ಕಲಬುರಗಿ: ಜಿಲ್ಲೆಯಲ್ಲಿ ಅತೀ ಬಿಸಿಲು ಮತ್ತು ಬಿಸಿಗಾಳಿ ಇರುವದರಿಂದ ಶಾಲೆಗೆ ಹೋಗುವ ಚಿಕ್ಕ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನಾರೋಗ್ಯ ಉಂಟಾಗುವ ತೊಂದರೆ ಆಗುವ ಸಾಧ್ಯತೆ ಇದ್ದು, ಒಂದು ವಾರದ ನಂತರ ಶಾಲಾ ಕಾಲೇಜು ಆರಂಭ ಮಾಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ಸಚೀನ ಎಸ್.ಫರತಾಬಾದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸರಕಾರಿ/ಖಾಸಗಿ ಶಾಲೆಗೆ ಹೋಗುವ ಎಲ್.ಕೆ.ಜಿ. ಯು.ಕೆ.ಜಿ. ಚಿಕ್ಕ ಮಕ್ಕಳಿಗೆ ಮತ್ತು 1ನೇ ರಿಂದ 10ನೇ ತರಗತಿ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಈಗಾಗಲೇ ಶಾಲಾ ಕಾಲೇಜು ಪ್ರಾರಂಭ ಆಗಿರುವದರಿಂದ ಕಲಬುರಗಿ ನಗರದಲ್ಲಿ ಶೇಕಡಾ 41% ಬಿಸಿಲು ಇದ್ದ ಕಾರಣ ತೊಂದರೆ ಆಗುವ ಸಾಧ್ಯತೆ ಇದ್ದು, ಕಾಲೇಜಿಗೆ ವಿದ್ಯಾರ್ಥಿಗಳು ವಾಹನದ ಮೇಲೆ ಹೋಗುವ ಸಮಯದಲ್ಲಿ ಬಿಸಿಲಿನ ಝಳ ಪಡೆಯುವ ಸಂಭವವಿದ್ದು, ಮತ್ತು ಮಕ್ಕಳಿಗೆ ಶಾಲಾ ಕಾಲೇಜಿನಲ್ಲಿ ಆಟದ ಮೈದಾನದಲ್ಲಿ ಆಟವಾಡುವ ಸಂದರ್ಭದಲ್ಲಿ ಮಕ್ಕಳಿ ಬಿಸಿಲು ತಗಲಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದ್ದು, ಇದರಿಂದ ಮಕ್ಕಳಿಗೆ ಜ್ವರ, ವಾಂತಿ ಬೇದಿ ಬರುವ ಸಂಭವವಿಸುವ ಸಾಧ್ಯತೆ ಇದೆ.
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಒಂದು ವಾರದ ನಂತರ ಶಾಲಾ ಕಾಲೇಜು ಪ್ರಾರಂಭ ಮಾಡಲು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.