ಪರಿಸರವನ್ನ ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ

0
46

ಬಾಗಲಕೋಟೆ: ಇಂದು ಬೆಳಿಗ್ಗೆ ರಕ್ಷಾ ಬಂಧನದ ಜೊತೆಗೆ ವೃಕ್ಷಾ ಬಂಧನ ಅಭಿಯಾನವನ್ ವಿಚಾರ ವಂತರ ವೇದಿಕೆ ಮತ್ತು ಸಾಧನಾ ಯುವ ಸಂಶ್ಥೆಯ ವತಿಯಿಂದ ಬಾಗಲಕೋಟನ ಮುಚ ಖಂಡಿಕ್ರಾಸ್‌ನ ಮೆಟ್ರಿಕಎ ನಂತರದಡಿ. ದೇವರಾಜಅರಸು ಬಾಲಕರ ವಸತಿ ನಿಲಯದಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ಶಿವಶರಣ ಪರಪ್ಪಗೋಳ ಮಾತನಾಡಿ ಇಂದು ಪರಿಸರವನ್ನ ಸಂರಕ್ಷಣೆ ಮಾಡುವ ಪಣತೊಡಬೇಕಿದೆ. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನಾವೇ ಕಾರಣರಾಗುತ್ತೇವೆ. ರಕ್ಷಾ ಬಂಧನದಿಂದಾಗಿ ಅಕ್ಕ ತಮ್ಮ, ತಂಗಿ ಅಣಂದಿರ ಮಧ್ಯೆ ಸಂಬಂಧ ಗಟ್ಟಿಗೊಳಿಸಿಕೊಳ್ಳುವ ಹಾಗೆ ನಮ್ಮಜೀವನದ ಉಸಿರಾಗಿರುವ, ನಮಗೆ ದಿನನಿತ್ಯ ಶುದ್ಧಗಾಳಿ ನೀಡುತ್ತಿರುಗಿಡ ಮರಗಳ ಜೊತೆಗೂ ನಾವು ಉತ್ತಮವಾದ ಸಂಬಂಧವನ್ನ ಬೆಳೆಸಿಕೊಳ್ಳಬೇಕಿದೆ.

Contact Your\'s Advertisement; 9902492681

ಕಾಡು ಪರಿಸರವನ್ನ ಉಳಿಸಿಬೆಳೆಸಬೇಕಿದೆ. ಇಂದುಕೆಲವರ ಸ್ವಾರ್ಥದಿಂದಗಿಡ- ಮರಗಳ ನಾಶದಿಂದಾಗಿ ಪ್ರವಾಹ, ಕಾಢು ನಾಶ, ವಾಯು ಮಾಲಿನ್ಯಇನ್ನಿತರ ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ. ಹಾಗಾಗಿ ಈಗಲೇ ಎಚ್ಚೆತ್ತು ಕೊಂಡುತಾಯಿ ಮಗುವನ್ನು ಬೆಳೆಸುವಂತೆ ನಾವು ಗಿಡ ಮರಗಳನ್ನ ಬೆಳಸಬೇಕಿದೆ. ವಿದ್ಯಾರ್ಥಿ ಯುವ ಜನರು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿಲಯದ ವಿದ್ಯಾರ್ಥಿಗಳಾದ ಶಿವಾನಂದ ಕಂಬಾರ, ಶಿವಶರಣ ಪರಪ್ಪಗೋಳ, ಅಜಯ ಲಮಾಣಿ, ಬಸನಗೌಡ, ಅಶೋಕ ಹತ್ತಿ, ಪ್ರಕಾಶ, ರಂಗನಾಥ  ಜಕರಳ್ಳಿ.ಧರ್ಮಣ್ಣ ಬದಕಣ್ಣವರ, ಲಕ್ಕಪ್ಪ ಪೂಜಾರಿ, ಪವನಕೂಮಾರ, ವಿಶ್ವನಾಥ ಹಿರೇಮಠ ಇತರರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here