ಆಳಂದ: ತಾಲೂಕಿನ ಅಂಬೇವಾಡ ಗ್ರಾಮದಲ್ಲಿನ ಸೂಫಿ-ಸಂತ ಶೇಖ ಪರೀದ್ ಭಾವೋದ್ದೀನ್ ಜಿಕ್ರೀಯಾ ಅವರ ೬೭೦ನೇ (ಆರ್‌ಎ) ವರ್ಷದ ಭಾವೈಕ್ಯದ ಉರುಸ್ ಸಂಭ್ರಮದ ಮಧ್ಯ ಭಕ್ತಿ ಭಾವದೊಂದಿಗೆ ನೆರವೇರಿಸುವ ಮೂಲಕ ಶನಿವಾರ ಸಂಪನ್ನಗೊAಡಿತು.
ಗುರುವಾರ ದರ್ಗಾದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ಸಂದಲ್ ಮೆರವಣಿಗೆ ನಡೆಯಿತು. ಅಲ್ಲದೆ, ಶುಕ್ರವಾರ ಚಿರಾಗ್ ಹಾಗೂ ಶನಿವಾರ ವಿವಿಧ ಭಾಗದಿಂದ ಬಂದ ಜಂಗಿ ಪೈಲ್ವಾನರ ಕುಸ್ತಿ ಸ್ಪರ್ಧೆ ಹಾಗೂ ಜಿಯಾರತ್ ನೆರವೇರಿತು.
ಇದೇ ವೇಳೆ ಉರುಸ್‌ನ ಪ್ರಮುಖ ಪೇರೋಜ್ ಪಟೇಲ್ ಅವರು ಮಾತನಾಡಿ, ಜಕ್ರೀಯಾ ಅವರ ಉರುಸ್ ಶಾಂತಿ ಸೌಹಾರ್ದ ಸಂಕೇತವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ರಾಜ್ಯ ಮತ್ತು ಅನ್ಯ ರಾಜ್ಯಗಳಿಂದ ಬಂದ ಭಕ್ತಾದಿಗಳು ದರ್ಶನಾಶೀರ್ವಾದ ಪಡೆದುಕೊಳ್ಳುತ್ತಿರುವುದು ಇಲ್ಲಿನ ದರ್ಗಾದ ವಿಶೇಷತೆ ಸಾರಿದೆ ಎಂದರು.
ಇಂದಿಗೂ ಗ್ರಾಮದಲ್ಲಿ ಸೌರ್ಹಾದತೆ ಮೆರೆದಿದೆ. ಇಲ್ಲಿನ ಹಿಂದು ಮುಸ್ಲಿಂರ ಸೇರಿ ಪರಸ್ಪರ ಉರುಸ್‌ನ್ನು ಹಬ್ಬದ ರೀತಿಯಲ್ಲಿ ತಮ್ಮ ಮನೆಗಳಲ್ಲಿ ಆಚರಿಸುವ ಮೂಲಕ ದರ್ಗಾಕ್ಕೆ ಬಂದು ಹರಕೆ ತೀರಿಸುವುದು ಮತ್ತು ದರ್ಶನ ಪಡೆಯುವ ಸಾಂಪ್ರದಾಯ ಮತ್ತು ಸೌಹಾರ್ದತೆಯನ್ನು ಕಳೆದ ೬೭೦ ವರ್ಷಗಳಿಂದ ಕೈಗೊಳ್ಳುತ್ತಾ ಬಂದಿರುವುದು ದೊಡ್ಡ ಪರಂಪರೆ ಇಂದಿಗೂ ಮುಂದುವರೆದು ಬಂದಿದೆ. ಇದಕ್ಕೆ ಭಕ್ತರೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದ ಅವರು, ಇಂದು ದೇಶದಲ್ಲಿನ ಕಲುಷಿತ ವಾತಾವರಣದಲ್ಲೂ ಹಿಂದೂ ಮುಸ್ಲಿಂರು ಒಗ್ಗೂಡಿ ಈ ಉರುಸ್ ಆಚರಣೆ ಕೈಗೊಳ್ಳುತ್ತಿರುವುದು ದೇಶದ ವಿವಿಧತೆಯಲ್ಲೆ ಏಕತೆಯನ್ನು ಮರುಕಳುಸುತ್ತಿದೆ ಎಂದು ಭಕ್ತಾದಿಗಳಿಗೆ ಅವರು ಶುಭ ಹಾರೈಸಿದರು.
ಅಂಬೇವಾಡ ಗ್ರಾಮ ಸೇರಿದಂತೆ ಆಳಂದ, ಸರಸಂಬಾ, ಸಕ್ಕರಗಾ, ಹಿರೋಳಿ ಕಾಮನಳಿ ಸೇರಿದಂತೆ ತಾಲೂಕು ಜಿಲ್ಲೆ ಇನ್ನಿತರ ಭಾಗಗಳಿಂದ ಭಕ್ತಾದಿಗಳು ಉರುಸ್‌ನಲ್ಲಿ ಪಾಲ್ಗೊಂಡಿದ್ದರು.