲಭೀಮ ನಾಯಕ,ಸಾಯಿಬಣ್ಣ ಹವಲ್ದಾರ್,ಹಣಮಂತ ಕವಲಿ,ಮಾನಪ್ಪ ಗುಡ್ಡಕಾಯಿ ಸೇರಿದಂತೆ ರಾಜಾ ವೆಂಕಟಪ್ಪ ನಾಯಕ ಅವರ ಅನೇಕ ಜನ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.