ಹಳೆಯ ರಸ್ತೆಯ ಮೂಲಕವೇ ಭಕ್ತರಿಗೆ ಅವಕಾಶ ಕೂಡಿ: ರಟಕಲ್ ಗ್ರಾ.ಪಂ. ನಿರ್ಣಯ ಮಂಡನೆ

0
63

ಕಲಬುರಗಿ: ಚಿಂಚೋಳಿಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಪಂ ಆವರಣದಲ್ಲಿ ಗ್ರಾಮಸ್ಥರು ಐತಿಹಾಸಿಕ ಹಜರತ್ ಮೆಹಬೂಬ್ ಸುಬಾನಿ ದರ್ಗಾಕ್ಕೆ ಅಡ್ಡಲಾಗಿ ಕಟ್ಟಿರುವ ಕಂಪೌಂಡ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಗುರುವಾರ ಗ್ರಾಮ ಪಂಚಾಯತಿ ತುರ್ತು ಸಭೆಯಲ್ಲಿ ಸರ್ವಾನುಮತದಿಂದ ದರ್ಗಾಕ್ಕೆ ಹೋಗಲು ಭಕ್ತರಿಗೆ ಹಳೆಯ ಮಾರ್ಗದ ಮೂಲಕವೇ ಅವಕಾಶ ನೀಡಬೇಕು ಎಂದು ನಿರ್ಣಯ ಮಂಡಿಸಲಾಯಿತು.

ಗುರುವಾರ ಗ್ರಾಮ ಪಂಚಾಯಲ್ಲಿ ಕರೆದ ಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ತೇಜಮ್ಮ ಅವರ ಅಧ್ಯಕ್ಷತೆಯಲ್ಲಿ ಗ್ರಾಪಂ ಉಪಾಧ್ಯಕ್ಷ ನಾಗರಾಜ, ಗ್ರಾಪಂ ಅಭಿವೃದ್ಧ ಅಧಿಕಾರಿ ಸೋಮಶೇಖರ ಅವರಾದಿ, ಸದಸ್ಯರಾದ ಶೋಭಾ, ಹುಸೇನಬಿ, ಶರಣಮ್ಮ, ಮಹಾದೇವಿ ಭಾರತಬಾಯಿ, ಸಂಗೀತಾ, ಅಂಬಿಕಾ, ದಶರಥ, ಜಗದೀಪ ಬಾಬುರಾವ, ಶೊಭಾವತಿ ನಾಗರಾಜ, ಸಂತೋಷ ದೇವಿಂದ್ರಪ್ಪ ಅವರ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಮಂಡಿಸಲಾಯಿತು.

Contact Your\'s Advertisement; 9902492681

ನೂರಾರು ವರ್ಷಗಳ ಇತಿಹಾಸವಿರುವ ಹಜರತ್ ಮಹೆಬೂಬ್ ಸುಬಾನಿ ದರ್ಗಾಕ್ಕೆ ಹೋಗುವ ಮಾರ್ಗಕ್ಕೆ ಅಡ್ಡಲಾಗಿ ಇತ್ತೀಚೆಗೆ ಪೊಲೀಸ್ ಇಲಾಖೆಯವರು ಕಾಂಪೌಂಡ್ ಗೋಡೆ ನಿರ್ಮಿಸಿದ್ದು, ಪೊಲೀಸ್ ಇಲಾಖೆ ಕ್ರಮದ ವಿರುದ್ಧ ರಟಕರ್ ಗ್ರಾಮಸ್ಥರು ಮೇ. 23 ರಿಂದ ಅನಿರ್ದಿಷ್ಟ ಅವದಿ ಸತ್ಯಾಗ್ರಹ ನಡೆಸಿದ್ದಾರೆ.

ಇದನ್ನು ಪರಿಗಣಿಸಿದ ಸ್ಥಳೀಯ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಒಳಗೊಂಡ ವಿಶೇಷ ಸಭೆ ಕರೆದು ಹೋಟೆಲ್ ಹತ್ತಿರವಿರುವ ಹಳೆಯ ಮಾರ್ಗದ ಮೂಲಕವೇ ಭಕ್ತರಿಗೆ ಅವಕಾಶ ನೀಡುವ ಬಗ್ಗೆ ಸರ್ವ ಸದಸ್ಯರ ಅಭಿಪ್ರಾಯ ಪಡೆದು ಸಭೆಯಲ್ಲಿ ಅನುಮೋದನೆ ಜಾರಿ ಮಾಡಲಾಯಿತು.

ಸ್ಥಳೀಯರ ಮುಖದಲ್ಲಿ ಸಮಾಧಾನ ಕಂಡರೂ ಧರಣಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ದರ್ಗಾಕ್ಕೆ ದಾರಿಮಾಡಿಕೊಟ್ಟಾಗಲೇ ಧರಣಿ ಹಿಂಪಡೆಯುತ್ತೇವೆ ಎಂದು ಹೋರಾಟ ನಿರತ ಗ್ರಾಮಸ್ಥರು ಬಿಗಿಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here