ಕಲಬುರಗಿ: ಸ್ವತಂತ್ರ ಭಾರತಕ್ಕೆ ಭದ್ರ ಅಡಿಪಾಯ ಹಾಕುವುದರ ಜೊತೆಗೆ, ಸಂವಿಧಾನದ ಪ್ರಜಾಪ್ರಭುತ್ವ, ಜಾತ್ಯಾತೀತತೆ, ಸಮಾನತೆಯ ಆಶಯಗಳಿಗೆ ಬಲ ತುಂಬಿದ, ಆಧುನಿಕ ಭಾರತ ನಿರ್ಮಾಣದ ಸ್ಪಷ್ಟ ಮಾರ್ಗಸೂಚಿ ಹಾಗೂ ಬದ್ಧತೆ ಹೊಂದಿದ್ದ, ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಸ್ವತಂತ್ರ ಭಾರತ ನಿರ್ಮಾಣ ಕುರಿತಾಗಿ ನೆಹರು ಅವರಿಗೆ ಸ್ಪಷ್ಟ ಕಲ್ಪನೆಯಿತ್ತು. ವೈಜ್ಞಾನಿಕ ಸಂಶೋಧನೆ, ಬೃಹತ್ ಕೈಗಾರಿಕೆಗಳಿಗೆ ನೆಹರು ಅವರ ಕೊಡುಗೆ ಅಪಾರ. ಅವರು ಸ್ಥಾಪಿಸಿದ IIT, IIM, IISc, AIMS ನಂತಹ ಉನ್ನತ ಶಿಕ್ಷಣ ಸಂಸ್ಥೆಗಳು, ISRO – HAL ನಂತಹ ದೈತ್ಯ ಸಂಸ್ಥೆಗಳು, ಅನೇಕ ಅಣೆಕಟ್ಟುಗಳು ಇಂದಿಗೂ ದೇಶದ ಜೀವಾಳವಾಗಿವೆ ಎಂದು ಅವರು ಹೇಳಿದ್ದಾರೆ.