ಆಳಂದ: ಶೈಕ್ಷಣಿಕ ಸಾಲಿಗೆ ಶಾಲಾ ಆರಂಭೋತ್ಸವಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳತೊಡಗಿದೆ.ಈ ಕುರಿತು ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ ಅವರು, ಮೇ 29ರಂದು ಶಾಲಾ ಆವರಣ ಸ್ವಚ್ಚತೆ ಮತ್ತು ಶಾಲಾ ಪ್ರಾರಂಭೊತ್ಸವಕ್ಕೆ ತಯಾರಿ ಹಾಗೂ ಎಲ್ಲಾ ಮುಖ್ಯಗುರುಗಳು, ಶಿಕ್ಷಕರು ಹಾಗೂ ಬಿಸಿಯೂಟದ ಸಿಬ್ಬಂಧಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿದರು.
ಮೇ 30 ಮತ್ತು 31 ರಂದು ಪಾಲಕ ಪೆÇೀಷಕರ, ಎಸ್‍ಡಿಎಂಸಿ ಹಾಗೂ ಇತರ ಭಾಗಿದಾರರ ಸಭೆ ಮೂಲಕ ಶಾಲಾ ವಾರ್ಷಿಕ ಕ್ರೀಯಾಯೋಜನೆ ಸಿದ್ದಪಡಿಸಿ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯ ಕೈಗೊಳ್ಳಿ ಎಂದರು.
ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳು 260, ಸರ್ಕಾರಿ ಪ್ರೌಢಶಾಲೆಗಳು 48, ಅನುದಾನಿತ ಶಾಲೆಗಳು 11, ಪ್ರಾಥಮಿಕ + 19 ಪ್ರೌಢ ಅನುದಾನರಹಿತ ಶಾಲೆಗಳು 134, ತರಗತಿ 1 ರಿಂದ10ನೇ ವರೆಗೆ ದಾಖಲಾತಿ ಗುರಿ ಕ್ರಮವಾಗಿ 5572, 5572, 7107, 6029, 5919, 6217, 6166, 6119, 6233, 6144 ಹೊಂದಲಾಗಿದೆ 61,078 ದಾಖಲಾತಿ ಗುರಿ ಹೊಂದಿದೆ ಎಂದು ಹೇಳಿದರು.
ಎಲ್ಲಾ ಶಾಲೆಗಳಿಗೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಸರಬರಾಜಾಗಿದ್ದು ಶಾಲಾ ಪ್ರಾರಂಭೋತ್ಸವದಂದೆ ಮಕ್ಕಳಿಗೆ ವಿತರಣೆ ಕೈಗೊಳ್ಳಿ, ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪೌಡರ್ ಸರಬರಾಜು ಮಾಡಲಾಗಿದ್ದು ಶಾಲಾ ಪ್ರಾರಂಭೋತ್ಸವದ ದಿನದಿಂದಲೆ ಮಕ್ಕಳಿಗೆ ವಿತರಣೆಯಾಗಬೇಕು ಎಂದರು.
ಜ.2023ನೇ ತಿಂಗಳಲ್ಲಿ ಮಕ್ಕಳ ಗಣತಿ ಪ್ರಕ್ರಿಯೇಯಲ್ಲಿ ಶಾಲೆಗೆ ದಾಖಲು ಮಾಡಿಕೊಳ್ಳಬೇಕಾದ ಅರ್ಹ ಮಕ್ಕಳ ಪಟ್ಟಿ ತಯಾರಿಸಿಕೊಳ್ಳಲಾಗಿದೆ ಮತ್ತು ಅಂಗನವಾಡಿ ಕೇಂದ್ರಗಳ ಮೂಲಕವು ಅರ್ಹ ವಯಸ್ಸಿನ ಮಕ್ಖಳ ಪಟ್ಟಿ ಪಡೆದುಕೊಳ್ಳಲಾಗಿದೆ. ಅಕ್ಷರ ದಾಸೋಹ ಯೋಜನೆಯ ಆಹಾರ ಸಾಮಗ್ರಿಗಳ ಸೃಬರಾಜು ಪ್ರಗತಿಯಲ್ಲಿದ್ದು ಮೇ 29ರ ಒಳಗಾಗಿ ಎಲ್ಲಾ ಶಾಲೆಗಳಿಗೂ ಸರಬರಾಜು ಮಾಡಲಾಗುವುದು. ಎಲ್ಲಾ ಸಿ.ಆರ್.ಪಿ ಬಿ.ಆರ್.ಪಿ ಸೇರಿದಂತೆ ಎಲ್ಲಾ ಮೇಲುಸ್ತುವಾರಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಾಗಿದ್ದು ಮಿಂಚಿನ ಸಂಚಾರ ಕಾರ್ಯಕ್ರಮದ ವೇಳಾ ಪಟ್ಡಿ ಸಿದ್ಧಪಡಿಸಲಾಗಿದೆ ಮತ್ತು ಜವಾಬ್ದಾರಿ ಹಂಚಿಕೆ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.
ಶಾಲಾ ಆರಂಭದ ಪ್ರಥಮ ದಿನದಂದಲೆ 100% ರಷ್ಟು ಮಕ್ಕಳ ಹಾಜರಾತಿ ಇರುವಂತೆ ನೋಡಿಕೊಳ್ಳಿ, ದಾಖಲಾತಿ ಆಂದೋಲನ ಮತ್ತು ವರ್ಗಾವಣೆ ಪತ್ರ ವಿತರಣೆಯ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಮತ್ತು ಈ ಕುರಿತಂತೆ ಸಿ.ಆರ್.ಪಿ ಯವರು ತಮ್ಮ ವ್ಯಾಪ್ತಿಯಲ್ಲಿ ಮುಖ್ಯಗುರುಗಳಿಗೆ ಸೂಕ್ತ ತಾಂತ್ರಿಕ ಸಹಾಯ ನೀಡುವಂತೆ ಕ್ರಮ ಕೈಗೊಳ್ಳಿ, ವಿದ್ಯಾ ಪ್ರವೇಶ ಮತ್ತು ಸೇತುಬಂಧ ಕಾರ್ಯಕ್ರಮಗಳನ್ನು ಶಾಲಾ ಪ್ರಾರಂಭದ ದಿನದಿಂದಲೆ ಅಚ್ಚುಕಟ್ಟಾಗಿ ಶೈಕ್ಷಣಿಕ ಮಾರ್ಗದರ್ಶಿಯಂತೆ ನಿರ್ವಹಿಸಬೇಕು ಎಂದರು.
ಇಲಾಖೆಯ ಸುತ್ತೋಲೆಯಂತೆ 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನು ಮುದ್ರಿಸಿಕೊಳ್ಳಲು ಮತ್ತು ಅದರಲ್ಲಿ ಸೂಚಿಸಿರುವ ಎಲ್ಲಾ ಚಟುವಟಿಕೆಗಳನ್ನು ರಾಜ್ಯ ಪಠ್ಯಕ್ರಮ ಅನುಸರಿಸುವ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ Àಶಾಲೆಗಳು ನಿಗಧಿತ ಕಾಲಮಿತಿಯಲ್ಲಿ ಕಡ್ಡಾಯವಾಗಿ ನಿರ್ವಹಿಸಿ, ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಾಧನೆಗೆ ಶಿಕ್ಷಕರು ಮತ್ತು ಪಾಲಕ ಪೋಷಕರು ಸಹಕಾರವೂ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ ತಾಕೀತು ಮಾಡಿದರು.
ಸಭೆಯಲ್ಲಿ ಶಿಕ್ಷಣ ಸಂಯೋಜಕ ಪ್ರಕಾಶ ಕೊಟ್ರೆ, ಶ್ರೀಮಂತ ಪಾಟೀಲ, ಮುಖ್ಯ ಶಿಕ್ಷಕರ ಸಂಘದ ಮರೆಪ್ಪ ಬಡಿಗೇರ, ಅಣ್ಣಪ್ಪ ಹಾದಿಮನಿ ಇತರರು ಇದ್ದರು.